ಚಿಕ್ಕಬಳ್ಳಾಪುರ: ಅಬ್ಬಬ್ಬಾ ಮೂರು ದಿನಗಳಿಂದ ಚಳಿಗೆ ಜನ ಗಡ ಗಡ ನಡುಗುವಂತಾಗಿದೆ.. ಬಿಸಿ ಬಿಸಿ ಕಾಫಿ ಟೀ ಕುಡಿದು ಬೆಚ್ಚಗೆ ಇದ್ರೆ ಸಾಕು ಅನಿಸುತ್ತಿದೆ.. ಅದ್ರಲ್ಲೂ ನಾನ್ ವೆಜ್ ಪ್ರಿಯರಿಗಂತೂ ಚಳಿಗೆ ಚಿಕನ್-ಮಟನ್ ತಿಂದು ಬೆಚ್ಚಗೆ ಇರೋಣ ಅಂತಿದ್ದಾರೆ. ಆದ್ರೆ ನಾನ್ ವೆಜ್ ಮಾಡಬೇಕು ಅಂದ್ರೆ ಮಸಾಲ ಮಾಂತ್ರಿಕ ಬೆಳ್ಳುಳ್ಳಿ ಬೇಕೇ ಬೇಕು. ದಿನೇ ದಿನೇ ಬೆಳ್ಳುಳ್ಳಿ ರೇಟ್ ದುಬಾರಿಯಾಗುತ್ತಿದೆ. ಇದ್ರಿಂದ ಮಾರುಕಟ್ಟೆಗೆ (Chikkaballapura Market) ಭಾರತ ಬ್ಯಾನ್ ಮಾಡಿರೋ ಚೀನಾ ಬೆಳ್ಳುಳ್ಳಿ (China Garlic) ಎಂಟ್ರಿಯಾಗಿರೋ ಅನುಮಾನ ಮೂಡಿದ್ದು ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.
Advertisement
ಹೌದು, ಅಚ್ಚರಿ ಆಶ್ಚರ್ಯ ಚಕಿತರಾಗಿ ಚಿಕ್ಕಬಳ್ಳಾಪುರದಲ್ಲಿ ಮಹಿಳೆಯರು ಸಹ ಅದ್ಯಾವುದಪ್ಪ ಈ ಬೆಳ್ಳುಳ್ಳಿ ಅಂತ ಬಾಯ್ ಬಾಯ್ ಕಣ್ ಕಣ್ ಬಿಟ್ಟುಕೊಂಡು ನೋಡ್ತಿದ್ದಾರೆ. ಅಂದಹಾಗೆ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಕೆಜಿಗೆ 400 ರಿಂದ 500 ರೂ. ಇದೆ. ದಿನೇ ದಿನೇ ಬೆಳ್ಳುಳ್ಳಿ ರೇಟ್ ಗಗನಕ್ಕೆ ಏರುತ್ತಿದೆ. ಹಾಗಾಗಿ ಈಗ ಚಿಕ್ಕಬಳ್ಳಾಪುರದ ಮಾರುಕಟ್ಟೆಗಳಲ್ಲಿ ಎಲ್ಲಿ ನೋಡಿದ್ರೂ ಈಗ ದಪ್ಪನಾಗಿ ಕಾಣ್ತಿರುವ ಬೆಳ್ಳುಳ್ಳಿ ಚೀನಾ ಬೆಳ್ಳುಳ್ಳಿ ಎನ್ನಲಾಗ್ತಿದೆ. ಇದನ್ನೂ ಓದಿ: ಮುಸ್ಲಿಮರಿಗೆ ಮತದಾನದ ಹಕ್ಕಿಲ್ಲದಂತೆ ಮಾಡಬೇಕು ಎಂದಿದ್ದ ಚಂದ್ರಶೇಖರ ಸ್ವಾಮೀಜಿ ವಿರುದ್ಧ ಎಫ್‌ಐಆರ್
Advertisement
Advertisement
ಅಂದ ಹಾಗೆ ದೇಸಿ ಬೆಳ್ಳುಳ್ಳಿ ರುಚಿ ಇರುತ್ತದೆ. ವಾಸನೆಯಲ್ಲಿ ಬಹಳಷ್ಟು ಘಾಟು ಇರುತ್ತದೆ. ಬಿಳಿ ಬಣ್ಣದಿಂದ ಕೂಡಿದ್ರೂ ಬೆಳ್ಳುಳ್ಳಿ ಎಸಳುಗಳು ಕಾರ್ನರ್‌ಗಳಲ್ಲಿ ಗುಲಾಬಿ ಕೆಂಬಣ್ಣದಿಂದ ಕೂಡಿರಲಿದೆ. ಆದ್ರೆ ಈ ದಪ್ಪನೆಯ ಬೆಳ್ಳುಳ್ಳಿ ಶುಭ್ರ ಬಿಳಿ ಬಣ್ಣದಿಂದ ಕೂಡಿದ್ದು, ವಾಸನೆ ರುಚಿ ಇಲ್ಲ, ದೇಸಿ ಬೆಳ್ಳುಳ್ಳಿಯಂತೆ ಘಾಟು ಸಹ ಇಲ್ಲ. ಇದ್ರಿಂದ ಇದು ಭಾರತ ನಿಷೇಧ ಮಾಡಿರೋ ಚೀನಾ ಬೆಳ್ಳುಳ್ಳಿ ಅನ್ನೋ ಅನುಮಾನ ಎಲ್ಲರನ್ನ ಕಾಡತೊಡಗಿದೆ. ಹಾಗಾಗಿ ಅಧಿಕಾರಿಗಳು ಸಹ ಈ ಬಗ್ಗೆ ಪರಿಶೀಲನೆ ನಡೆಸಿ ಕೂಡಲೇ ಕ್ರಮ ಕೈಗೊಳ್ತೇವೆ ಅಂತಿದ್ದಾರೆ.
Advertisement
ಒಟ್ಟಿನಲ್ಲಿ ಬೆಳ್ಳುಳ್ಳಿ ಬೆಲೆ ದುಬಾರಿಯಾಗಿದ್ದೇ ದೇಶಕ್ಕೆ ಚೀನಾ ಗಾರ್ಲಿಕ್ ಕಳ್ಳ ಮಾರ್ಗದಲ್ಲಿ ಎಂಟ್ರಿಯಾಗ್ತಿರೋ ಬಲವಾದ ಅನುಮಾನಗಳು ಮೂಡುತ್ತಿವೆ. ಸಗಟು ವ್ಯಾಪಾರಿಗಳು ಕಡಿಮೆ ಬೆಲೆ ಅಂತ ಚೈನೀಸ್ ಬೆಳ್ಳುಳ್ಳಿ ತಂದು ಮಾರಾಟ ಮಾಡ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಭಾರತ ಬ್ಯಾನ್ ಮಾಡಿರೋ ರಾಸಾಯನಿಕಯುಕ್ತ ಕ್ಯಾನ್ಸರ್ ಕಾರಕ ಬೆಳ್ಳುಳ್ಳಿಗೆ ಬ್ರೇಕ್ ಹಾಕಬೇಕಿದೆ. ಇದನ್ನೂ ಓದಿ: ಡ್ರಾಪ್ ಕೊಡುವ ನೆಪದಲ್ಲಿ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ – ಅಪರಾಧಿಗಳಿಗೆ 10 ವರ್ಷ ಶಿಕ್ಷೆ