ಸ್ಯಾಂಡಲ್‌ವುಡ್ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಸಿನಿಮಾ ಲಿಸ್ಟ್‌ನಲ್ಲಿ ಸಾಲು ಸಾಲು ಸಿನಿಮಾಗಳಿರಬೇಕಾದ್ರೆ ವೆಬ್ ಸೀರಿಸ್‌ನತ್ತ ಮುಖ ಮಾಡಿದ್ದಾರೆ. ಮಗಳು ನಿವೇದಿತಾ ಪ್ರೋಡಕ್ಷನ್‌ನಲ್ಲಿ ಮೂಡಿಬರಲಿರುವ ವೆಬ್ ಸಿರೀಸ್‌ನಲ್ಲಿ ನಟಿಸೋದಕ್ಕೆ ನಟ ಶಿವಣ್ಣ ರೆಡಿಯಾಗಿದ್ದಾರೆ.
Advertisement
ಸೀರಿಯಲ್, ಸಿನಿಮಾಗಳಂತೆ ವೆಬ್‌ಸಿರೀಸ್‌ಗೂ ಒಂದು ಕಾಲ. ಒಂದರ್ಥದಲ್ಲಿ ಇದೀಗ ವೆಬ್‌ಸಿರೀಸ್ ಮೇನಿಯಾ ಅಂದ್ರೆ ತಪ್ಪಾಗಲಾರದು. ಪರಭಾಷೆಗಳಲ್ಲಿ ಟ್ರೇಂಡ್ ಆಗಿದ್ದ ವೆಬ್‌ಸಿರೀಸ್ ಈಗ ಕನ್ನಡಕ್ಕೂ ಬಂದಿದೆ. ಈಗಾಗಲೇ ಸಾಕಷ್ಟು ವೆಬ್‌ಸಿರೀಸ್ ಮೂಲಕ ಸಿನಿಪ್ರೇಕ್ಷಕರ ಗಮನ ಸೆಳೆದಿದೆ. ಒಂದು ಕಥೆಯನ್ನ ಸಿನಿಮಾ ರೂಪದಲ್ಲಿ ಹೇಳದೆ, ಸೀಸನ್ ಹಾಗೂ ಎಪಿಸೋಡ್‌ಗಳ ರೂಪದಲ್ಲಿ ತೋರಿಸಲಾಗುತ್ತಿದೆ. ಅಭಿಮಾನಿಗಳು ಕೂಡ ವೆಬ್ ಸಿರೀಸ್‌ನ ಇಷ್ಟಪಡ್ತಿದ್ದಾರೆ. ಹಾಗಾಗಿನೇ ಶಿವರಾಜ್‌ಕುಮಾರ್ ವೆಬ್ ಸೀರಿಸ್‌ನತ್ತ ಮುಖ ಮಾಡಿದ್ದಾರೆ.
Advertisement
Advertisement
ಒಟಿಟಿ ಫ್ಲಾರ್ಟ್ಫಾರ್ಮ್ ವಿಸ್ತಾರ ಹಿರಿದಾದಂತೆ ವೆಬ್ ಸೀರಿಸ್ ನಿರ್ಮಾಣದತ್ತ ಸಿನಿಮಾ ಹೆಚ್ಚು ಅಟ್ರಾಕ್ಟ್ ಆಗ್ತಿದ್ದಾರೆ. ಈಗಾಗಲೇ ಶಿವಣ್ಣ ಮಗಳು ನಿವೇದಿತಾ ಐ ಹೇಟ್ ಯು ರೋಮಿಯೋ, ಬೈ ಮಿಸ್‌ಟೆಕ್, ಹನಿಮೂನ್ ವೆಬ್ ಸೀರಿಸ್ ನಿರ್ಮಾಣ ಮಾಡಿದ್ದಾರೆ. ಶ್ರೀ ಮುತ್ತು ಸಿನಿ ಸರ್ವಿಸ್ ಪ್ರೋಡಕ್ಷನ್‌ನಲ್ಲಿ ನಿವೇದಿತಾ ನೇತೃತ್ವದಲ್ಲಿ ಈ ವೆಬ್ ಸಿರೀಸ್ ಮೂಡಿ ಬರಲಿದೆ. ಇದನ್ನೂ ಓದಿ: ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ನಿಲ್ಲದ ರಾಕಿಭಾಯ್ ಆರ್ಭಟ: 400 ಕೋಟಿಯತ್ತ `ಕೆಜಿಎಫ್ 2
Advertisement
ಈಗಾಗಲೇ ಏಳು ವೆಬ್ ಸೀರಿಸ್ ಕಥೆ ರೆಡಿಯಾಗಿದ್ದು, ಸದ್ಯದಲ್ಲೇ ಶೂಟಿಂಗ್ ಶುರುವಾಗಲಿದೆ. ಶಿವಣ್ಣ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ ಅದರ ಮಧ್ಯೆ ವೆಬ್ ಸೀರಿಸ್ ಮಾಡಲಾಗುತ್ತದೆ. ವಿಭಿನ್ನ ಪ್ರಯತ್ನದ ಮೂಲಕ ಅಭಿಮಾನಿಗಳನ್ನ ರಂಜಿಸಲು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಸಜ್ಜಾಗಿದ್ದಾರೆ.