ಕಲಬುರಗಿ: ಹುಬ್ಬಳ್ಳಿಯಲ್ಲಿ ನೇಹಾ ಬದಲು ಮುಸ್ಲಿಂ ಯಾರಾದ್ರೂ ಸಾವಾಗಿದ್ರೆ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಅವರ ಟೀಂ ಅಲ್ಲಿ ಹೆಲಿಕಾಪ್ಟರ್ ಇಳಿಸುತ್ತಿದ್ದರು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಕಾಂಗ್ರೆಸ್ (Congress) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚಿತ್ತಾಪೂರ ತಾಲೂಕಿನ ವಾಡಿ ಪಟ್ಟಣದಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆಯಾದಾಗ, ಯಾದಗಿರಿಯಲ್ಲಿ ದಲಿತ ಯುವಕನ ಹತ್ಯೆಯಾದಾಗ ರಾಹುಲ್ ಗಾಂಧಿ ಬರಬೇಕಿತ್ತು. ಅದೇ ಮುಸ್ಲಿಮರ ಕೊಲೆಯಾಗಿದ್ರೆ ಜಿಗಿದು ಬರುತ್ತಿದ್ದರು. ಮುಂದಿನ ಐದು ವರ್ಷ ಭಾರತ ಸದೃಢವಾಗಿರಬೇಕೆಂದರೆ ನಾವು ಕಡ್ಡಾಯವಾಗಿ ಮತದಾನ ಮಾಡಬೇಕು. ಇಲ್ಲದಿದ್ದರೆ ದೇಶ ಭಯೋತ್ಪಾದಕರ ಕೈಗೆ ಹೋಗಲಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತನನ್ನ ಬಹಿರಂಗವಾಗಿ ನೇಣಿಗೆ ಹಾಕಲಾಗಿದೆ. ನಾವು ಹಿಂದೂಗಳು ಒಂದಾಗದಿದ್ದರೆ ಭಾರತ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ರಾಮ ಮಂದಿರ ನಿರ್ಮಾಣ ಮಾಡದಂತೆ ಕಾಂಗ್ರೆಸ್, ಹಿಂಬಾಲಕರಿಂದ ಕುತಂತ್ರ: ಮೋದಿ
ಕೊರೊನಾ ಸಮಯದಲ್ಲಿ ಲಸಿಕೆ ಕಂಡುಹಿಡಿಯಲು ಮೋದಿ ಕಾರಣ. ಆ ಸಂದರ್ಭದಲ್ಲಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಬಂದು ಮೋದಿ ಲಸಿಕೆ ಹಾಕಿಸಿಕೊಳ್ಳಬೇಡಿ ಎಂದು ಅಪಪ್ರಚಾರ ಮಾಡಿದ್ದರು. ಬಳಿಕ ಅವರು ಲಸಿಕೆ ಹಾಕಿಸಿಕೊಂಡ್ರು. ಇವರ ಮಾತು ಕೇಳಿ ಎಷ್ಟೋ ಜನ ಲಸಿಕೆ ಪಡೆಯದೇ ಪ್ರಾಣತೆತ್ತರು ಎಂದು ಅವರು ಆರೋಪಿಸಿದ್ದಾರೆ.
50 ವರ್ಷಗಳಿಂದ ಗರೀಬಿ ಹಠಾವೋ ಎನ್ನುತ್ತಿದ್ದೀರಿ. ಆದರೆ ಗರೀಬಿ ಹಠಾವೋ ಆಗಿಲ್ಲ. ನಮ್ಮ ನಡುವೆಯೇ ಇದ್ದು ಪಾಕ್‍ಗೆ ಜಿಂದಾಬಾದ್ ಕೂಗುತ್ತಾರೆ. ನಾವು ಹಿಂದೂಗಳು ಒಂದಾಗದೇ ಇದ್ದರೆ, ನಮ್ಮ ದೇಶ ಪಾಕಿಸ್ತಾನ ಮಯವಾಗುತ್ತದೆ. ದೇಶದಲ್ಲಿ ಲವ್ ಜಿಹಾದ್ ನಡೀತಿದೆ. ದೇಶವನ್ನು ಇಸ್ಲಾಂ ರಾಷ್ಟ್ರ ಮಾಡಲು ಪಿಎಫ್‍ಐ ಹೊಂಚು ಹಾಕಿದೆ ಎಂದು ಅವರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಕೇಸ್ – ನೊಂದ ಮಹಿಳೆಯಿಂದ ಮಹಿಳಾ ಆಯೋಗಕ್ಕೆ ದೂರು