ಬೆಂಗಳೂರು: ಭಾರತದ ಸ್ಟಾರ್ ಓಟಗಾರ್ತಿ ಹಿಮಾ ದಾಸ್ ಅವರ ಹೆಸರನ್ನು ಹುಲಿಮರಿಗೆ ಇಡುವ ಮೂಲಕ ಬನ್ನೇರುಘಟ್ಟ ಜೈವಿಕ ಉದ್ಯಾನವನ ಗೌರವ ಸಲ್ಲಿಸಿದೆ.
ಹಿಮಾ ದಾಸ್ ಒಂದು ತಿಂಗಳ ಕಡಿಮೆ ಅವಧಿಯಲ್ಲಿ ಬ್ಯಾಕ್ ಟು ಬ್ಯಾಕ್ ಚಿನ್ನದ ಪದಕ ಗೆದ್ದಿದ್ದಾರೆ. ಹಾಗಾಗಿ ಅವರಿಗೆ ಗೌರವ ನೀಸಲು ವಿಶ್ವ ಹುಲಿ ದಿನಾಚರಣೆಯ ದಿನದಂದು ಬನ್ನೇರುಘಟ್ಟ ಪಾರ್ಕಿನಲ್ಲಿ 6 ತಿಂಗಳ ರಾಯಲ್ ಬೆಂಗಾಲ್ ಹುಲಿಮರಿಗೆ ಹಿಮಾ ದಾಸ್ ಎಂದು ಹೆಸರಿಟ್ಟಿದ್ದಾರೆ.
Advertisement
ವಿಶ್ವ ಹುಲಿ ದಿನಾಚರಣೆ ಆಚರಿಸುವ ವೇಳೆ ಮೃಗಾಲಯದ ಯೋಜನೆಗಳನ್ನು ಮತ್ತು ಉಪಕ್ರಮವನ್ನು ಹೇಳುವಾಗ ಸರ್ಕಾರಿ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ನವಶ್ರೀ ವಿಪಿನ್ ಸಿಂಗ್ ಇದನ್ನು ಘೋಷಿಸಿದ್ದಾರೆ. ಅಲ್ಲದೆ ವಿಶ್ವ ಹುಲಿ ದಿನಾಚರಣೆಯಂದು ಸಾರ್ವಜನಿಕರು ವೀಕ್ಷಿಸಲು ಎಂದು 8 ಹುಲಿಗಳನ್ನು ಸಫಾರಿಗೆ ಬಿಟ್ಟಿದ್ದೇವು. ಒಟ್ಟು 8 ಹುಲಿಯಲ್ಲಿ ತಾಯಿ ಸೇರಿ 7 ಮಕ್ಕಳಿದ್ದು, ಒಂದಕ್ಕೆ ಹಿಮಾ ದಾಸ್ ಅವರ ಹೆಸರನ್ನು ಇಡಲಾಗಿದೆ. ಕಳೆದ 20 ದಿನದಲ್ಲಿ ಹಿಮಾ ದಾಸ್ 5 ಚಿನ್ನದ ಪದಕ ಗೆದ್ದಿದ್ದು, ಹಾಗಾಗಿ ನಾವು ಈ ರೀತಿ ಅವರಿಗೆ ಗೌರವ ಸೂಚಿಸುತ್ತಿದ್ದೇವೆ ಎಂದು ನವಶ್ರೀ ವಿಪಿನ್ ಸಿಂಗ್ ತಿಳಿಸಿದ್ದಾರೆ.
Advertisement
Advertisement
ಹಿಮಾ ಅವರ ಐದು ಚಿನ್ನದ ಪದಕದ ಪಟ್ಟಿ:
1. ಜುಲೈ 2ರಂದು ಪೊಲೆಂಡ್‍ನಲ್ಲಿ ನಡೆದಿದ್ದ ಪೊಜ್ನಾನ್ ಅಥ್ಲೆಟಿಕ್ಸ್ ಪ್ರಿಕ್ಸ್ ನಲ್ಲಿ ಹಿಮಾದಾಸ್ ಅವರು 200 ಮೀಟರ್ ಓಟವನ್ನು 23.65 ಸೆಕೆಂಡ್‍ಗಳಲ್ಲಿ ಮುಗಿಸಿ ಮೊದಲ ಚಿನ್ನದ ಪದಕ ಗೆದ್ದಿದ್ದರು.
Advertisement
2. ನಂತರ ಜುಲೈ 8 ರಂದು ಕುಟ್ನೊ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ದೂರವನ್ನು 23.97 ಸೆಕೆಂಡ್‍ಗಳಲ್ಲಿ ಕ್ರಮಿಸಿ ಎರಡನೇ ಚಿನ್ನ ಪದಕವನ್ನು ಪಡೆದರು.
3. ಜುಲೈ 13 ರಂದು ಜೆಕ್ ಗಣರಾಜ್ಯದಲ್ಲಿ ನಡೆದ ಕ್ಲಾಡ್ನೊ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ಸ್ಪರ್ಧೆಯನ್ನು 23.43 ಸೆಕೆಂಡ್‍ಗಳಲ್ಲಿ ಪೂರ್ಣಗೊಳಿಸಿ ಮೂರನೇ ಚಿನ್ನದ ಪದಕವನ್ನು ಪಡೆದುಕೊಂಡಿದ್ದರು.
4. ಜುಲೈ 18ರಂದು ಜೆಕ್ ರಿಪಬ್ಲಿಕ್‍ನಲ್ಲಿ ನಡೆದ ಟ್ಯಾಬರ್ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ಓಟವನ್ನು 23.25 ಸೆಕೆಂಡ್‍ನಲ್ಲಿ ಪೂರ್ಣಗೊಳಿಸುವ ಮೂಲಕ ನಾಲ್ಕನೇ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು.
5. ಈಗ ಜುಲೈ 20ರಂದು 400 ಮೀಟರ್ ಓಟವನ್ನು 52.09 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ತಮ್ಮ ಐದನೇ ಚಿನ್ನದ ಪದಕವನ್ನು ಗಳಿಸಿದ್ದಾರೆ.