LatestLeading NewsMain PostNational

ರಾಜಪಥಕ್ಕೆ ಕರ್ತವ್ಯ ಪಥ ಎಂದು ಮರುನಾಮಕರಣ ಮಾಡಲು ಕೇಂದ್ರ ನಿರ್ಧಾರ

ನವದೆಹಲಿ: ಐತಿಹಾಸಿಕ ರಾಜಪಥ ಹಾಗೂ ಸೆಂಟ್ರಲ್ ವಿಸ್ಟಾ ಹುಲ್ಲು ಹಾಸುಗಳನ್ನು ಕರ್ತವ್ಯ ಪಥ ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಈ ಮಾರ್ಗ ರೈಸಿನಾ ಹಿಲ್‌ನಲ್ಲಿರುವ ರಾಷ್ಟ್ರಪತಿ ಭವನದಿಂದ ವಿಜಯ್ ಚೌಕ್ ಹಾಗೂ ಇಂಡಿಯಾ ಗೇಟ್ ಮೂಲಕ ದೆಹಲಿಯ ರಾಷ್ಟ್ರೀಯ ಕ್ರೀಡಾಂಗಣದವರೆಗೆ ಸಾಗುತ್ತದೆ. ಇದೀಗ ಈ ಹಾದಿಯನ್ನು ಕರ್ತವ್ಯ ಪಥ ಎಂದು ಮರುನಾಮಕರಣ ಮಾಡುವ ನಿರ್ಧಾರವನ್ನು ಕೇಂದ್ರ ಪ್ರಕಟಿಸಿದೆ. ಇದನ್ನೂ ಓದಿ: ಸಮವಸ್ತ್ರ ನಿರ್ಧಾರ ಶಿಕ್ಷಣ ಹಕ್ಕು ಉಲ್ಲಂಘನೆಯಲ್ಲ – ಹಿಜಬ್ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಅಭಿಪ್ರಾಯ

ರಾಜಪಥಕ್ಕೆ ಕರ್ತವ್ಯ ಪಥ ಎಂದು ಮರುನಾಮಕರಣ ಮಾಡಲು ಕೇಂದ್ರ ನಿರ್ಧಾರ

ದೇಶದಲ್ಲಿ ಬ್ರಿಟಿಷ್ ವಸಾಹತುಶಾಹಿ ಅಂಶಗಳನ್ನು ಕೈಬಿಡುವ ಉದ್ದೇಶದಿಂದ ಈ ನಿರ್ಧಾರವನ್ನು ಮಾಡಲಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಭಾಷಣದಲ್ಲಿ, ಬ್ರಿಟಿಷರಿಗೆ ಸಂಬಂಧಿಸಿದ ಚಿಹ್ನೆಗಳನ್ನು ನಿರ್ಮೂಲನೆ ಮಾಡುವ ಅಂಶವನ್ನು ಒತ್ತಿ ಹೇಳಿದ್ದರು.

ಇತ್ತೀಚೆಗೆ ಪ್ರಧಾನಿ ನಿವಾಸವಿರುವ ರಸ್ತೆಯ ಹೆಸರನ್ನು ರೇಸ್ ಕೋರ್ಸ್ ರಸ್ತೆಯಿಂದ ಲೋಕ ಕಲ್ಯಾಣ ಮಾರ್ಗ ಎಂದು ಬದಲಿಸಲಾಯಿತು. ಕಳೆದ ವಾರ ಭಾರತೀಯ ನೌಕಾಪಡೆಯ ಧ್ವಜದಲ್ಲಿ ಉಳಿದುಕೊಂಡಿದ್ದ ವಸಾಹತುಶಾಹಿ ಕುರುಹನ್ನು ತೆಗೆದು ಹಾಕಿ, ಹೊಸ ಧ್ವಜವನ್ನು ಪರಿಚಯಿಸಲಾಯಿತು. ಇದನ್ನೂ ಓದಿ: ಬಿಸಿಸಿಐ ಶೀರ್ಷಿಕೆ ಪ್ರಾಯೋಜಕತ್ವ ಪಡೆದುಕೊಂಡ ಮಾಸ್ಟರ್ ಕಾರ್ಡ್

Live Tv

Leave a Reply

Your email address will not be published. Required fields are marked *

Back to top button