ಬೆಂಗಳೂರು: ಮೇಕೆದಾಟು ಯೋಜನೆಯಿಂದ ಬೆಂಗಳೂರಿಗೆ ನೀರು ಕೊಡುವ ವ್ಯವಸ್ಥೆ ಬಿಜೆಪಿಯಿಂದ ಮಾತ್ರ ಸಾಧ್ಯವಿದೆ ಎನ್ನುವ ವಿಶ್ವಾಸ ಬೆಂಗಳೂರಿನ ಜನತೆಗೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಯಲ್ಲಿ ಬೆಂಗಳೂರಿಗೆ ಕುಡಿಯುವ ನೀರಿಗಾಗಿ 2 ಟಿಎಂಸಿ ನೀರನ್ನು ಒದಗಿಸಲು ಡಿಪಿಆರ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಉತ್ತರ ಭಾಗದ ನೀರಿನ ಸಮಸ್ಯೆಯನ್ನು ಇದರಿಂದ ಬಗೆಹರಿಸಲು ಸಾಧ್ಯ. ನಾನು ನೀರಾವರಿ ಸಚಿವನಿದ್ದಾಗ ಮೇಕೆದಾಟು ಯೋಜನೆ 1996 ರಲ್ಲಿ ಪ್ರಾರಂಭವಾಯಿತು. ಈಗ ಮಾಡುತ್ತಿರುವ ಪ್ರತಿಭಟನೆಯಿಂದಲ್ಲ ಅಂತ ಕಾಂಗ್ರೆಸ್ ಪಾದಯಾತ್ರೆಯನ್ನು ಲೇವಡಿ ಮಾಡಿದರು.
Advertisement
ಕೇಂದ್ರ ರಸ್ತೆ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಸಚಿವರಾದ @nitin_gadkari ಅವರು ಮಂಗಳೂರಿನಲ್ಲಿ ಇಂದು 3,163 ಕೋಟಿ ರೂ.ಗಳ ವೆಚ್ಚದ 164 ಕಿ.ಮೀ ಉದ್ದದ 15 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. pic.twitter.com/vrDGGbCJwJ
— Basavaraj S Bommai (@BSBommai) February 28, 2022
Advertisement
1996ರಲ್ಲಿ ಕರ್ನಾಟಕ ವಿದ್ಯುತ್ ನಿಗಮ ಯೋಜನಾ ವರದಿಯನ್ನು ತಯಾರು ಮಾಡಿತ್ತು. ಅದು ವಿದ್ಯುತ್ ಉತ್ಪಾದನೆಯ ನಾಲ್ಕು ಯೋಜನೆಗಳಲ್ಲಿ ಪೈಕಿ ಮೇಕೆದಾಟು ಒಂದು. ಕೇಂದ್ರ ಸರ್ಕಾರದಿಂದ ಆಗಬೇಕೆಂಬ ಜಿಜ್ಞಾಸೆಗೆ ಒಳಗಾಗಿ ಸ್ವಲ್ಪ ದಿನ ವಿಳಂಬವಾಯಿತು. ಡಿಪಿಆರ್ ಮರುನಾಮಕರಣ ಮಾಡಿ ಒಂದೇ ಸಾರಿ ನೀರು ಸಂಗ್ರಹ ಮಾಡಿದರೆ ಉಳಿಯುತ್ತದೆ ಎಂದು ಡಿಪಿಆರ್ ಗೆ ಹೊಸ ಸ್ವರೂಪ ನೀಡಿ ಕುಡಿಯುವ ನೀರಿಗೆ ಈ ಯೋಜನೆಯನ್ನು ಸಿದ್ಧಮಾಡಿದ್ದೆವು ಎಂದರು.
Advertisement
Happy to announce #JalShakti (Hydro Power) project that will generate electricity from water flowing along the National Highways. Robust development in Karnataka will be seen by implementing Jal Shakti project along all the highways in state.@nitin_gadkari
— Basavaraj S Bommai (@BSBommai) February 28, 2022
Advertisement
ಮುಂದೆ ಬಂದವರು ಅದನ್ನು ಮುಂದುವರೆಸಲಿಲ್ಲ. ಡಿಪಿಆರ್ ಮಾಡದೇ ಐದು ವರ್ಷ ಕಳೆದರು. ಅದನ್ನು ಮಾಡಲು ಸುಲಭವಿತ್ತು. ಅರಣ್ಯ ಮುಳುಗದಂತೆ ನೋಡಿಕೊಂಡು ಬೆಂಗಳೂರಿಗೆ ನೀರು ಒದಗಿಸುವಂತೆ ಮಾಡಬಹುದಿತ್ತು. ಸಮ್ಮಿಶ್ರ ಸರ್ಕಾರ ಬಂದಾಗ ಡಿಪಿಆರ್ ಆಗಿದೆ. ಈಗ ತಮಿಳುನಾಡು ಕರ್ನಾಟಕದ ನಡುವೆ ವಿವಾದವಾಗಿ ಕುಳಿತಿದೆ. ಸುಲಭವಾಗಿ ಮಾಡುವುದನ್ನು ಮಾಡದೆ, ಜಟಿಲಗೊಳಿಸಿ ಈಗ ಬೆಂಗಳೂರಿನ ನೀರಿನ ಸಲುವಾಗಿ ಹೋರಾಟ ಮಾಡುತ್ತೇವೆ ಎನ್ನುವುದು ಎಷ್ಟರ ಮಟ್ಟಿಗೆ ಸರಿ? ಯಾವ ನೈತಿಕತೆ ಇದೆ. ಇದನ್ನು ಬೆಂಗಳೂರಿನ ಜನ ಅರ್ಥಮಾಡಿಕೊಂಡಿದ್ದಾರೆ. ಹೀಗಾಗಿ ಯಾರೂ ಕೂಡ ಈ ಹೋರಾಟದ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿದರು. ಇದನ್ನೂ ಓದಿ: ಉಕ್ರೇನ್‍ನಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ಸಾವು
ಬೆಂಗಳೂರಿಗೆ ನೀರು ಒದಗಿಸುವುದಾದರೆ ಬಿಜೆಪಿ ಸರ್ಕಾರಕ್ಕೆ ಮಾತ್ರ ಸಾಧ್ಯ. ಕಾವೇರಿ 4 ನೇ ಹಂತ ಮಾಡಿದ್ದು, 5 ನೇ ಹಂತ ಆಗುತ್ತಿದೆ. ಬರುವ ದಿನಗಳಲ್ಲಿ ಮೇಕೆದಾಟಿನಿಂದ ಬೆಂಗಳೂರಿಗೆ ನೀರು ಕೊಡುವ ವ್ಯವಸ್ಥೆ ಬಿಜೆಪಿಯಿಂದ ಮಾತ್ರ ಸಾಧ್ಯವಿದೆ ಎಂದರು. ಇದನ್ನೂ ಓದಿ: ಕೀವ್‍ಗೆ ಮುನ್ನುಗ್ಗುತ್ತಿದೆ 64 ಕಿ.ಮೀ ಉದ್ದದ ರಷ್ಯಾ ಸೇನೆ