ಬೂಕರ್‌ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್‌ರಿಂದ ಈ ಬಾರಿ ದಸರಾ ಉದ್ಘಾಟನೆ?

Public TV
2 Min Read
banu mushtaq 2

– ಸೆ.22ರಿಂದ 11 ದಿನಗಳ ಕಾಲ ವಿಜೃಂಭಣೆಯ ದಸರಾ

ಬೆಂಗಳೂರು/ಮೈಸೂರು: ಈ ಬಾರಿ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರ ವರೆಗೆ ಒಟ್ಟು 11 ದಿನಗಳ ಕಾಲ ದಸರಾ ಆಚರಣೆ ನಡೆಯಲಿದ್ದು, ಬೂಕರ್‌ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್‌ (Banu Mushtaq) ಅಥವಾ ದೀಪಾ ಭಾಸ್ತಿ (Deepa Bhasthi) (ಬರಹಗಾರ್ತಿ ಮತ್ತು ಅನುವಾದಕಿ) ಅವರನ್ನ ಉದ್ಘಾಟಕರಾಗಿ ಪರಿಗಣಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ.

mysuru dasara jamboo savari 11 1

ಈ ಬಾರಿ ಮಹಿಳೆಯರ ಹೆಸರೇ ಅಂತಿಮಗೊಳಿಸಲು ಸಿಎಂ ನಿರ್ಧರಿಸಿದ್ರೆ ಅವರಿಬ್ಬರಲ್ಲಿ ಒಬ್ಬರು ದಸರಾ (Mysuru Dasara) ಉದ್ಘಾಟಕರಾಗಿ ಆಯ್ಕೆ ಆಗುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಉದ್ಘಾಟಕರ ಆಯ್ಕೆ ಅಧಿಕಾರ ನನಗೆ ನೀಡಿದ್ದಾರೆ. ಒಂದು ವಾರ ಅಥವಾ 15 ದಿನದಲ್ಲಿ ವಿಚಾರ ಮಾಡಿ ತಿಳಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: Mysuru Dasara | ಸೆ.22ರಿಂದ 11 ದಿನಗಳ ಕಾಲ ವಿಜೃಂಭಣೆಯ ದಸರಾ

banu mushtaq

ದಸರಾ ಆಚರಣೆ ಕುರಿತ ಪೂರ್ವಭಾವಿ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ನಾಡಹಬ್ಬ ದಸರಾವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ವಿಜೃಂಭಣೆ ರಭಸದಲ್ಲಿ ದಸರಾದ ಚಾರಿತ್ರಿಕ ಮಹತ್ವ ಮರೆಯಾಗಬಾರದು. ಅನಗತ್ಯವಾಗಿ ಹಣ ಖರ್ಚು ಮಾಡುವುದು ವೈಭವ ಅಲ್ಲ. ಜನರ ಸುರಕ್ಷತೆ ಮತ್ತು ಅನುಕೂಲಕ್ಕೆ ಪ್ರಥಮ ಆದ್ಯತೆ ಇರಲಿ ಎಂದು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಕೋಡಿಮಠ ಸ್ವಾಮೀಜಿ ಚಿನ್ನಾಭರಣ ಕಳ್ಳತನ; 7 ವರ್ಷಗಳ ಬಳಿಕ ಆರೋಪಿ ಬಂಧನ

mysuru dasara jamboo savari

ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರ ವರೆಗೆ ಒಟ್ಟು 11 ದಿನಗಳ ಕಾಲ ದಸರಾ ಆಚರಣೆ ನಡೆಯಲಿದೆ. ಕಳೆದ 100 ವರ್ಷದಲ್ಲಿ 8 ನೇ ಬಾರಿ 11 ದಿನದ ದಸರಾ ಆಚರಣೆ ಮಾಡಲಾಗುತ್ತಿದೆ. ಈ ಬಾರಿಯೂ 21 ದಿನಗಳ ಕಾಲ ದೀಪ ಅಲಂಕಾರ ಇರಲಿದೆ. ಈ ಬಾರಿ ಅಂದಾಜು 10 ಲಕ್ಷ ಜನ ದಸರಾದಲ್ಲಿ ಭಾಗವಹಿಸಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ಹೇಳಿದ್ದಾರೆ.

ಪೊಲೀಸರು ಜನಸ್ನೇಹಿ ಆಗಿರಬೇಕು. ಪ್ರವಾಸಿಗರೊಂದಿಗೆ ಪ್ರೀತಿಯಿಂದ ವರ್ತಿಸಬೇಕು. ದಸರಾ ಕೊನೆಯ ದಿನ ಅಕ್ಟೋಬರ್ 2 ಗಾಂಧಿ ಜಯಂತಿ, ಹೀಗಾಗಿ ಟ್ಯಾಬ್ಲೋದಲ್ಲಿ ಗಾಂಧಿ ಜಯಂತಿಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಆಪರೇಷನ್ ಸಿಂಧೂರ ವೇಳೆ S-400 ಯಶಸ್ವಿ ಕಾರ್ಯಾಚರಣೆ; S-500 ರಕ್ಷಣಾ ವ್ಯವಸ್ಥೆ ಖರೀದಿಗೂ ಆಸಕ್ತಿ ತೋರಿದ ಭಾರತ

Share This Article