ಕಾಯಕ ಮತ್ತು ವಚನಗಳ ಮೂಲಕ ಜಗತ್ತಿಗೆ ಸಮಸಮಾಜದ ಸಂದೇಶ ಸಾರಿರುವ ಜಗಜ್ಯೋತಿ ಬಸವೇಶ್ವರರ ಜಯಂತಿ ಇಂದು. ಬಸವಣ್ಣನ ಸಂದೇಶ ಸಾರುವಂತಹ ಅನೇಕ ಕೃತಿಗಳು ಸಾಹಿತ್ಯ ಲೋಕದಲ್ಲಿದ್ದರೆ, ಸಿನಿಮಾಗಳಲ್ಲೂ ಬಸವಣ್ಣನ ಪ್ರಸ್ತಾಪವಿದೆ. ಅವರ ಬದುಕಿನ ಕುರಿತಾದ ಸಿನಿಮಾಗಳು ಮೂಡಿ ಬಂದಿವೆ.
Advertisement
ಕನ್ನಡ ಬೆಳ್ಳಿತೆರೆಯ ಮೇಲೆ ಬಸವಣ್ಣ ಹಾಡಾಗಿ, ವಚನವಾಗಿ, ಜೀವನ, ಕಾಯಕ ಹೀಗೆ ನಾನಾ ರೀತಿಯಲ್ಲಿ ಅಭಿವ್ಯಕ್ತಿಗೊಂಡಿದ್ದಾರೆ. ಶ್ರೇಷ್ಠ ದಾರ್ಶನಿಕನ ನೆನಪುಗಳನ್ನು ಸಿನಿಮಾ ರಂಗ ಹಲವು ಬಗೆಯಲ್ಲಿ ಕಟ್ಟಿಕೊಟ್ಟಿದೆ. ಬಸವಣ್ಣ ಸಿನಿಮಾದಲ್ಲಿ ಬಿಡಿಬಿಡಿಯಾಗಿ ಹಾಗೂ ಇಡಿಯಾಗಿಯೂ ಕಂಡಿದ್ದಾರೆ ಎನ್ನುವುದೇ ವಿಶೇಷ. ಇದನ್ನೂ ಓದಿ : ಚಲಿಸುವ ಬೋಟ್ ನಲ್ಲಿ ಚೆಲುವೆ ರಾಧಿಕಾ ಕುಮಾರಸ್ವಾಮಿ
Advertisement
Advertisement
ಕನ್ನಡ ಸಿನಿಮಾ ರಂಗದಲ್ಲಿ ಮೊಟ್ಟ ಮೊದಲ ಬಾರಿಗೆ ಬಸವಣ್ಣನ ಕುರಿತಾಗಿ ತೆರೆಗೆ ಬಂದ ಸಿನಿಮಾ ‘ಜಗಜ್ಯೋತಿ ಬಸವೇಶ್ವರ’. 1959ರಲ್ಲಿ ತೆರೆ ಕಂಡ ಈ ಸಿನಿಮಾದಲ್ಲಿ ಬಸವಣ್ಣನ ಪಾತ್ರ ಮಾಡಿದ್ದು ಹೊನ್ನಪ್ಪ ಭಾಗವತರ್. ಈ ಹೊತ್ತಿಗೆ ಬಸವಣ್ಣ ಅಂದಾಕ್ಷಣ ಇವರ ಭಾವಚಿತ್ರವೇ ಕಣ್ಮುಂದೆ ಬರುತ್ತದೆ. ಐವತ್ತರ ದಶಕದ ಕೊನೆಯಲ್ಲಿ ತೆರೆಕಂಡ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು ಟಿ.ವಿ. ಸಿಂಗ್ ಠಾಕೂರ್. ಈ ಸಿನಿಮಾದ ವಿಶೇಷ ಅಂದರೆ, ಡಾ.ರಾಜ್ ಕುಮಾರ್ ಅವರು ಬಿಜ್ಜಳನಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾಗೆ ಪ್ರಾದೇಶಿಕ ಸಿನಿಮಾ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಕೂಡ ಬಂತು.
