ಹುಬ್ಬಳ್ಳಿ: ನಾಳೆಯಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಹಿನ್ನೆಲೆ ರಾಜ್ಯಾದ್ಯಂತ ಪರೀಕ್ಷೆಗೆ ಎಲ್ಲ ಸಿದ್ಧತೆ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ಪರೀಕ್ಷೆ ಬರೆಯಿರಿ ನಿಮ್ಮ ಮುಂದಿನ ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಭಕೋರಿದ್ದಾರೆ.
ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಹಿಜಬ್ ವಿಚಾರ ಕೋರ್ಟ್‍ನಲ್ಲಿ ತೀರ್ಪು ಬಂದಿದೆ. ತೀರ್ಪು ಬಂದ ನಂತರ ವಿವಾದಾತ್ಮಕ ಹೇಳಿಕೆ ನೀಡುವ ಅವಶ್ಯಕತೆ ಇಲ್ಲ ಎಂದಿದ್ದರೆ. ಇದನ್ನೂ ಓದಿ: ಜೋಗಿಮಟ್ಟಿ ಗಿರಿಧಾಮಕ್ಕೆ ಕಿಡಿಗೇಡಿಗಳಿಂದ ಬೆಂಕಿ – ಅಪಾರ ಸಸ್ಯಕಾಶಿ ಸುಟ್ಟು ಭಸ್ಮ
ಇದೇ ವೇಳೆ ಜಲ ವಿವಾದ ಬಗ್ಗೆ ದೆಹಲಿಗೆ ನಿಯೋಗ ಕೊಂಡುಯ್ಯುವ ಬಗ್ಗೆ ಚಿಂತನೆ ನಡೆದಿದೆ. ಅಂತರಾಜ್ಯ ಜಲ ವಿವಾದ ಶೀಘ್ರದಲ್ಲಿಯೇ ಬಗೆಹರಿಯುತ್ತದೆ. ಕಾನೂನಾತ್ಮಕ ರೀತಿಯಲ್ಲಿ ಕೆಲವು ನ್ಯಾಯಲಯಗಳಿಂದ ನಮಗೆ ಪರಿಹಾರ ಕಂಡುಕೊಳ್ಳಬೇಕಿದೆ. ಕೇಂದ್ರದಿಂದ ಸಹ ಹಲವು ಅನುಮತಿಗೆ ಸಿದ್ಧತೆ ಮಾಡಿಕೊಳ್ಳಲು ಹೇಳಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೂಲ ಕಾಂಗ್ರೆಸ್‍ನವರು ಈ ರೀತಿ ಮಾತಾಡಲ್ಲ, ಸಿದ್ದರಾಮಯ್ಯ ಕನ್ವರ್ಟ್ ಕಾಂಗ್ರೆಸ್: ಬಿ.ಸಿ ನಾಗೇಶ್
30ರಂದು ಬಜೆಟ್ ಅಧಿವೇಶನ ಮುಗಿಯುತ್ತದೆ. ಬಜೆಟ್‍ನಲ್ಲಿ ಘೋಷಣೆಯಾದ ಎಲ್ಲವೂ ಅನುಷ್ಠಾನಕ್ಕೆ ಬರುವಂತೆ ಸೂಚನೆ ನೀಡಿದ್ದೇನೆ. ಹಣಕಾಸಿನ ನೆರವು ಆಗಬೇಕು. ಈ ನಿಟ್ಟಿನಲ್ಲಿ ಸಮಿತಿ ರಚನೆ ಆಗಿದೆ. ಕೈಗಾರಿಕೆಯ ಅಭಿವೃದ್ಧಿಗಾಗಿ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ. ಇದು ಅಭಿವೃದ್ಧಿ ಕಾಲ ಆಗಿರುವುದರಿಂದ ಆದಷ್ಟು ಬೇಗ ಅಭಿವೃದ್ಧಿಗೆ ವೇಗ ಹೆಚ್ಚಲಿದೆ. ಎರಡು ವರ್ಷಗಳ ಕಾಲ ಕೋವಿಡ್ ಇದ್ದ ಕಾರಣ ಯಾವುದೇ ಅಭಿವೃದ್ಧಿ ಆಗಿಲ್ಲ. ಇದೀಗ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಲಿದ್ದೇವೆ ಎಂದಿದ್ದಾರೆ.