ನವದೆಹಲಿ: ಭಾರತಕ್ಕೆ ಕೊರೊನಾ ವೈರಸ್‍ನ ಹೊಸ ತಳಿ ಓಮಿಕ್ರಾನ್ ವಕ್ಕರಿಸುವ ಭೀತಿ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕರ ಮೇಲೆ ಕೇಂದ್ರ ಸರ್ಕಾರ ಹದ್ದಿನ ಕಣ್ಣಿಟ್ಟಿದ್ದು ಆರ್‍ಟಿಪಿಸಿಆರ್ ಟೆಸ್ಟ್ ಕಡ್ಡಾಗೊಳಿಸಿ ಆದೇಶ ಹೊರಡಿಸಿದೆ.
ವಿಶ್ವದ 11 ದೇಶಗಳಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾಗಿದ್ದು, ಮತ್ತಷ್ಟು ದೇಶಗಳಿಗೆ ವಿಸ್ತರಿಸುವ ಸಾಧ್ಯತೆಗಳಿದೆ. ಹೀಗೆ ಕ್ಷಿಪ್ರವಾಗಿ ವ್ಯಾಪಿಸುತ್ತಿರುವ ಸೋಂಕು ಅಂತರಾಷ್ಟ್ರೀಯ ಪ್ರಯಾಣಿಕರ ಮೂಲಕ ಭಾರತಕ್ಕೂ ತಲುಪುವ ಸಾಧ್ಯತೆ ಹಿನ್ನೆಲೆ ಅಂತರಾಷ್ಟ್ರೀಯ ಪ್ರಯಾಣಿಕರಿಗಾಗಿ ಕೆಲವು ಮಾರ್ಗಸೂಚಿಗಳನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ.
Advertisement
Advertisement
ಆರೋಗ್ಯ ಇಲಾಖೆಯ ಮಾರ್ಗಸೂಚಿಯ ಪ್ರಕಾರ, ವಿದೇಶಗಳಿಂದ ಬಂದಿಳಿದ ಕೂಡಲೇ ಪ್ರಯಾಣಿಕರು ಆರ್ ಟಿಪಿಸಿಆರ್ ಟೆಸ್ಟ್ ಗೆ ಒಳಪಡಬೇಕು, ನೆಗೆಟಿವ್ ರಿಪೊರ್ಟ್ ಬಂದಲ್ಲಿ ಏಳು ದಿನ ಮನೆಯಲ್ಲಿ ಕ್ವಾರಂಟೈನ್ ಆಗಬೇಕು, ಎಂಟನೇ ದಿನ ಮರು ಪರೀಕ್ಷೆಗೆ ಒಳಪಡಬೇಕು ಎರಡನೇ ಬಾರಿಯೂ ನೆಗೆಟಿವ್ ಬಂದಲ್ಲಿ ಮತ್ತೆ ಏಳು ದಿನ ಆರೋಗ್ಯದ ಮೇಲೆ ನಿಗಾ ವಹಿಸಬೇಕು. ಈ ಸಂದರ್ಭದಲ್ಲಿ ಪಾಸಿಟಿವ್ ಬಂದಲ್ಲಿ ಕೊವೀಡ್ ಮಾರ್ಗಸೂಚಿ ಪಾಲನೆ ಮಾಡಬೇಕು ಎಂದು ತಿಳಿಸಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಇಲ್ಲ, ವದಂತಿ ಹಬ್ಬಿಸಿದ್ರೆ ಕಠಿಣ ಕ್ರಮ: ಡಾ. ಕೆ. ಸುಧಾಕರ್
Advertisement
Advertisement
ಒಂದು ವೇಳೆ ವಿಮಾನ ನಿಲ್ದಾಣದಲ್ಲಿ ನಡೆಸಲಾದ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಲ್ಲಿ ಜಿನೋಮಿಕ್ ಟೆಸ್ಟ್ ಗೆ ಕಳುಹಿಸಿ ಪ್ರತ್ಯೇಕವಾಗಿರಬೇಕು, ವರದಿಯಲ್ಲಿ ಹೊರ ತಳಿ ಸೋಂಕು ಪತ್ತೆಯಾದಲ್ಲಿ ಸರ್ಕಾರದ ಮಾರ್ಗಸೂಚಿಗಳ ಪಾಲನೆ ಕಡ್ಡಾಯ ಎಂದು ತಿಳಿಸಿದೆ. ಇದನ್ನೂ ಓದಿ: ವಿದೇಶಗಳಲ್ಲಿ ಓಮಿಕ್ರಾನ್ ಅಬ್ಬರ – ರಾಜ್ಯದಲ್ಲಿ ವ್ಯಾಕ್ಸಿನ್ ಪಡೆಯಲು ಕ್ಯೂ ನಿಂತ ಜನ
ಈಗಾಗಲೇ 11 ದೇಶಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈ ದೇಶಗಳನ್ನು ಅಪಾಯಕಾರಿ ದೇಶಗಳೆಂದು ಗುರುತಿಸಿದೆ. ಹೀಗೆ ಅಪಾಯಕಾರಿ ದೇಶಗಳಿಂದ ಬರುವ 5% ಪ್ರಯಾಣಿಕರಿಗೆ ಆರ್ ಟಿಪಿಸಿಆರ್ ರ‍್ಯಾಂಡಮ್ ಟೆಸ್ಟ್ ಗೆ ಒಳಪಡಿಬೇಕು, ಈ ಪೈಕಿ ಯಾರಿಗಾದರೂ ವರದಿ ಪಾಸಿಟಿವ್ ಇದ್ದಲ್ಲಿ ಜಿನೋಮಿಕ್ ಟೆಸ್ಟ್ ಗೆ ಕಳುಹಿಸಿ ಕೊರೊನಾ ನಿಯಮ ಪಾಲಿಸಬೇಕು ಎಂದು ತಿಳಿಸಲಾಗಿದೆ. ಒಂದು ವೇಳೆ ನೆಗೆಟಿವ್ ವರದಿ ಇದ್ದಲ್ಲಿ 14 ದಿನ ಸ್ವಯಂ ಆಗಿ ಆರೋಗ್ಯದ ಮೇಲೆ ಪ್ರಯಾಣಿಕರು ನಿಗಾ ವಹಿಸಬೇಕು ಎಂದು ಆರೋಗ್ಯ ಸೂಚಿಸಿದೆ.