– ಓಮಿಕ್ರಾನ್ ಬಗ್ಗೆ ರಾಜ್ಯ ಸರ್ಕಾರ ತುರ್ತು ಕ್ರಮಕೈಗೊಳ್ಳುತ್ತಿದೆ
– ಲಾಕ್‍ಡೌನ್ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ
ದಾವಣಗೆರೆ: ಓಮಿಕ್ರಾನ್ ಬಗ್ಗೆ ರಾಜ್ಯ ಸರ್ಕಾರ ತುರ್ತು ಕ್ರಮಕೈಗೊಳ್ಳುತ್ತಿದ್ದು, ಹೊರ ದೇಶಗಳಿಂದ ಬಂದವರನ್ನ ಪರೀಕ್ಷೆಗೆ ಒಳಪಡಿಸಲಾಗಿದೆ. ಶಾಲಾ ಕಾಲೇಜ್‍ಗಳಿಗೆ ರಜೆ ನೀಡುವ ಅಗತ್ಯವೇ ಇಲ್ಲ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
Advertisement
ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಓಮಿಕ್ರಾನ್ ಬಗ್ಗೆ ರಾಜ್ಯ ಸರ್ಕಾರ ತುರ್ತು ಕ್ರಮಕೈಗೊಳ್ಳುತ್ತಿದೆ. ಹೊರ ದೇಶಗಳಿಂದ ಬಂದವರನ್ನ ಪರೀಕ್ಷೆಗೆ ಒಳಪಡಿಸಲಾಗಿದೆ. ಈಗಾಗಲೇ ಕೇರಳದಿಂದ ಪ್ರತಿಯೊಬ್ಬರನ್ನ ಕೋವಿಡ್ ಟೆಸ್ಟ ಮಾಡಲಾಗುತ್ತಿದೆ. ಲಾಕ್‍ಡೌನ್ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ. ಜನ ಆತಂಕ ಪಡುವ ಅಗತ್ಯವಿಲ್ಲ. ನಾವು ಈಗ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದ್ದೇವೆ. ಬುಸ್ಟರ್ ಡೋಸ್ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬೇಕು. ಈ ಬಗ್ಗೆ ನಾವು ನಿರ್ಧಾರಕೈಗೊಳ್ಳಲು ಆಗಲ್ಲ. ಶಾಲಾ ಕಾಲೇಜ್‍ಗಳಲ್ಲಿ ಕೋವಿಡ್ ಬಗ್ಗೆ ನಿಗಾ ವಹಿಸಿ ಅಂತಾ ಹೇಳಿದ್ದೇವೆ. ಶಾಲಾ ಕಾಲೇಜ್‍ಗಳಿಗೆ ರಜೆ ನೀಡುವ ಅಗತ್ಯವೇ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಓಮಿಕ್ರಾನ್ ವಕ್ಕರಿಸುವ ಭೀತಿ – ಅಂತರಾಷ್ಟ್ರೀಯ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣು
Advertisement
Advertisement
ಸೌತ್ ಅಫ್ರಿಕಾದಿಂದ ಬಂದ ವ್ಯಕ್ತಿ ವಿಭಿನ್ನ ಸೋಂಕಿನ ಲಕ್ಷಣ ಕಂಡುಬಂದಿದೆ. ಐಸಿಎಂಆರ್‍ಗೆ ಜಿನೋಮ್ ಸಿಕ್ವೇನ್ಸ್ ಟೆಸ್ಟ್‍ಗೆ ಕಳಿಸಿದ್ದೇವೆ. ಐಸಿಎಂಆರ್ ವರದಿಗಾಗಿ ಕಾಯುತ್ತಿದ್ದೇವೆ. ಕೇರಳದಿಂದ ಬಂದವರ ಮೇಲೆ ವಿಶೇಷ ನಿಗಾವಹಿಸಲಾಗುತ್ತದೆ. ಕೇರಳದಿಂದ ಬಂದ ಎಲ್ಲರಿಗೂ ಟೆಸ್ಟ್ ಕಡ್ಡಾಯವಾಗಿದೆ. ಒಂದು ವೇಳೆ ನೆಗೆಟಿವ್ ಬಂದಿದ್ದರು ಏಳು ದಿನದ ನಂತರ ಮತ್ತೇ ಟೆಸ್ಟಿಂಗ್ ಮಾಡಬೇಕು. ದಾವಣಗೆರೆ ಸೇರಿದಂತೆ ಎಲ್ಲಾ ಶಾಲಾ ಕಾಲೇಜ್‍ಗಳಲ್ಲೂ ಕೇರಳ ವಿದ್ಯಾರ್ಥಿಗಳ ಬಗ್ಗೆ ನಿಗಾವಹಿಸಲಾಗುತ್ತದೆ ಎಂದು ತಿಳಿಸಿದ್ಧಾರೆ. ಇದನ್ನೂ ಓದಿ: ಸಿಎಂ ಬಸವರಾಜ ಬೊಮ್ಮಾಯಿಯವರಿಂದ ಉತ್ತಮ ಕಾರ್ಯ ನಿರ್ವಹಣೆ: ನಿರಾಣಿ ಹೇಳಿಕೆ