ಬೆಂಗಳೂರು: ಸುದೀರ್ಘವಾಗಿ ಆಸ್ಪತ್ರೆಯಲ್ಲಿ ಬದುಕು ನಡೆಸಲು ಹೋರಾಟ ನಡೆಸ್ತಿದ್ದ ವ್ಯಕ್ತಿ ಕೊನೆಗೂ ಮೃತಪಟ್ಟಿದ್ದಾರೆ.
ಕಳೆದ ಜನವರಿ 22ರಂದು ಕುಮಾರಸ್ವಾಮಿ ಲೇಔಟ್ ಪೊಲೀಸ್ (Kumaraswamy LayOut Police) ಅನತಿ ದೂರದಲ್ಲಿರುವ ಎಸ್‍ಆರ್ ಆರ್ ಬಾರ್ ನಲ್ಲಿ ಕಿರಿಕ್ ನಡೆದಿತ್ತು. ಈ ವೇಳೆ ಸುರೇಶ್ ಹಾಗೂ ವಿನೋದ್ ಎಂಬಿಬ್ಬರು ಕುಡಿದ ಅಮಲಿನಲ್ಲಿ ಬಸವರಾಜ ಎಂಬಾತನ ಮೇಲೆ ಹಲ್ಲೆ ನಡೆಸಿದ್ರು. ಸಾವಿನ ಜೊತೆ ಹೋರಾಟ ನಡೆಸುತ್ತಿದ್ದ ಬಸವರಾಜು ಗುರುವಾರ ಸಾವನ್ನಪ್ಪಿದ್ದಾನೆ.
Advertisement
Advertisement
ಸುರೇಶ್ ಹಾಗೂ ವಿನೋದ್ ಇಬ್ಬರೂ ಪದವೀಧರರು. ಎಲೆಕ್ಟ್ರಾನಿಕ್‍ಗೆ ಸಂಬಂಧಿಸಿದ ಕೆಲಸವನ್ನ ಮಾಡುತ್ತಿದ್ದರು. ಕಳೆದ ತಿಂಗಳು 22 ರರಂದು ಸಂಜೆ ಮದ್ಯ ಸೇವನೆಗೆ ಎಸ್‍ಆರ್ ಆರ್ ಬಾರ್‌ಗೆ ಬಂದಿದ್ದಾರೆ. ಈ ವೇಳೆ ಬಸವರಾಜ, ಮದ್ಯ ಕೊಡಲು ತಡ ಮಾಡಿದ್ದ. ಇದರಿಂದ ಬೇಸತ್ತು ಸುರೇಶ್ ಹಾಗೂ ವಿನೋದ್ ಅಲ್ಲಿಂದ ತೆರಳಿದ್ದರು. ಅಷ್ಟಾಗಿದ್ದರೆ ಮುಗೀತಿತ್ತೆನೋ. ಆದರೆ ಅದೇ ದಿನ ರಾತ್ರಿ ಇಬ್ಬರು ಕಂಠಪೂರ್ತಿ ಕುಡಿದು 10.30ರ ವೇಳೆಗೆ ಎಸ್‍ಆರ್ ಆರ್ ಬಾರ್‌ಗೆ ಬಂದಿದ್ದಾರೆ. ಬಾರ್ ಕ್ಲೋಸ್ ಆಗಿದ್ದ ಕಾರಣ ಎಲ್ಲರೂ ಕ್ಲೀನಿಂಗ್ ಕೆಲಸಗಳನ್ನ ಮಾಡುತ್ತಿದ್ದರು. ಈ ವೇಳೆ ಬಸವರಾಜನ ಜೊತೆ ಸುರೇಶ್ ಹಾಗೂ ವಿನೋದ್ ಇಬ್ಬರೂ ಸೇರಿ ಕಿರಿಕ್ ಮಾಡಿದ್ದಾರೆ. ಇದನ್ನೂ ಓದಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್‌ಗೆ ಪತ್ನಿ ವಿಯೋಗ
Advertisement
Advertisement
ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಹೋದಾಗ ಇಬ್ಬರು ಆರೋಪಿಗಳು ಬಸವರಾಜನನ್ನ ದೂಡಿದಾಗ ಬಸವರಾಜ ತಲೆ ಗೋಡೆಗೆ ಹೊಡೆದಿದೆ. ಆಗ ಕಿವಿ ಭಾಗದಲ್ಲಿ ರಕ್ತ ಬಂದಿದೆ. ಖಾಸಗಿ ಆಸ್ಪತ್ರೆಗೆ ಅಂದು ರಾತ್ರಿಯೇ ಕರೆದೊಯ್ದು ಡ್ರೆಸ್ಸಿಂಗ್ ಮಾಡಲಾಗಿತ್ತು. ಗಾಯ ಸಣ್ಣದು ಎಂದು ಬಸವರಾಜ ಆಸ್ಪತ್ರೆಗೂ ದಾಖಲಾಗದೆ ನಿರ್ಲಕ್ಷ್ಯ ವಹಿಸಿದ್ದ. ಮಾರನೇ ದಿನ ಸುರೇಶ್ ಹಾಗೂ ವಿನೋದ್ ಮೇಲೆ ದೂರು ದಾಖಲಿಸಿ ಕರ್ತವ್ಯಕ್ಕೆ ಹಾಜರಾಗಿದ್ದ. ಸ್ವಲ್ಪ ಸಮಯದ ಬಳಿಕ ತಲೆ ತಿರುಗಿ ಕುಸಿದು ಬಿದ್ದ ಬಸವರಾಜನನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು.
ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ ಕಾರಣ ಕೋಮಾಗೆ ಜಾರಿದ್ದ. ಯಾವುದೇ ಚಿಕಿತ್ಸೆಗೂ ಆತ ಸ್ಪಂದನೆ ಮಾಡ್ತಿರಲಿಲ್ಲ ಹೀಗೆ ಕೋಮಾ ಸೇರಿದ್ದ ಬಸವರಾಜ 23 ದಿನಗಳ ಬಳಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಹಲ್ಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಈಗ ಕೊಲೆ ಕೇಸನ್ನಾಗಿ ಪರಿವರ್ತಿಸುವ ಸಾಧ್ಯತ ಇದೆ. ಏನೂ ಆಗಿಲ್ಲ ಎಂದು ವಾಪಸ್ ಬಂದಿದ್ದವನು ಮಾರನೇ ದಿನವೇ ಕೋಮಾಗೆ ಹೋಗಿದ್ದಾನೆ. ಇದರಲ್ಲಿ ಬಸವರಾಜನ ನಿರ್ಲಕ್ಷ್ಯ ಕೂಡ ಇದೆ.
ಸದ್ಯ ಈ ಪ್ರಕರಣ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸರು ಆರೋಪಿಗಳನ್ನ ಮತ್ತೆ ಕಸ್ಟಡಿಗೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k