ವಿಜಯಪುರ: ರಾತ್ರಿ ಬಂದು ಮಸಿ ಹಚ್ಚುವ ಅಯೋಗ್ಯರಿಗೆ ಗೃಹ ಸಚಿವರು ಏನ್ ಮಾಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಶುಕ್ರವಾರ ತಡ ರಾತ್ರಿ ಎಂಇಎಸ್ ಕಾರ್ಯಕರ್ತರು ನಡೆಸಿರುವ ಹಿಂಸಾಚಾರ ಕೃತ್ಯ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಂಇಎಸ್, ಶಿವಸೇನೆ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಶಿವಸೇನೆ ಭಾಷಾ ವೈಷಮ್ಯಕ್ಕೆ ಬಿದ್ದದ್ದು ದುರ್ದೈವ. ಮಹಾರಾಷ್ಟ್ರ ಸರ್ಕಾರ ಸಲುವಾಗಿ ಶಿವಸೇನೆ ಹೀಗೆ ಮಾಡುತ್ತಿದೆ ಎಂದು ಎಂಇಎಸ್, ಶಿವಸೇನೆ ವಿರುದ್ಧ ಆಕ್ರೋಶ ಹೊರಹಾಕಿದರು.
Advertisement
Advertisement
ಕೊಲ್ಲಾಪುರದಲ್ಲಿ ಧ್ವಜ ಸುಟ್ಟವರ ಮೇಲು ಕ್ರಮಕ್ಕೆ ವಿಧಾನ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದ್ದೇವೆ. ಇವೆಲ್ಲಾ ದೇಶ ವಿರೋಧಿ ಚಟುವಟಿಕೆಗಳು. ಉದ್ದೇಶ ಪೂರ್ವಕವಾಗಿ ಶಿವಾಜಿ ಮೂರ್ತಿ, ಸಂಗೊಳ್ಳಿ ರಾಯಣ್ಣ, ಅಂಬೇಡ್ಕರ್, ಬಸವಣ್ಣನ ಮೂರ್ತಿಗಳಿಗೆ ಅಪಮಾನ ಮಾಡಲಾಗುತ್ತಿದೆ. ಇದೆಲ್ಲದರ ಹಿಂದೆ ದೊಡ್ಡ ಗುಂಪಿದೆ. ಅದು ಯಾರೇ ಇದ್ದರು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಕರ್ನಾಟಕದ ಕಾರಿನ ಮೇಲೆ ಶಿವಸೇನೆ ಪುಂಡರಿಂದ ಕಲ್ಲು ತೂರಾಟ
Advertisement
Advertisement
ಯಾವುದೇ ಮೂರ್ತಿಯ ಮೇಲೆ ಅಪಮಾನವಾದರು ಕ್ರಮವಾಗಬೇಕು. ರಾಷ್ಟ್ರ ಪುರುಷರ ಮೂರ್ತಿಗಳ ಮೇಲೆ ದಾಳಿ ಮಾಡುವವರ ಮೇಲೆ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು. ರಾಷ್ಟ್ರ ಪುರುಷರ ಮೂರ್ತಿಗೆ ಅಪಮಾನ ಮಾಡುವವರನ್ನು ಎಂದಿಗೂ ಕ್ಷಮಿಸಬಾರದು. ಇಂಥ ಘಟನೆಗಳು ನಡೆದಾಗ ತಕ್ಷಣವೇ ನಿರ್ಣಯ ತೆಗೆದುಕೊಂಡು ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವರಿಗೆ ಮನವಿ ಮಾಡಿದರು. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರ ದಾಂಧಲೆ – ರಾತ್ರಿ ಏನೇನು ಮಾಡಿದ್ದಾರೆ?
ಇದೇ ವೇಳೆ ಕೆಲವರು ಸಂಘಟನೆಗಳನ್ನು ಕಟ್ಟಿಕೊಂಡು ಉದ್ಯೋಗ ಮಾಡಿಕೊಂಡಿದ್ದಾರೆ. ಕೆಲ ಹುಳುಗಳು ಸಂಘಟನೆ ಮಾಡಿಕೊಂಡು ಕೆಟ್ಟ ಕೆಲಸ ಮಾಡುತ್ತಿದ್ದಾರೆ. ರಾತ್ರಿ ಬಂದು ಮಸಿ ಹಚ್ಚುವ ಅಯೋಗ್ಯರಿಗೆ ಗೃಹ ಸಚಿವರು ಏನ್ ಮಾಡಬೇಕು. ನಾಳೆ ನಾನು ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡ್ತೇನೆ ಎಂದರು.