ಕೊಲೆಗಡುಕರು, ಅತ್ಯಾಚಾರಿಗಳು ಸಿಕ್ಕರೆ ಎನ್‌ಕೌಂಟರ್‌ ಮಾಡಿ: ಹಿಂದೂ ಕಾರ್ಯಕರ್ತನ ಹತ್ಯೆಗೆ ಯತ್ನಾಳ್‌ ಖಂಡನೆ

Public TV
1 Min Read
Basangouda Patil Yatnal 1

ಬೆಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ (Suhas Shetty) ಹತ್ಯೆಯನ್ನು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಖಂಡಿಸಿದ್ದಾರೆ. ಕೊಲೆಗಡುಕರು, ಅತ್ಯಾಚಾರಿಗಳನ್ನು ಎನ್‌ಕೌಂಟರ್‌ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಯತ್ನಾಳ್‌, ಬ್ಯಾಂಕ್‌ ದರೋಡೆಕೋರರು, ಅತ್ಯಾಚಾರಿಗಳು, ಕೊಲೆಗಡುಕರು ಸಿಕ್ಕರೆ ಯಾವುದೇ ಮುಲಾಜಿಲ್ಲದೇ ಎನೌಕೌಂಟರ್‌ ಮಾಡಿ ಪ್ರಕರಣ ಮುಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಸುಹಾಸ್‌ಗೆ ಆತ್ಮರಕ್ಷಣೆಗೆ ಒಂದು ದೊಣ್ಣೆಯನ್ನೂ ಇಟ್ಟುಕೊಳ್ಳಲು ಪೊಲೀಸರು ಅವಕಾಶ ನೀಡಲಿಲ್ಲ: ಹರೀಶ್ ಪೂಂಜಾ

ಎಕ್ಸ್‌ ಪೋಸ್ಟ್‌ನಲ್ಲೇನಿದೆ..?
ಕಳೆದ 24 ಗಂಟೆಗಳಲ್ಲಿ:
* ಗದಗದಲ್ಲಿ ಸಮೀರ್, ಉಮರ್ ಹಾಗೂ ಜಾಕಿರ್ ಎಂಬುವವರು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ
* ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ

ಗೃಹ ಇಲಾಖೆ ಬದುಕಿದೆಯೋ, ಸತ್ತಿದೆಯೋ ಎಂದು ಜನರೇ ಹೇಳಬೇಕು. ಬ್ಯಾಂಕ್ ದರೋಡೆಕೋರರಿಗೆ, ಅತ್ಯಾಚಾರಿಗಳಿಗೆ, ಕೊಲೆಗಡುಕರು ಸಿಕ್ಕರೆ ಅವರಿಗೆ ಯಾವುದೇ ಮುಲಾಜು ತೋರದೆ ಅಲ್ಲೇ ಎನ್ಕೌಂಟರ್ ಮಾಡಿ ಪ್ರಕರಣವನ್ನು ಮುಗಿಸಬೇಕೇ ಹೊರತು ಅವರಿಗೆ ಯಾವುದೇ ಕನಿಕರ, ಕಾನೂನು ನೆರವು ನೀಡಬಾರದು.

ಸರ್ಕಾರ ಕೊಲೆಗಡುಕರು, ಅತ್ಯಾಚಾರಿಗಳಿಗೆ ನಡುಕ ಸೃಷ್ಟಿಸಬೇಕು. ಈಗಿರುವ ಗೃಹ ಮಂತ್ರಿಗಳು ಸಮಜಾಯಿಷಿ ನೀಡುವಲ್ಲಿ, ಮಾಹಿತಿ ತರಿಸಿಕೊಳ್ಳುವಲ್ಲಿ, ಅಸಂಬದ್ಧ ಓತ ಪ್ರೋತ ಹೇಳಿಕೆ ನೀಡುವಲ್ಲಿ ಇರುವುದರಿಂದಲೇ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವುದು ಯತ್ನಾಳ್‌ ಕಿಡಿಕಾರಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಕಾಶ್ಮೀರ ಪರಿಸ್ಥಿತಿ ನಿರ್ಮಾಣ ಮಾಡಲು ಹೊರಟಂತೆ ಕಾಣ್ತಿದೆ: ಬಿವೈವಿ ಕಿಡಿ

Share This Article