ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿಂದು (Bengaluru) ಗ್ರಾಮೀಣ ಸೊಗಡು ಮನೆ ಮಾಡಿತು. ಸಂಡೇ ಸ್ಪೆಷಲ್ ಎಂಬಂತೆ ಜನ ಬಸವನಗುಡಿ ಕಡಲೆಕಾಯಿ ಪರಿಷೆಯತ್ತ (Basavanagudi, Kadalekai Parishe) ಮುಖ ಮಾಡಿದ್ರು.
ಬಸವನಗುಡಿ ಬುಲ್ ಟೆಂಪಲ್ ರಸ್ತೆಯಲ್ಲಿಂದು ಬಡವರ ಬಾದಾಮಿಯ ರಂಗು ಪಸರಿಸಿತು. ಎಲ್ಲೆಡೆ ಕಡಲೆಕಾಯಿ ರಾಶಿ, ರಾಶಿ ಗ್ರಾಹಕರ ಕೈ ಬೀಸಿ ಕರೆಯುತ್ತಿತ್ತು. ಇಂದಿನಿಂದ ನಗರದ ಬಸವನಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ನಡೆಯಲಿದೆ. ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಕಡಲೆ ಕಾಯಿ ಪರಿಷೆಗೆ ಚಾಲನೆ ನೀಡಿದ್ದಾರೆ. ಇದನ್ನೂ ಓದಿ: ಚಿಲುಮೆ ಅಕ್ರಮ ಪ್ರಕರಣ – ಪ್ರಮುಖ ಆರೋಪಿ ರವಿಕುಮಾರ್ ಬಂಧನ
ಕಡಲೆಕಾಯಿ ಜಾತ್ರೆಗೆ 500 ವರ್ಷಗಳ ಇತಿಹಾಸವಿದ್ದು, ಪಕ್ಕದ ತಮಿಳುನಾಡಿನಿಂದಲೂ ಕಡಲೆ ಕಾಯಿ ವ್ಯಾಪಾರಿಗಳು ಆಗಮಿಸಿದ್ರು. ಈ ಬಾರಿ ಪರಿಷೆಯಲ್ಲಿ ಕಡಲೆ ಕಾಯಿ ಬಾರಿ ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ. ಒಂದು ಸೇರು ಹಸಿ ಕಡಲೆಕಾಯಿ 50 ರೂ. ಹಾಗೇ ಹುರಿದ ಕಡಲೆಕಾಯಿ ಸೇರಿಗೆ 80 ರೂಪಾಯಿನಂತೆ ಮಾರಾಟವಾಗುತ್ತಿದೆ. 2 ಸಾವಿರ ವ್ಯಾಪಾರಿಗಳು ಪರಿಷೆಯಲ್ಲಿದ್ದಾರೆ. ಇದನ್ನೂ ಓದಿ: ಉಗ್ರರ ಅಡಗುತಾಣವಾಗ್ತಿದ್ಯಾ ಮಂಗಳೂರು – ಕರಾವಳಿ ಜಿಲ್ಲೆಯಾದ್ಯಂತ ಹೈ ಅಲರ್ಟ್
ಕಡಲೆಕಾಯಿ ಪರಿಷೆಗೆ ಇತಿಹಾಸವೇ ಇದೆ. ಬೆಂಗಳೂರಿನ ಮೂಲೆ ಮೂಲೆಯಿಂದ ಜನ ಬಂದು ಕಡಲೆ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಪರಿಷೆ ಮುಗಿಯೋವರೆಗೂ ಬುಲ್ ಟೆಂಪಲ್ ದೇಗುಲದ ಮುಂಭಾಗ ವಾಹನ ಓಡಾಟ ನಿಷೇಧಿಸಲಾಗಿದೆ.
Live Tv
[brid partner=56869869 player=32851 video=960834 autoplay=true]