ಮೈಸೂರು: ಜಿಲ್ಲೆಯಲ್ಲಿ ಬ್ಯಾಂಕ್ ದರೋಡೆ ನಡೆದಿದ್ದು, ಬ್ಯಾಂಕಿನಲ್ಲಿದ್ದ 3.80 ಕೋಟಿ ರೂ. ಮೌಲ್ಯದ 12 ಕೆ.ಜಿ. ಚಿನ್ನ ಮತ್ತು 5 ಲಕ್ಷದ 14 ಸಾವಿರ ನಗದನ್ನು ದರೋಡೆಕೋರರು ದೋಚಿ ಪರಾರಿಯಾಗಿದ್ದಾರೆ.
ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಕ್ಯಾತನಹಳ್ಳಿಯ ಕಾವೇರಿ ಗ್ರಾಮೀಣ ಬ್ಯಾಂಕ್ ನಲ್ಲಿ ಸೋಮವಾರ ರಾತ್ರಿ ದರೋಡೆ ನಡೆದಿದೆ. ದರೋಡೆಕೋರರು ಗ್ಯಾಸ್ ಕಟರ್ ಮೂಲಕ ಬ್ಯಾಂಕಿನ ಕಿಟಕಿ ಸರಳುಗಳನ್ನು ಕತ್ತರಿಸಿ ಒಳನುಗ್ಗಿದ್ದಾರೆ. ಬಳಿಕ ವಿದ್ಯುತ್ ಕಡಿತಗೊಳಿಸಿ, ವಿದ್ಯುತ್ ಚಾಲಿತ ಅಲಾರಾಂ, ಸಿಸಿಟಿವಿಗಳನ್ನು ನಿಷ್ಕ್ರಿಯಗೊಳಿಸಿ ಈ ದರೋಡೆ ನಡೆಸಿದ್ದಾರೆ.
Advertisement
Advertisement
ಬ್ಯಾಂಕಿನಲ್ಲಿದ್ದ ಸುಮಾರು ಮೂರು ಕೋಟಿ 80ಲಕ್ಷ ರೂ. ಮೌಲ್ಯದ 12 ಕೆ.ಜಿ. ಚಿನ್ನ ಮತ್ತು 5 ಲಕ್ಷದ 14 ಸಾವಿರ ನಗದನ್ನು ದರೋಡೆಕೋರರು ದೋಚಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಹೆಚ್.ಡಿ.ಕೋಟೆ ಠಾಣೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
Advertisement
ಸಾಮಾನ್ಯವಾಗಿ ಮನೆಯಲ್ಲಿ ದರೋಡೆ ಮಾಡುವ ರೀತಿ ಬ್ಯಾಂಕಿನಲ್ಲಿ ದರೋಡೆಕೋರರು ದೋಚಿದ್ದಾರೆ. ಈ ಬ್ಯಾಂಕಿನಲ್ಲಿ ಲಾಕರ್ ವ್ಯವಸ್ಥೆ ಕೂಡ ಇರಲಿಲ್ಲ. ದರೋಡೆ ನಡೆಯುತ್ತಿದ್ದ ಸಂದರ್ಭದಲ್ಲಿ ಸೆಕ್ಯೂರಿಟಿ ಮತ್ತು ಅಲಾರಾಂ ಕೂಡ ಶಬ್ದ ಇರಲಿಲ್ಲ. ಇದೆಲ್ಲವನ್ನು ನೋಡಿದರೆ ಬ್ಯಾಂಕಿನವರ ನಿರ್ಲಕ್ಷ್ಯದಿಂದ ಈ ದರೋಡೆ ನಡೆದಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=lUARu8ldZyg