Advertisement
1983ರಲ್ಲೂ ಬಸವಣ್ಣನವರ ಕುರಿತಾಗಿ ಮತ್ತೊಂದು ಚಿತ್ರ ತೆರೆಕಂಡಿತು. ‘ಕ್ರಾಂತಿಯೋಗಿ ಬಸವಣ್ಣ’ ಹೆಸರಿನಲ್ಲಿ ಮೂಡಿ ಬಂದ ಚಿತ್ರವನ್ನು ಕೆ.ಎಸ್.ಎಲ್ ಸ್ವಾಮಿ ನಿರ್ದೇಶನ ಮಾಡಿದ್ದರು. ಅಶೋಕ್ ಬಸವಣ್ಣನ ಪಾತ್ರದಲ್ಲಿ ನಟಿಸಿದ್ದರು. ಮಾತೇ ಮಹಾದೇವಿ ಅವರೇ ಈ ಚಿತ್ರಕ್ಕೆ ಸ್ಕ್ರಿಪ್ಟ್ ಬರೆದಿದ್ದು ವಿಶೇಷ. ಈ ಸಿನಿಮಾ ಸೆಟ್ಟೇರುತ್ತಿದೆ ಎನ್ನುವ ಹೊತ್ತಿನಲ್ಲಿ ಬಸವಣ್ಣನ ಪಾತ್ರವನ್ನು ಡಾ.ರಾಜ್ ಕುಮಾರ್ ಮಾಡುತ್ತಾರೆ ಎನ್ನುವ ಸುದ್ದಿಯಿತ್ತು. ಅದಕ್ಕಾಗಿ ಡಾ.ರಾಜ್ ಕೂಡ ತಯಾರಾಗಿದ್ದರು ಎನ್ನುವ ಗಾಸಿಪ್ ಇದೆ. ಆದರೆ, ನಂತರದ ದಿನಗಳಲ್ಲಿ ಅಶೋಕ್ ಅವರು ಬಸವಣ್ಣನ ಪಾತ್ರಕ್ಕೆ ಆಯ್ಕೆಯಾದರು. ಈ ಸಿನಿಮಾ ಕೇವಲ ಬಸವಣ್ಣನ ಸುತ್ತ ಸುತ್ತದೇ ಕಲ್ಯಾಣ ಕ್ರಾಂತಿಗೆ ಕಾರಣರಾದ ಶಿವ ಶರಣ, ಶರಣೆಯರ ಪ್ರಸ್ತಾಪ ಕೂಡ ಇತ್ತು. ಇದನ್ನೂ ಓದಿ: ಗ್ರ್ಯಾಮಿ ಅವಾರ್ಡ್ ಮ್ಯೂಸಿಕ್ ಕೇಳಿದಾಗ ಬಹಳ ಖುಷಿ ಆಯ್ತು: ಸಿಎಂ ಬೊಮ್ಮಾಯಿ
ಚಿಂದೂಡಿ ಬಂಗಾರೇಶ್ ನಿರ್ದೇಶನದಲ್ಲಿ ಮೂಡಿ ಬಂದ ದಾನಮ್ಮ ದೇವಿ ಸಿನಿಮಾದಲ್ಲಿ ಬಸವೇಶ್ವರರ ಪ್ರಸ್ತಾಪವಿದೆ. ಹರಳಯ್ಯ, ಮಡಿವಾಳ ಮಾಚಿದೇವ ಹೀಗೆ ಅನೇಕ ಶರಣರು ಸಿನಿಮಾದಲ್ಲಿ ಪ್ರಾಸಂಗಿಕವಾಗಿ ಬಂದು ಹೋಗುತ್ತಾರೆ. ಈ ಸಮಯದಲ್ಲಿ ಬಸವಣ್ಣ ಕೂಡ ಬರುತ್ತಾರೆ. ಈ ಪಾತ್ರವನ್ನು ನಟ ರಾಮಕೃಷ್ಣ ಅವರು ಮಾಡಿದ್ದರು. ಇದನ್ನೂ ಓದಿ: ಪ್ರಧಾನಿ ಭೇಟಿ ಮಾಡಿ ಸಂಭ್ರಮಿಸಿದ ಗ್ರ್ಯಾಮಿ ಅವಾರ್ಡ್ ವಿಜೇತ ರಿಕಿ ಕೇಜ್
