ಚಿಕ್ಕಬಳ್ಳಾಪುರ: ನನ್ನ ಅಪ್ಪು ನಾನು ಹೇಗೆ ಮರೆಯಲು ಸಾಧ್ಯ..? ಕನ್ನಡಿಗರ ಹೃದಯದಲ್ಲಿ ಶಾಶ್ವತವಾದ ಸ್ಥಾನ ಅಪ್ಪು ಪಡೆದಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಬಳಿ ನಡೆದ ಆರ್‌ಆರ್‌ಆರ್ ಸಿನಿಮಾ ಫ್ರೀ ರಿಲೀಸ್ ಇವೆಂಟ್‍ನಲ್ಲಿ ಮಾತನಾಡಿದ ಅವರು, ನಾನು ಯಾದಗಿರಿಯ ಸುರಪುರಕ್ಕೆ ಹೋಗಿದ್ದೆ. ಎಲ್ಲಿ ನೋಡಿದರೂ ಅಪ್ಪು ಕಾಣುತ್ತಾನೆ. ಕನ್ನಡಿಗರ ಹೃದಯದಲ್ಲಿ ಶಾಶ್ವತವಾದ ಸ್ಥಾನ ಅಪ್ಪು ಪಡೆದಿದ್ದಾರೆ. ಒಂದು ಮಾತು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಸಾಧಕನಿಗೆ ಸಾವು ಅಂತ್ಯವಲ್ಲ, ಸಾವಿನ ನಂತರವೂ ಬದುಕುವುದು ಸಾಧನೆ, ನಮ್ಮ ಅಪ್ಪು ಒಬ್ಬ ಸಾಧಕ. ಸಣ್ಣ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದಾನೆ. ಕರ್ನಾಟಕ ರತ್ನವನ್ನು ಶೀಘ್ರದಲ್ಲೇ ನಮ್ಮ ಅಪ್ಪುಗೆ ಕೊಡುತ್ತೇವೆ. ಆ ಕಾರ್ಯಕ್ರಮವನ್ನು ಸಹ ಇಷ್ಟೇ ದೊಡ್ಡ ಕಾರ್ಯಕ್ರಮ ಮಾಡುತ್ತೇವೆ. ಅಪ್ಪು ಹೆಸರು ಸೂರ್ಯ ಚಂದ್ರ ಇರುವವರೆಗೂ ಎಲ್ಲರ ಹೃದಯದಲ್ಲಿ ಶಾಶ್ವತವಾಗಿರುತ್ತೆ ಎಂದು ಹೇಳುತ್ತಾ ಭಾವುಕರಾಗಿದ್ದಾರೆ.
ಆರ್‌ಆರ್‌ಆರ್ ಸಿನಿಮಾ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯ ಸಿನಿಮಾ. ಇದು ಸ್ವಾತಂತ್ರ್ಯ ಹೋರಾಟಗಾರರ ಸಿನಿಮಾ ಆದ ಕಾರಣ ಈ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿದ್ದೇನೆ. ಬ್ರಿಟಿಷರ ವಿರುದ್ಧ ರಣಕಹಳೆ ಊದಿದ್ದು, ಮೊದಲು ಕಿತ್ತೂರು ರಾಣಿ ಚೆನ್ನಮ್ಮ. ಸ್ವಾತಂತ್ರ್ಯ ಬರಲು ತಮ್ಮ ಪ್ರಾಣವನ್ನ ಬಲಿ ನೀಡಿ ಸ್ವಾತಂತ್ರ್ಯ ನೀಡಿದ್ದಾರೆ. ಈಗ ಅಂತಹ ಸತ್ಯಗಳೆಲ್ಲವೂ ಹೊರಗೆ ಬರಬೇಕು ಯುವ ಪೀಳಿಗೆಗೆ ಸತ್ಯ ಗೊತ್ತಾಗಬೇಕು. ಆಗ ಮಾತ್ರ ಭವ್ಯ ಭಾರತವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ರಾಜಮೌಳಿಯವರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ. ಆರ್‌ಆರ್‌ಆರ್ ಸಿನಿಮಾ ಭಾರತ ದೇಶ ನೋಡಿ ಹೆಮ್ಮೆ ಪಡುತ್ತದೆ ಎನ್ನುವ ವಿಶ್ವಾಸ ನನಗಿದೆ. ನಿಜವಾದ ದೇಶ ಪ್ರೇಮಿಗಳು ಆರ್‌ಆರ್‌ಆರ್ ಸಿನಿಮಾ ಥಿಯೇಟರ್‌ಗೆ ಹೋಗಿ ನೋಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಹಾಲಿವುಡ್ ಖ್ಯಾತ ನಟಿ ಜೊತೆ ಸೆಕ್ಸ್ ಮಾಡಿದ್ದೇನೆ ಎಂಬ ಹೇಳಿಕೆಗೆ 50 ಲಕ್ಷ ಆಫರ್: ಖ್ಯಾತ ನಟ ಬಿಚ್ಚಿಟ್ಟ ರಹಸ್ಯ
ಆರ್‌ಆರ್‌ಆರ್ ಸಿನಿಮಾ ಅತ್ಯಂತ ಯಶಸ್ವಿಯಾಗಲಿ. ಈ ಸಿನಿಮಾವನ್ನ ಸ್ವಾತಂತ್ರ್ಯ ಹೋರಾಟಗಾರರಿಗೆ ಅರ್ಪಣೆ ಮಾಡುವಂತೆ ಕೋರಿದರು. ಭಗತ್ ಸಿಂಗ್, ಸುಭಾಷ್ ಚಂದ್ರಬೋಸ್, ಚಂದ್ರಶೇಖರ್ ಆಜಾದ್, ಲಾಲಾ ಲಜಪತ್ ರಾಯ್, ಕಿತ್ತೀ ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಇವರೆಲ್ಲರಿಗೂ ಈ ಸಿನಿಮಾ ಅರ್ಪಣೆ ಮಾಡುವಂತೆ ಮನವಿ ಮಾಡಿಕೊಂಡರು.