ಹುಬ್ಬಳ್ಳಿ: ದೈವಶಕ್ತಿಯಿದ್ದವರಿಗೆ ಕ್ಯಾನ್ಸರ್ (Cancer) ಗೆಲ್ಲುವ ಶಕ್ತಿಯಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ (Hubballi) ವಿವಿಧೆಡೆ ಪ್ರವಾಸ ಕಾರ್ಯಕ್ರಮ ಕೈಗೊಂಡಿರುವ ಸಿಎಂ ಬೊಮ್ಮಾಯಿ ಅವರಿಂದು ನವನಗರದಲ್ಲಿ ಕ್ಯಾನ್ಸರ್ ಆಸ್ಪತ್ರೆ (Cancer Hospital) ಸಂಸ್ಥಾಪಕ ಡಾ.ಆರ್.ಬಿ ಪಟೇಲ್ ಅವರ ಕಂಚಿನ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು. ಇದನ್ನೂ ಓದಿ: ದಿಢೀರ್ ಉರುಳಿದ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ – ತಾಯಿ, ಮಗು ದುರ್ಮರಣ
Advertisement
Advertisement
ಕ್ಯಾನ್ಸರ್ ಎಂದ ತಕ್ಷಣ ಮನುಷ್ಯ ಮಾನಸಿಕ ಒತ್ತಡಕ್ಕೆ ಸಿಲುಕುತ್ತಾನೆ. ಇದರಿಂದ ರೋಗ ನಿರೋಧಕ ಶಕ್ತಿ ಕುಗ್ಗಿಸುತ್ತದೆ. ಯಾರಿಗೆ ಮಾನಸಿಕ ಶಕ್ತಿ ದೃಢವಾಗಿದೆಯೋ, ದೈವಶಕ್ತಿಯಿದೆಯೋ ಅವರಿಗೆ ಕ್ಯಾನ್ಸರ್ ಗೆಲುವ ಶಕ್ತಿಯಿದೆ. ನಾನು ಬಹಳಷ್ಟು ಹತ್ತಿರದಿಂದ ಕ್ಯಾನ್ಸರ್ ಗೆದ್ದವರನ್ನ ನೋಡಿದ್ದೇನೆ. ನಮ್ಮ ತಾಯಿಗೂ ಕ್ಯಾನ್ಸರ್ ಇತ್ತು ಎಂದು ಸ್ಮರಿಸಿದ್ದಾರೆ. ಇದನ್ನೂ ಓದಿ: ಮದ್ವೆಗೆ ಮುಂಚೆನೇ ಮಗು- ಬಾತ್‌ರೂಂ ಕಿಟಕಿಯಿಂದ ಶಿಶು ಎಸೆದ 20ರ ಯುವತಿ!
Advertisement
Advertisement
ಕ್ಯಾನ್ಸರ್ ಬಗ್ಗೆ ಯಾರೂ ಭಯಪಡಬೇಕಿಲ್ಲ. ಕ್ಯಾನ್ಸರ್‌ನೊಂದಿಗೆ ಜನ ಬದುಕಬೇಕಿದೆ. ಕ್ಯಾನ್ಸರ್ ಆರೋಗ್ಯ ಚಿಕಿತ್ಸೆ ನೀಡುವ ವೈದ್ಯರು, ಮಾನವೀಯತೆಯಿಂದ, ತಾಳ್ಮೆಯಿಂದ, ಕರುಣೆಯಿಂದ ನಡೆದುಕೊಳ್ಳಬೇಕು. ಉತ್ತರ ಕರ್ನಾಟಕದ ರೈತರು ಹೆಚ್ಚು ತಂಬಾಕು, ಸಿಗರೇಟ್ ಅತೀ ಹೆಚ್ಚು ಸೇವನೆ ಮತ್ತು ಆಹಾರ ಪದ್ಧತಿಯಿಂದಾಗಿ ಕ್ಯಾನ್ಸರ್ ಹೆಚ್ಚಾಗಿದೆ. ಆದ್ದರಿಂದ ಕ್ಯಾನ್ಸರ್ ಆಸ್ಪತ್ರೆಗಳು ಕ್ಯಾನ್ಸರ್ ಸಂಶೋಧನಾ ಕೇಂದ್ರವಾಗಿ ಬೆಳೆಯಬೇಕು ಎಂದು ಸಲಹೆ ನೀಡಿದ್ದಾರೆ.
ಹುಬ್ಬಳ್ಳಿ ಈಗ ಬಹಳಷ್ಟು ಬೆಳೆದಿದೆ. ಆದ್ರೆ ನಾಗರಿಕ ಸಮಾಜ ಮರೆಯಾಗಿದೆ. ಇಲ್ಲಿ ಬೆಳೆದಂತಹ ಒಬ್ಬ ಹುಡುಗ ಇಂದು ಸಿಎಂ ಆಗಿದ್ದಾನೆ. ನಿಮ್ಮ ಮಧ್ಯೆ ನಿಮ್ಮ ಜೊತೆಗೆ ಬೆಳದ ಹುಡುಗ ಸಿಎಂ ಆಗಿ ಏನು ಮಾಡತ್ತಿದ್ದಾನೆ ಅಂತಾ ನೋಡಿ… ನಾನು ಒಳ್ಳೆಯದನ್ನು ಮಾಡಿದಾಗ ಬೆನ್ನು ತಟ್ಟಿ ತಪ್ಪು ಮಾಡಿದಾಗ ಕಿವಿ ಹಿಂಡಿ.. ಆದ್ರೆ ನೀವು ಏನೂ ಮಾಡೋದಿಲ್ಲ. ಸ್ವಲ್ಪ ಆಕ್ಟೀವ್ ಆಗ್ಬೇಕು ಎಂದು ಸಲಹೆ ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k