ಹುಬ್ಬಳ್ಳಿ: ಬಡತನಕ್ಕೆ, ಆಸೆ ಆಮಿಷಕ್ಕೆ ಮತಾಂತರ ಆಗುವುದು ತಪ್ಪು. ಮತಾಂತರ ಅನ್ನೋದು ಸಮಾಜಕ್ಕೆ ಒಳ್ಳೆಯದಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2 ವರ್ಷದ ನಂತರ ನಾಳೆ ಬೆಳಗಾವಿ ಅಧಿವೇಶನ ನಡೆಯುತ್ತಿದೆ. ಎಲ್ಲ ತಯಾರಿ ಮಾಡಿದ್ದೇವೆ. ಅಭಿವೃದ್ಧಿ ಪರವಾಗಿ, ಅರ್ಥಪೂರ್ಣವಾಗಿ ಚರ್ಚೆ ಆಗಬೇಕು. ಸಮಗ್ರ ಅಭಿವೃದ್ಧಿ ಚರ್ಚೆಗೆ ನಾವು ಸ್ವಾಗತ ಮಾಡುತ್ತೇವೆ ಎಂದರು. ಇದನ್ನೂ ಓದಿ: ಯುಪಿಯಲ್ಲಿ ಕಾಣೆಯಾಗಿದ್ದ ಯೋಗಿನಿ ವಿಗ್ರಹ ಯುಕೆಯಲ್ಲಿ ಪತ್ತೆ
Advertisement
Advertisement
ಮತಾಂತರ ಕಾಯ್ದೆ ವಿಚಾರ ಹಿನ್ನೆಲೆ ನಾನು ಅವರಿಗೆ ಸ್ಪಷ್ಟವಾಗಿ ಹೇಳಿದ್ದೇನೆ. ಕ್ರಿಶ್ಚಿಯನ್, ಮುಸ್ಲಿಂ, ಬೌದ್ಧ ಸೇರಿದಂತೆ ಸಿಖ್ ಧರ್ಮದವರು ಆತಂಕ ಪಡಬಾರದು. ಇವೆಲ್ಲ ಸಂವಿಧಾನವಾಗಿ ಇರುವ ಧರ್ಮಗಳು. ಅವರಿಗೆ, ಆ ಜನಾಂಗಕ್ಕೆ ಯಾವುದೇ ಆತಂಕ ಬೇಡ. ಅವರ ಪ್ರಾರ್ಥನೆ, ಅವರ ನಂಬಿಕೆಗೆ ಯಾವುದೇ ತೊಂದರೆಯಾಗುವುದಿಲ್ಲ. ಬಡತನಕ್ಕೆ, ಆಸೆ ಆಮಿಷಕ್ಕೆ ಮತಾಂತರ ಆಗುವುದು ತಪ್ಪು. ಈ ಕುರಿತಂತೆ ಬಹಳ ದೊಡ್ಡ ಚರ್ಚೆ ಆಗುತ್ತಿದ್ದು, ಕಾನೂನು ಇಲಾಖೆ ಪರಿಶೀಲನೆ ನಡೆಸುತ್ತಿದೆ ಹೇಳಿದರು.
Advertisement
Advertisement
ಬೇರೆ ಬೇರೆ ರಾಜ್ಯಗಳಲ್ಲಿ ಈ ಬಗ್ಗೆ ಕಾನೂನು ಆಗಿದೆ. ಈ ಬಗ್ಗೆ ಕಾನೂನು ಇಲಾಖೆ ಪರಿಶೀಲನೆ ಮಾಡಿ, ಕ್ಯಾಬಿನೆಟ್‍ಗೆ ಬರುತ್ತದೆ. ಕರುಡಿಗೆ ಒಪ್ಪಿಗೆ ಕೊಟ್ಟು, ಅದನ್ನು ನಾವು ಅಧಿವೇಶನದಲ್ಲಿ ತರುತ್ತೇವೆ. ಮತಾಂತರ ಅನ್ನೋದು ಸಮಾಜಕ್ಕೆ ಒಳ್ಳೆಯದಲ್ಲ, ಅದಕ್ಕೆ ಒಳಗಾಗಬಾರದು. ಮನೆತನ, ಕುಟುಂಬಕ್ಕೆ ಬಹಳ ದೊಡ್ಡ ಕಷ್ಟ ಆಗುತ್ತದೆ. ಆ ಎಲ್ಲ ಹಿನ್ನೆಲೆಯಲ್ಲಿ ಕಾನೂನು ತರಲು ನಮ್ಮ ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಡ್ಡನ ಅಡ್ಡಾದಲ್ಲಿ ಕಾಣಿಸಿಕೊಂಡ ವಾರ್ನರ್: ನೀನು ಚೆನ್ನಾಗಿದ್ದೀಯಾ ತಾನೇ ಎಂದು ಕಾಲೆಳೆದ ಕೊಹ್ಲಿ
ಇದೇ ವೇಳೆ ಪ್ರಧಾನಿ ಮೋದಿ ಟ್ವಿಟರ್ ಖಾತೆ ಹ್ಯಾಕ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಪ್ರಧಾನಿ ರಿಯಾಕ್ಟ್ ಮಾಡಿದ್ದಾರೆ. ಅದರ ವಿರುದ್ಧ ಕಾರ್ಯಾಚರಣೆ ಸಹ ಮಾಡಿದ್ದಾರೆ. ಆ ರೀತಿ ಅಲ್ಲಲ್ಲಿ ಘಟನೆಗಳು ಆಗಿವೆ. ತಾಂತ್ರಿಕ ಬಲದಿಂದ ಅವುಗಳನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿವೆ ಎಂದರು.