ಚಿಕ್ಕಬಳ್ಳಾಪುರ: ಬಸವರಾಜ ಬೊಮ್ಮಾಯಿ (Basavaraj Bommai) ಸರಳ ಮುಖ್ಯಮಂತ್ರಿ, ಹೆಬ್ಬೆಟ್ಟು ಸಿಎಂ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ (H.D.KumarSwamy) ವಿರುದ್ಧ ಸಚಿವ ಆರ್. ಅಶೋಕ್ (R. Ashok) ವಾಗ್ದಾಳಿ ನಡೆಸಿದ್ದಾರೆ.
Advertisement
ಬಸವರಾಜ ಬೊಮ್ಮಾಯಿ ಹೆಬ್ಬೆಟ್ಟು ಸಿಎಂ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಕುರಿತಂತೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಎ.ಕೆ. ಗೊಲ್ಲಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅಶೋಕ್ ಅವರು, ಬಿಜೆಪಿ ನ್ಯಾಷನಲ್ ಪಾರ್ಟಿ, ಜೆಡಿಎಸ್ ಹೆಬ್ಬೆಟ್ಟು ಪಾರ್ಟಿ. ಎಚ್.ಡಿ.ದೇವೇಗೌಡ ಕುಟುಂಬದವರು ಹೇಳಿದ್ದರೆ ಮಾತ್ರ ಜೆಡಿಎಸ್‍ನಲ್ಲಿ ಹೆಬ್ಬೆಟ್ಟು ಒತ್ತೊದು. ಜೆಡಿಎಸ್‍ನಲ್ಲಿ ಅಂದು ಇಂದು ಮುಂದೆಯೂ ದೇವೇಗೌಡರದ್ದೇ ದರ್ಬಾರ್. ಬಿಜೆಪಿಯಲ್ಲಿ ವಂಶಪಾರಂಪರ್ಯ ರಾಜಕಾರಣ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.
Advertisement
Advertisement
ಬಸವರಾಜ ಬೊಮ್ಮಾಯಿ ಇಂಜಿನಿಯರಿಂಗ್ ಪದವೀಧರರು. ಮೂವರು ಸಿಎಂಗಳ ಜೊತೆ ಪಳಗಿದ್ದಾರೆ. ರಾಮಕೃಷ್ಣ ಹೆಗೆಡೆ, ಜೆ.ಎಚ್. ಪಟೇಲ್, ದೇವೇಗೌಡರ ಜೊತೆ ಟ್ರೈನಿಂಗ್ ಆಗಿದೆ. ಇಂತಹವರನ್ನು ಹೆಬ್ಬೆಟ್ಟು ಸಿಎಂ ಅಂದರೆ ನಿಮ್ಮನ್ನು ಏನಂತ ಹೇಳಬೇಕು? ಬಸವರಾಜ ಬೊಮ್ಮಾಯಿ ಸರಳ ಮುಖ್ಯಮಂತ್ರಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ನಾಯಕರು ಚುನಾವಣೆಯಲ್ಲಿ ಸೋತ ಬಳಿಕ ರಾಜ್ಯದಲ್ಲಿ ಇರಲ್ಲ – ಓಡಿ ಹೋಗ್ತಾರೆ: ಆರ್.ಅಶೋಕ್
Advertisement
ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಸುಧಾಕರ್ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗಿದ್ದಾಗ ಸ್ವತಃ ಎಚ್‍ಡಿಕೆ ತಾನು ಕ್ಲರ್ಕ್ ಅಂತ ಹೇಳಿದ್ದರು. ತಾನು ಸಿಎಂ ಆಗಿದ್ದರೂ ಗುಮಾಸ್ತನಾಗಿ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದರು. ಆದರೆ ಬಸವರಾಜ ಬೊಮ್ಮಾಯಿ ಯಾವತ್ತು ಆ ರೀತಿ ಹೇಳಿಲ್ಲ. ಅವರ ಆತ್ಮಸಾಕ್ಷಿಯಂತೆ ಹಿರಿಯರ ಮಾರ್ಗದರ್ಶನ ಪಡೆದು ಕೆಲಸ ಮಾಡುತ್ತಿದ್ದಾರೆ. ಸ್ವತಂತ್ರವಾಗಿ ಬಸವರಾಜ ಬೊಮ್ಮಾಯಿ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಜೆಡಿಎಸ್ ಎಸ್‍ಸಿ, ಎಸ್‍ಟಿ ಸಮುದಾಯದವರಿಗೆ ಯಾಕೆ ಮೀಸಲಾತಿ ಕೊಡಲಿಲ್ಲವಾ? ಇದು ಮಾಡಲು ರಬ್ಬರ್ ಸ್ಟ್ಯಾಂಪ್ ಸಿಎಂ ಬರಬೇಕಾಗಿತ್ತಾ ಎಂದು ಎಚ್‍ಡಿಕೆ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಪಾಕ್‌ನಲ್ಲಿ ಅರಾಜಕತೆ ಸೃಷ್ಟಿಸೋದು ನನಗೆ ಇಷ್ಟವಿಲ್ಲ- ಪ್ರತಿಭಟನಾ ರ‍್ಯಾಲಿ ಕೈಬಿಟ್ಟ ಇಮ್ರಾನ್ ಖಾನ್