ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ (B S Yediyurappa) ಅವರನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagauda Patil Yatnal) ಕೊಂಡಾಡಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಯತ್ನಾಳ್, ಅಧ್ಯಕ್ಷರೇ ಮುಂದಿನ ಸಲ ಮಂತ್ರಿಗಳಾಗಿ ಆಗಿ ಅಂತೇಳಿದ್ದಾರೆ. ಆದರೆ ಅವರು ಸಿಎಂ ಆಗಿದ್ದಾಗ ನಿಮ್ಮನ್ನ ಮಂತ್ರಿ ಮಾಡಲಿಲ್ಲ, ನನ್ನನ್ನೂ ಮಂತ್ರಿ ಮಾಡಲಿಲ್ಲ. ನನ್ನ ಮಂತ್ರಿ ಮಾಡಿದ್ರೆ ಎಲ್ಲಿ ಸಿಎಂ ಆಗ್ಬಿಡ್ತಾನೋ ಅಂತಾ ಮಾಡಲಿಲ್ಲ. ನಿಮ್ಮನ್ನ ಕೇಂದ್ರ ಮಂತ್ರಿ ಮಾಡಿದ್ರು ಎಂದು ಹೇಳಿದರು.
Advertisement
Advertisement
ನನ್ನ ಶಿಕ್ಷಣ ಮಂತ್ರಿ ಮಾಡಿದ್ದು ಯಡಿಯೂರಪ್ಪ ಅವರೇ ಅಂತ ಸ್ಪೀಕರ್ ಕಾಗೇರಿ ಹೇಳಿದಾಗ ಯಡಿಯೂರಪ್ಪ ಪರ ಮಾತನಾಡಿದ ಯತ್ನಾಳ್, ಅದೇನೇ ಇರಲಿ, ಯಡಿಯೂರಪ್ಪ ಕಷ್ಟ ಕಾಲದಲ್ಲಿ ನಮ್ಮ ಜೊತೆಗೆ ನಿಂತಿದ್ದಾರೆ. ವಿಜಯಪುರಕ್ಕೆ ಬಸ್ಸಿನಲ್ಲಿ ಬರುತ್ತಿದ್ದರು. ನಾನು ಬ್ಯಾಗ್ ಹಿಡಿದುಕೊಂಡು ಬರುತ್ತಿದ್ದೆ. ಶ್ರೀಕಾಂತ್ ಕುಲಕರ್ಣಿ ಪೇಪರ್ ಹಿಡಿದುಕೊಂಡು ಬರುತ್ತಿದ್ದ. ಇಬ್ಬರು ಆಟೋದಲ್ಲಿ ಯಡಿಯೂರಪ್ಪ ಅವರನ್ನ ಬಿಟ್ಟು ಬರುತ್ತಿದ್ದೆವು. ಮನೆ, ಮಠ ಬಿಟ್ಟು ಬಿಜೆಪಿ (BJP) ಪಕ್ಷ ಕಟ್ಟಿದ್ದಾರೆ, ಅದನ್ನ ಮರೆಯಲ್ಲ ಅಂತ ಯತ್ನಾಳ್ ಹೇಳಿದ್ರು. ಇದನ್ನೂ ಓದಿ: ಅಧಿವೇಶನ ಮುಗಿಸಿ ಸಿಸಿಎಲ್ ಪಂದ್ಯ ವೀಕ್ಷಣೆಗೆ ಬಂದ ಸಿಎಂ ಬೊಮ್ಮಾಯಿ
Advertisement
Advertisement
ಯಡಿಯೂರಪ್ಪ ಅವರು ನಮ್ಮ ನಾಯಕರು, ನಮ್ಮ ನಡುವೆ ಏನೇ ವೈಷಮ್ಯ ಇರಬಹುದು. ರಾಜ್ಯದಲ್ಲಿ ಪಕ್ಷ ಕಟ್ಟಿದ್ದು ಯಡಿಯೂರಪ್ಪ, ಅನಂತ್ ಕುಮಾರ್ (Ananth Kumar) ಅವರು. ಉತ್ತರ ಕರ್ನಾಟಕದ ಭಾಗಕ್ಕೆ ನಾನು ಕೇಂದ್ರದಲ್ಲಿ ಮಂತ್ರಿ ಆಗುವ ಅವಕಾಶ ಸಿಕ್ಕಿತ್ತು. ಎಲ್ಲರೂ ಆಗ ಹೇ ಕೆಲಸ ಮಾಡಿಕೊಡಪ್ಪ ಅಂತಿದ್ರು. ಈಗ ಆರ್ ಅಶೋಕ್ ಅವರು, ಮುನಿರತ್ನ, ಸುಧಾಕರ್, ಸಿ.ಸಿ ಪಾಟೀಲ್, ಗೃಹ ಮಂತ್ರಿಗಳು ಸಹಕಾರ ನೀಡಿದ್ರು. ಮುಂದಿನ ದಿನಗಳಲ್ಲಿ ಯಾರು ಆ ಕಡೆಯವರು ಈ ಕಡೆ ಬರ್ತಾರೆ, ಈ ಕಡೆಯವರು ಆ ಕಡೆ ಹೋಗ್ತಾರೆ ಗೊತ್ತಿಲ್ಲ ಎಂದರು.
ಪಕ್ಷ ಕಟ್ಟಿ ಕೊನೆವರೆಗೂ ಉಳಿದವರು ಯಡಿಯೂರಪ್ಪ. ಈಗ ನಿಲ್ಲಲ್ಲ ಮಗನನ್ನ ರೆಡಿ ಮಾಡಿದ್ದೇನೆ ಅಂತ ಹೇಳಿದ್ದಾರೆ. ಅನೇಕರು ಮಕ್ಕಳಿಗೆ ಬಿಟ್ಟುಕೊಡೋಣ ಅಂತಿದ್ರೆ, ಇನ್ನೂ ಕೆಲವರು ಸಾಯೋವರೆಗೂ ಶಾಸಕನಾಗೇ ಉಳಿಯಬೇಕು ಅಂತಿದ್ದಾರೆ. ಅದೇನೆ ಇರಲಿ ಯಡಿಯೂರಪ್ಪ ಅವರು ನನ್ನನ್ನ ಬೆಳೆಸಿದ್ರು ಎಂದು ಯತ್ನಾಳ್ ನೆನಪಿಸಿಕೊಂಡರು.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k