ಟಿ.ಎಸ್. ನಾಗಾಭರಣ ನಿರ್ದೇಶನದಲ್ಲಿ ತಯಾರಾದ ‘ಅಲ್ಲಮ’ ಸಿನಿಮಾದಲ್ಲೂ ಬಸವಣ್ಣನ ಪಾತ್ರಕ್ಕೆ ನಿರ್ದೇಶಕರು ಸಾಕಷ್ಟು ಮಹತ್ವ ಕೊಟ್ಟಿದ್ದರು. ಅಲ್ಲಮನ ವಚನದ ಜೊತೆಗೆ ಬಸವೇಶ್ವರರ ವಚನಗಳನ್ನೂ ಈ ಸಿನಿಮಾದಲ್ಲಿ ಬಳಸಲಾಗಿತ್ತು. ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರು ಬಸವಣ್ಣನ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದರು. ಇದನ್ನೂ ಓದಿ: ಜಾನ್ವಿ ಕಪೂರ್ ಡ್ಯಾನ್ಸ್‌ಗೆ ಫ್ಯಾನ್ಸ್ ಫಿದಾ: ಶ್ರೀದೇವಿಗೆ ಹೋಲಿಸಿದ ಅಭಿಮಾನಿಗಳು
ಬಿ.ಎ ಪುರುಷೋತ್ತಮ ನಿರ್ದೇಶನದಲ್ಲಿ ‘ಮಹಾ ಶರಣ ಹರಳಯ್ಯ’ ಸಿನಿಮಾ ಮೂಡಿ ಬಂದಿತ್ತು. ಈ ಸಿನಿಮಾದಲ್ಲಿ ಬಸವಣ್ಣನ ಪಾತ್ರವೂ ಪ್ರಮುಖವಾಗಿತ್ತು. ಹರಳಯ್ಯ ಮತ್ತು ಬಸವಣ್ಣನ ಮುಖಾಮುಖಿಯನ್ನು ಸಮರ್ಥವಾಗಿ ಕಟ್ಟಿಕೊಟ್ಟಿದ್ದರು ನಿರ್ದೇಶಕರು. ಈ ಸಿನಿಮಾದಲ್ಲಿ ಬಸವಣ್ಣನಾಗಿ ರಮೇಶ್ ಅರವಿಂದ್ ನಟಿಸಿದ್ದರು. ಇದನ್ನೂ ಓದಿ: ಮಗಳ ನಿರ್ಮಾಣದ ವೆಬ್ ಸೀರಿಸ್‌ನಲ್ಲಿ ಶಿವಣ್ಣ ಆಕ್ಟಿಂಗ್
ಕನ್ನಡದ ಪ್ರತಿಭಾವಂತ ಹಿರಿಯ ನಟ ಶ್ರೀನಿವಾಸ್ ಮೂರ್ತಿ ಅವರು ಕಿರುತೆರೆಯಲ್ಲಿ ಪ್ರಯೋಗವೊಂದನ್ನು ಮಾಡಿದ್ದರು. ಅವರು ಕಿರುತೆರೆಗಾಗಿ ‘ಕ್ರಾಂತಿಯೋಗಿ ಬಸವಣ್ಣ’ ಧಾರಾವಾಹಿ ನಿರ್ದೇಶಿಸಿ, ಬಸವಣ್ಣನ ಪಾತ್ರವನ್ನು ಅವರೇ ನಿರ್ವಹಿಸಿದದ್ರು. ಎರಡು ವರ್ಷಗಳ ಕಾಲ ಈ ಧಾರಾವಾಹಿ ಪ್ರಸಾರವಾಯಿತು. ಬಸವಣ್ಣನವರ ಬಹುತೇಕ ಬದುಕನ್ನು ಜನರ ಮುಂದಿಟ್ಟ ಅಪರೂಪದ ಧಾರಾವಾಹಿ ಇದಾಗಿತ್ತು.