ಗಾಂಧಿನಗರ: ಲೈಂಗಿಕ ಕಿರುಕುಳ ಆರೋಪದ ಮೇಲೆ ಬರೋಡಾ ಕ್ರಿಕೆಟ್ ಅಸೋಸಿಯೇಷನ್ (ಬಿಸಿಎ) ಮಹಿಳಾ ತಂಡದ ಕೋಚ್ ಅತುಲ್ ಬೆಡಾಡೆ ಅವರನ್ನು ಶನಿವಾರ ಅಮಾನತುಗೊಳಿಸಿದೆ.
ಮಹಿಳಾ ಆಟಗಾರರು ಅತುಲ್ ಬೆಡಾಡೆ ಅವರ ಮೇಲೆ ಲೈಂಗಿಕ ಕಿರುಕುಳ ಮತ್ತು ಅನುಚಿತ ವರ್ತನೆ ಆರೋಪ ಮಾಡಿದ್ದಾರೆ. ಕಳೆದ ತಿಂಗಳು ಹಿಮಾಚಲ ಪ್ರದೇಶದಲ್ಲಿ ನಡೆದ ಟೂರ್ನಿಯಲ್ಲಿ ಈ ಘಟನೆ ಸಂಭವಿಸಿದೆ. ಹೀಗಾಗಿ ಅವರನ್ನು ತಕ್ಷಣದಿಂದಲೇ ಅಮಾನತುಗೊಳಿಸಲಾಗಿದೆ ಎಂದು ಬಿಸಿಎ ಕಾರ್ಯದರ್ಶಿ ಅಜಿತ್ ಲೆಲೆ ಹೇಳಿದ್ದಾರೆ.
Advertisement
Advertisement
ಶೀಘ್ರದಲ್ಲೇ ಸಮಿತಿ ರಚಿಸಿ ತನಿಖೆ ಆರಂಭಿಸಲಾಗುವುದು. ಈ ಸಮಿತಿಯಲ್ಲಿ ಬಿಸಿಎ ಹೊರಗಿನಿಂದ ಒಬ್ಬ ಸದಸ್ಯರು ಇರಲಿದ್ದಾರೆ ಎಂದು ಬಿಸಿಎ ಹೇಳಿದೆ. ಆದರೆ ಆರೋಪವನ್ನು ಬೆಡಾಡೆ ತಳ್ಳಿಹಾಕಿದ್ದಾರೆ. ‘ನನ್ನ ಮೇಲಿನ ಎಲ್ಲಾ ಆರೋಪಗಳು ಆಧಾರರಹಿತ ಮತ್ತು ಸತ್ಯಕ್ಕೆ ದೂರವಾಗಿವೆ ಎಂದು ತಿಳಿಸಿದ್ದಾರೆ.
Advertisement
ಭಾರತದ ಪರ 13 ಏಕದಿನ ಪಂದ್ಯಗಳನ್ನು ಆಡಿರುವ ಬೆಡಾಡೆ ಅವರು 22.57 ಸರಾಸರಿಯಲ್ಲಿ 158 ರನ್ ಗಳಿಸಿದ್ದಾರೆ. ಅವರು ಬರೋಡಾದ ಪುರುಷರ ಕ್ರಿಕೆಟ್ ತಂಡದ ಕೋಚ್ ಆಗಿದ್ದರು. ಬಳಿಕ ಅಂದ್ರೆ ಕಳೆದ ವರ್ಷ ಏಪ್ರಿಲ್‍ನಲ್ಲಿ ಮಹಿಳಾ ತಂಡದ ಕೋಚ್ ಆಗಿ ನೇಮಕಗೊಂಡಿದ್ದರು.