ಲಿಂಗಾಯತರಿಗೆ ಶೇ.7, ಒಕ್ಕಲಿಗರಿಗೆ ಶೇ.6ರಷ್ಟು ಮೀಸಲಾತಿ – SC ಒಳ ಮೀಸಲಾತಿಗೆ ಸಂಪುಟ ಅಸ್ತು

Public TV
2 Min Read
BASAVARAJ BOMMAI 1 3

ಬೆಂಗಳೂರು: ಚುನಾವಣೆ ಘೋಷಣೆಗೆ ಕೆಲವೇ ದಿನಗಳು ಇರುವ ಹೊತ್ತಿನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಅವರು ಒಕ್ಕಲಿಗರು, ಲಿಂಗಾಯತ ಪಂಚಮಸಾಲಿ, ಎಸ್ಸಿ ಸಮುದಾಯಗಳಿಗೆ ಒಳ ಮೀಸಲಾತಿಯ ಗಿಫ್ಟ್‌ ಕೊಟ್ಟಿದ್ದಾರೆ.

ಸಂಪುಟ ಸಭೆಯ ಬಳಿಕ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದು, ಈಗ ಅದು ಅನುಷ್ಟಾನದಲ್ಲಿ ಇದೆ. 9 ಶೆಡ್ಯೂಲ್ ಗೆ ಕಳುಹಿಸಿ ಕೊಟ್ಟಿದ್ದೇವೆ. ಒಳ ಮೀಸಲಾತಿಗೆ ಸಾಕಷ್ಟು ಹೋರಾಟ ನಡೆದಿತ್ತು. ಸ್ಪೃಶ್ಯರು, ಅಸ್ಪೃಶ್ಯರು ಸೇರಿ ಒಳಗೊಂಡಂತೆ ಎಸ್ಸಿಗಳಲ್ಲಿ 101 ಪಂಗಡಗಳಿವೆ. ಭೋವಿ, ಲಂಬಾಣಿ, ಕೊರಚ, ಕೊರ್ಮ ಮೂಲ ಪರಿಶಿಷ್ಟ ಜಾತಿಯಲ್ಲಿದ್ದಾರೆ. ಎಸ್ಸಿ ಮೀಸಲಾತಿಯಲ್ಲಿ ಎಲ್ಲರಿಗೂ ನ್ಯಾಯ ಸಿಗಬೇಕು ಆರ್ಟಿಕಲ್ 341/2 ಅನ್ವಯ ನಾಲ್ಕು ಗುಂಪುಗಳಿಗೂ ಎಸ್ಸಿ ಲೆಫ್ಟ್, ರೈಟ್, ಅಸ್ಪೃಶ್ಯರು, ಇತರರು, ಎಡ‌ಕ್ಕೆ ಶೇ.6, ಬಲಕ್ಕೆ ಶೇ.5.5, ಸ್ಪೃಶ್ಯರು ಶೇ.4.5 ಹಾಗೂ ಇತರರಿಗೆ ಶೇ.1 ರಷ್ಟು ಮೀಸಲಾತಿ ನೀಡಲಾಗಿದೆ.  ಇದನ್ನೂ ಓದಿ: ವಿಜಯಪುರ ಲಾಡ್ಜ್‌ನಲ್ಲಿ ಎರಡು ಶವ ಪತ್ತೆ: ಸ್ಥಳಕ್ಕೆ ಎಸ್ಪಿ ಭೇಟಿ

