ಬೆಂಗಳೂರು: ಗುರುವಾರ ಒಂದು ದಿನ ಪ್ರವಾಸಿಗರಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನ (Bannerghatta National Park) ವೀಕ್ಷಣೆಯನ್ನು ಬಂದ್ ಮಾಡಲಾಗಿದೆ.
ಭಾರತ ಜಿ-20 (G20) ಆತಿಥ್ಯವನ್ನು ವಹಿಸಿಕೊಂಡ ಹಿನ್ನೆಲೆಯಲ್ಲಿ ಅನೇಕ ತಾಂತ್ರಿಕ ಕಾರ್ಯಗುಂಪುಗಳ ಸಭೆಗಳನ್ನು ದೇಶದ ವಿವಿಧ ನಗರಗಳಲ್ಲಿ ಆಯೋಜಿಸಲಾಗುತ್ತಿದೆ. ಭೂ ಅಪಮೌಲ್ಯೀಕರಣದ ಪ್ರತಿಬಂಧನ (ತಡೆ), ಜೀವ ಪರಿಸರ ಮರುಸ್ಥಾಪನೆಯ ತ್ವರಿತಗೊಳಿಸುವಿಕೆ, ಜೀವ ವೈವಿಧ್ಯತೆಯ ಸಮೃದ್ದೀಕರಣ ವಿಷಯದಡಿ ಬೆಂಗಳೂರಿನಲ್ಲಿ ಫೆ.9 ರಿಂದ 12 ರವರೆಗೆ ಸಭೆ ನಡೆಯಲಿದ್ದು, ಸುಮಾರು 20 ದೇಶದ ಪ್ರತಿನಿಧಿಗಳು ಬೆಂಗಳೂರಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಇದನ್ನೂ ಓದಿ: ಚುನಾವಣೆ ಹೊತ್ತಲ್ಲಿ ಡಿಕೆಶಿಗೆ ಮಾಸ್ಟರ್ ಸ್ಟ್ರೋಕ್!
Advertisement
Advertisement
ಫೆ.9 ರಂದು ಬನ್ನೇರುಘಟ್ಟ ಜೈವಿಕ ಉದ್ಯಾನವನವನ್ನು ಆಯ್ಕೆ ಮಾಡಲಾಗಿರುವ ಹಿನ್ನೆಲೆಯಲ್ಲಿ ಪ್ರತಿನಿಧಿಗಳು ಉದ್ಯಾನವನದ ವೀಕ್ಷಣೆಗೆ ಬರುವುದರಿಂದ ಭದ್ರತೆಯ ದೃಷ್ಟಿಯಿಂದ ಜೈವಿಕ ಉದ್ಯಾನವನದ ಮೃಗಾಲಯ, ಸಫಾರಿ ಮತ್ತು ಚಿಟ್ಟೆ ಉದ್ಯಾನ ಬಂದ್ ಆಗಿಲಿದ್ದು, ಪ್ರವಾಸಿಗರಿಗೆ ಯಾವುದೇ ರೀತಿಯ ಪಾರ್ಕ್ ಭೇಟಿಗೆ ಅವಕಾಶ ಇರುವುದಿಲ್ಲ.
Advertisement
ಕೇಂದ್ರ ಸೇರಿದಂತೆ ವಿವಿಧ ಭಾಗದಿಂದ ಸಾಕಷ್ಟು ಪ್ರತಿನಿಧಿಗಳು ಆಗಮಿಸುತ್ತಿರುವ ಹಿನ್ನೆಲೆ ಸುರಕ್ಷತೆಯ ದೃಷ್ಟಿಯಿಂದ ಪಾರ್ಕ್ ಬಂದ್ ಮಾಡಲಾಗುತ್ತಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k