ಬೆಳಗಾವಿ: ಅಮಾವಾಸ್ಯೆ ಎಂದು ದೇವಸ್ಥಾನಕ್ಕೆ ಹೋದ ಸಂದರ್ಭ ಪತ್ನಿಯ (Wife) ಎದುರೇ ಗಂಡನ ಬರ್ಬರ ಹತ್ಯೆ (Murder) ಮಾಡಿರುವ ಘಟನೆ ಮೂಡಲಗಿ (Mudalagi) ತಾಲೂಕಿನ ಬನಸಿದ್ದೇಶ್ವರ ದೇವಸ್ಥಾನ (Banasiddeshwara Temple) ಮುಂದೆ ನಡೆದಿದೆ.
ಬೆಳಗಾವಿ (Belagavi) ಜಿಲ್ಲೆಯ ಮೂಡಲಗಿ ತಾಲೂಕಿನ ವಡೇರಟ್ಟಿ ಬನಸಿದ್ದೇಶ್ವರ ದೇವಸ್ಥಾನದ ಮುಂದೆ ಹೆಂಡತಿಯ ಕಣ್ಣೆದುರೇ ಗಂಡನ (Husband) ಮೇಲೆ ಮಚ್ಚು ಲಾಂಗುಗಳಿಂದ ಹಲ್ಲೆ ಮಾಡಿ ದುಷ್ಕರ್ಮಿಗಳು ಪರಾರಿ ಆಗಿದ್ದಾರೆ. ಘಟನೆಯಲ್ಲಿ ಶಂಕರ್ ಸಿದ್ದಪ್ಪ ಜಗಮುತ್ತಿ(25) ಮೃತಪಟ್ಟಿದ್ದಾರೆ. ಇದನ್ನೂ ಓದಿ: ಯುವಕನ ಹಲ್ಲೆಗೈದು ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ- ಆರೋಪಿಗಳ ಬಂಧನ
Advertisement
Advertisement
ಮೃತ ಶಂಕರ್ ಕಳೆದ ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಅಮಾವಾಸ್ಯೆ ಹಿನ್ನೆಲೆ ಇಂದು ಪತ್ನಿ ಪ್ರಿಯಾಂಕಾ ಜೊತೆಗೆ ದೇವಸ್ಥಾನಕ್ಕೆಂದು ಬಂದಿದ್ದರು. ವಡೇರಟ್ಟಿ ಗ್ರಾಮದ ಬನಸಿದ್ದೇಶ್ವರ ದೇವಸ್ಥಾನಕ್ಕೆ ಬಂದ ವೇಳೆ ಘಟನೆ ನಡೆದಿದ್ದು, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಮೂಡಲಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಜೈನಮುನಿ ಹತ್ಯೆ ಪ್ರಕರಣ – ಅಂಡರ್‌ವೇರ್ ಸಹಿತ ಕೊಲೆ ಮಾಡಲು ಬಳಸಿದ್ದ ಬಟ್ಟೆಗಳನ್ನು ಸುಟ್ಟಿದ್ದ ಹಂತಕರು
Advertisement
Web Stories