ಬೆಂಗಳೂರು: 40% ಕಮಿಷನ್ ವಿಚಾರ ರಾಜ್ಯದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ಈ ಸಂಬಂಧ ಇದೀಗ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು (Basavaraj Bommai) ಸಿಎಂ ಸಿದ್ದರಾಮಯ್ಯಗೆ (Siddaramaiah) ಸವಾಲೆಸೆದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು ಒಂದೂವರೆ ವರ್ಷದಿಂದ 40% ಕಮಿಷನ್ (40% Commission) ಆರೋಪ ಮಾಡುತ್ತಿದ್ದಾರೆ. ಇಲ್ಲಿಯವರೆಗೂ ದಾಖಲೆ ಕೊಟ್ಟಿಲ್ಲ. ತನಿಖೆ ಮಾಡಿದ್ರೆ ನಮಗೆ ನ್ಯಾಯ ಸಿಗುವ ಭರವಸೆ ಇದೆ. ಸರ್ಕಾರ ನಿಜವಾಗ್ಲೂ ಭ್ರಷ್ಟಾಚಾರ ವಿರುದ್ಧ ಇದ್ದರೆ 40% ಕಮಿಷನ್ ಸೇರಿದಂತೆ ಎಲ್ಲದರ ಬಗ್ಗೆ ತನಿಖೆ ಮಾಡಲಿ ಎಂದು ಆಗ್ರಹಿಸಿದರು.
Advertisement
Advertisement
2013 ರಿಂದ 2023 ಮಾರ್ಚ್ ವರೆಗೂ ಎಲ್ಲಾ ಕೇಸ್ ಗಳು ಈ ಕಮಿಷನ್ ಮುಖಾಂತರ ಮುಂದೆ ಬರಲಿ. ಸೆಲೆಕ್ಟಿವ್ ಆಗಿ ರಾಜಕೀಯ ಪ್ರೇರಿತವಾಗಿ ತನಿಖೆ ಮಾಡಿದ್ರೆ ಹೇಗೆ..? ಯಾರು ಯಾರು ತಪ್ಪಿತಸ್ಥರು ಇದ್ದಾರೋ ಅವರಿಗೆ ಶಿಕ್ಷೆಯಾಗಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ನನ್ನ ಬಳಿ ದಾಖಲೆ ಇದೆ- ಹೆಚ್‍ಡಿಕೆ ಪೆನ್‍ಡ್ರೈವ್ ಬಾಂಬ್
Advertisement
Advertisement
ಈಗಾಗಲೇ ಹಲವು ಕೇಸ್ ಗಳು ಲೋಕಾಯುಕ್ತಾ ಮುಂದೆ ಇದೆ. 40% ತೆಗೆದುಕೊಂಡಿದ್ದಾರಂತ ಹೇಳಿ ಬಿಬಿಎಂಪಿ ಹಾಗೂ ಇತರ ಇಲಾಖೆ ವಿರುದ್ಧ ಲೋಕಾಯುಕ್ತಾದಲ್ಲಿ ಕೇಸ್ ಇದೆ. ಅವುಗಳನ್ನ ಕೂಡ ತನಿಖೆ ನಡೆಸಲಿ. ಕೆಂಪಣ್ಣ ಆರೋಪದ ವಿರುದ್ಧ ಮುನಿರತ್ನ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಇನ್ನೂ ಅದಕ್ಕೆ ಅವರು ದಾಖಲೆ ಕೊಟ್ಟಿಲ್ಲ, ಉತ್ತರ ಕೊಟ್ಟಿಲ್ಲ ಎಂದರು.
Web Stories