ರಾಜ್ಯದಲ್ಲಿ ಸ್ವತಂತ್ರ ಬಂದ ನಂತರ ಸಾಮಾಜಿಕವಾಗಿ ಅನೇಕ ನಿರ್ಣಯಗಳನ್ನ ಪ್ರಮುಖವಾಗಿ ತಗೆದುಕೊಳ್ಳಲಾಗಿದೆ. ಎಲ್ಲಾ ಸಮುದಾಯದಲ್ಲೂ ನಿರೀಕ್ಷೆಗಳು ಜಾಸ್ತಿ ಆಗಿದೆ. ನಾವು ವಿದ್ಯಾವಂತರಾಗಬೇಕು, ಉದ್ಯೋಗ ಪಡೆಯಬೇಕು ಎಂಬ ಆಕಾಂಕ್ಷೆ ಹೆಚ್ಚಿದೆ. ಬಹಳಷ್ಟು ಬೇಡಿಕೆಗಳೊಂದಿಗೆ ಹೋರಾಟಗಳು ನಡೆಯುತ್ತಿವೆ. ಎಲ್ಲಾ ಸಮುದಾಯಗಳ ಆಶೋತ್ತರಗಳನ್ನ ಈಡೇರಿಸಲು ಮುಂದಾದರೆ ಜೇನುಗೂಡಿಗೆ ಕೈ ಹಾಕಿದಂತೆ ಎಂಬ ಭಾವನೆ ಇದೆ. ಈಗಾಗಲೇ ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಈಗ ಅದು ಅನುಷ್ಟಾನದಲ್ಲಿ ಇದೆ. ಇದನ್ನೂ ಓದಿ:  ಬಿಜೆಪಿಯವರು ಅವಹೇಳನಕಾರಿ ಭಾಷಣ ಮಾಡಿಲ್ವಾ: ದಿನೇಶ್ ಗುಂಡೂರಾವ್ ಪ್ರಶ್ನೆ

BASAVARAJ BOMMAI 2 1

3A 3B ನಲ್ಲಿ ಒಕ್ಕಲಿಗ ಅಂಡ್ ಹಾಗೂ ಇತರರು, ಲಿಂಗಾಯತ ಪಂಚಮಸಾಲಿ ಹಾಗೂ ಇತರರಿದ್ದು, ಒಕ್ಕಲಿಗರ ಮೀಸಲಾತಿಯನ್ನು 4 ರಿಂದ ಶೇ.6ಕ್ಕೆ, ಲಿಂಗಾಯತ ಪಂಚಮಸಾಲಿಗೆ ಇದ್ದ ಶೇ.5 ಮೀಸಲಾತಿ ಶೇ.7ಕ್ಕೆ ಹೆಚ್ಚಾಗಲಿದೆ. ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕಾಡು ಕುರುಬ, ಗೊಂಡ ಕುರುಬ ಈಗಾಗಲೇ ಹೋಗಿದೆ. ಒಳಮೀಸಲಾತಿ ಕಲ್ಪಿಸುವ ಬಗ್ಗೆ ಕೇಂದ್ರಕ್ಕೆ ಶಿಫಾರಸು ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.

ಗುಂಪು 1 – ರಲ್ಲಿ
ಎಡಗೈ ಸಮುದಾಯದ ಗುಂಪಿಗೆ ಶೇ 6 ಒಳ ಮೀಸಲಾತಿ
(ಮಾದಿಗ, ಆದಿದ್ರಾವಿಡ, ಬಂಬಿ ಮತ್ತು ಇತರ ಸಂಬಂಧಿತ ಜಾತಿಗಳು)

ಗುಂಪು 2-ರಲ್ಲಿ
ಬಲಗೈ ಸಮುದಾಯದ ಗುಂಪಿಗೆ ಶೇ.5.5 ಒಳ ಮೀಸಲಾತಿ
(ಹೊಲೆಯ, ಆದಿಕರ್ನಾಟಕ, ಛಲವಾದಿ ಮತ್ತು ಇತರೆ ಸಂಬಂಧಿಸಿದ ಜಾತಿಗಳು)

ಗುಂಪು 3-ರಲ್ಲಿ
ಬಂಜಾರ, ಭೋವಿ, ಕೊರಚ, ಕೊರಮ (ಅಸ್ಪಶ್ಯರಲ್ಲದ) ಗುಂಪಿಗೆ ಶೇ.4.5 ಒಳ ಮೀಸಲಾತಿ

ಗುಂಪು 4-ರಲ್ಲಿ
ಅಲೆಮಾರಿ, ಅರೆ ಅಲೆಮಾರಿ, ಇತರೆ ಸಮುದಾಯಕ್ಕೆ ಶೇ.1 ಒಳ ಮೀಸಲಾತಿ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.

Share This Article
1 Comment

Leave a Reply

Your email address will not be published. Required fields are marked *