ಬೆಂಗಳೂರು: ನಗರದ ಬಾರ್ ಅಂಡ್ ರೆಸ್ಟೋರೆಂಟ್ ಗಳಲ್ಲಿ ಬೌನ್ಸರ್ ಗಳ ಗೂಂಡಾಗಿರಿ ಮಿತಿ ಮೀರಿದೆ.
ನ್ಯೂ ಬಿಇಎಲ್ ರಸ್ತೆಯಲ್ಲಿರುವ ಚಿಂಗ್ ಲುಂಗ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಬೌನ್ಸರ್ ಗಳು ಗ್ರಾಹಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಲಾ ವಿದ್ಯಾರ್ಥಿಗಳಾದ ರಿತ್ವೀಕ್ ಪಾರಿಸಷೋತ್ ಹಾಗೂ ಅಮರಜೀತ್ ಪಾರ್ಟಿ ಮಾಡಲು ಈ ಬಾರಿಗೆ ಹೋಗಿದ್ದರು.
Advertisement
ಈ ವೇಳೆ ಬೌನ್ಸರ್ ರಕ್ಷಿತ್ ಮತ್ತು ಆತನ ತಂಡ ಕ್ಷುಲ್ಲಕ ಕಾರಣಕ್ಕೆ ಪಾರ್ಟಿ ಮಾಡಲು ಬಂದಿದ್ದ ಯುವಕರ ಮೇಲೆ ಬಿಯರ್ ಬಾಟಲಿನಿಂದ ಬಾರಿನಲ್ಲೇ ಅಟ್ಟಾಡಿಸಿಕೊಂಡು ಹಲ್ಲೆ ಮಾಡಿದ್ದಾರೆ. ಅಲ್ಲದೇ ಚಿನ್ನದ ಸರವನ್ನು ಎಗರಿಸಿದ್ದಾರೆ ಎಂದು ಹಲ್ಲೆಗೊಳಗಾದ ಯುವಕ ಆರೋಪಿಸುತ್ತಿದ್ದಾನೆ.
Advertisement
ಈ ಸಂಬಂಧ ಹಲ್ಲೆಗೊಳಗಾದ ಯುವಕರು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬೌನ್ಸರ್ ರಕ್ಷಿತ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv