ಧಾರವಾಡ: ಬಿಜೆಪಿ ಪಕ್ಷ ಬಲಿಷ್ಠವಾಗಬೇಕೆಂಬ ಬಿಜೆಪಿ ವರಿಷ್ಠರು ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯರ ನಿರೀಕ್ಷೆಯನ್ನು ಹುಸಿಗೊಳಿಸಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
Advertisement
ಹುಬ್ಬಳ್ಳಿಯಲ್ಲಿ ನೂತನ ಕಾರ್ಮಿಕ ಭವನ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸರ್ಕಾರದ ಮೇಲೆ ವಿಶ್ವಾಸವಿಟ್ಟು ನಿರ್ಣಯ ಕೈಗೊಂಡ ಕಾರ್ಯಕಾರಿಣಿ ಸಮಿತಿ ಸದಸ್ಯರಿಗೆ ಧನ್ಯವಾದಗಳು. ನಮ್ಮ ಸರ್ಕಾರದ ಮೇಲೆ ವಿಶ್ವಾಸವಿಟ್ಟು ಮುನ್ನಡೆಯಿರಿ ಎಂದು ಬೆನ್ನುತಟ್ಟಿದ್ದಾರೆ. ಪಕ್ಷ ಬಲಿಷ್ಠವಾಗಬೇಕೆಂಬ ನಿಮ್ಮ ನಿರೀಕ್ಷೆಯನ್ನು ಹುಸಿಗೊಳಿಸುವುದಿಲ್ಲ ಎಂದು ಭರವಸೆ ನೀಡಿದರು.
Advertisement
ಕಾರ್ಯಕಾರಿಣಿಯಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯಾಗಿಲ್ಲ. ಅರುಣ್ ಸಿಂಗ್ ಮತ್ತು ಕಟೀಲ್ ನೇತೃತ್ವದಲ್ಲಿ ಕಾರ್ಯಕಾರಿಣಿ ಯಶಸ್ವಿಯಾಗಿ ನಡೆಯುತ್ತಿದೆ. ವರಿಷ್ಠರಿಗೆ ಇರುವ ಸ್ಪಷ್ಟತೆಯನ್ನು ಅರುಣ್ ಸಿಂಗ್ ಅವರು ಕಾರ್ಯಕಾರಿಣಿಯಲ್ಲಿ ವ್ಯಕ್ತಪಡಿಸಿದ್ದಾರೆ. ಮೊದಲಿನಿಂದಲೂ ನನ್ನ ಮೇಲೆ ವರಿಷ್ಠರಿಗೆ ವಿಶ್ವಾಸವಿದೆ ಎಂದರು. ಇದನ್ನೂ ಓದಿ: ಕರ್ನಾಟಕ ಬಂದ್‍ಗೆ ಎರಡೇ ದಿನ ಬಾಕಿ – ಹಲವು ವಲಯಗಳಿಂದ ಇನ್ನು ಸಿಕ್ಕಿಲ್ಲ ಪರಿಪೂರ್ಣ ಬೆಂಬಲ
Advertisement
Advertisement
ಹುಬ್ಬಳ್ಳಿ ಧಾರವಾಡ ಮಹಾನಗರ ಘಟಕ ಅಧ್ಯಕ್ಷ ಸ್ಥಾನಕ್ಕೆ ಅರವಿಂದ ಬೆಲ್ಲದ ರಾಜೀನಾಮೆ ಕೊಟ್ಟಿರೋ ವಿಚಾರವಾಗಿ ಪ್ರತಿಕ್ರಿಯಿಸಿ, ಅರವಿಂದ ಬೆಲ್ಲದ ಮಹಾನಗರ ಘಟಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ವಿಚಾರ ನನಗೆ ಗೊತ್ತಿಲ್ಲ. ಅರವಿಂದ ಅವರು ಸಿಕ್ಕ ಕೂಡಲೇ ಅದರ ಬಗ್ಗೆ ವಿಚಾರಿಸುತ್ತೇನೆ ಎಂದು ನುಡಿದರು. ಇದನ್ನೂ ಓದಿ: ಭಾರತದ ಮಹಿಳಾ ಯುವ ಉದ್ಯಮಿ ಪಂಖೂರಿ ಶ್ರೀವಾಸ್ತವ ಹೃದಯ ಸ್ತಂಭನದಿಂದ ನಿಧನ
ರಮೇಶ್ ಜಾರಕಿಹೊಳಿ ದೆಹಲಿ ಪ್ರವಾಸ ವಿಚಾರವಾಗಿ ಮಾತನಾಡಿ, ಯಾರು ಎಲ್ಲಿಗೆ ಬೇಕಾದರು ಹೋಗುವ ಸ್ವಾತಂತ್ರ್ಯವಿದೆ ಎಂದರು.
ಹುಬ್ಬಳ್ಳಿ ನಗರದ ಕೃಷ್ಣಾಪುರದಲ್ಲಿ ನಿರ್ಮಾಣವಾದ ನೂತನ ಕಟ್ಟಡ ಕಾರ್ಮಿಕ ಭವನ. 7.50 ಕೋಟಿ ರೂ. ವೆಚ್ಚದಲ್ಲಿ ಭವನ ನಿರ್ಮಿಸಲಾಗಿದ್ದು, ಈ ಭವನದ ಉದ್ಘಾಟನೆ ಜೊತೆಗೆ ಮೂರು ಶ್ರಮಿಕ ಸಂಜೀವಿನಿ ಮೊಬೈಲ್ ಕ್ಲಿನಿಕ್ ವಾಹನಗಳಿಗೆ ಚಾಲನೆ ನೀಡಿದ್ದಾರೆ. ಸಚಿವರಾದ ಶಿವರಾಂ ಹೆಬ್ಬಾರ, ಎಸ್.ಟಿ.ಸೋಮಶೇಖರ್, ಆನಂದ್ ಸಿಂಗ್ ಹಾಗೂ ಸಿ.ಸಿ.ಪಾಟೀಲ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.