ಮುಂಬೈ: ಹಗಲು ಹೊತ್ತಿನಲ್ಲಿಯೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ)ದಲ್ಲಿ ದರೋಡೆ ನಡೆದಿದ್ದು, ಈ ವೇಳೆ ಬ್ಯಾಂಕ್ ಸಿಬ್ಬಂದಿಯನ್ನು ಹತ್ಯೆ ಮಾಡಲಾದ ಘಟನೆ ಮುಂಬೈನಲ್ಲಿ ನಡೆದಿದೆ.
ಇಬ್ಬರು ಮುಸುಕುಧಾರಿಗಳು ನಿನ್ನೆ ದಹಿಸರ್ ಪ್ರದೇಶದಲ್ಲಿರುವ ಎಸ್‍ಬಿಐ ಶಾಖೆಗೆ ನುಗ್ಗಿದ್ದು, ಬ್ಯಾಂಕ್ ಉದ್ಯೋಗಿಯ ಮೇಲೆ ಗುಂಡು ಹಾರಿಸಿದ್ದಾರೆ. ನಂತರ ಬ್ಯಾಂಕ್‍ನಲ್ಲಿದ್ದ 2.5 ಲಕ್ಷ ರೂ. ದೋಚಿಕೊಂಡು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಗ್ಯಾಂಗ್ ವಾರ್ ದ್ವೇಷಕ್ಕೆ ಇಬ್ಬರು ಮಕ್ಕಳು ಸೇರಿ 8 ಮಂದಿ ಬಲಿ
Advertisement
Advertisement
ಹೇಗೆ ನಡೆಯಿತು?
ಎಂಎಚ್‍ಬಿ ಕಾಲೋನಿಯ ಜಯವಂತ್ ಸಾವಂತ್ ರಸ್ತೆಯಲ್ಲಿರುವ ಈ ಬ್ಯಾಂಕ್‍ನಲ್ಲಿ ಕಾವಲು ಕಾಯಲು ಯಾವುದೇ ಭದ್ರತಾ ಸಿಬ್ಬಂದಿ ಇರಲಿಲ್ಲ. ಅಲ್ಲದೇ ಶಟರ್ ಸಹ ಅರ್ಧದಷ್ಟು ಮುಚ್ಚಲ್ಪಟ್ಟಿದ್ದು. ಈ ವೇಳೆ ದರೋಡೆಕೋರರು ಬಂದಿದ್ದಾರೆ.
Advertisement
ದರೋಡೆಕೋರರು ಬ್ಯಾಂಕ್ ಒಳಗೆ ಬಂದ ತಕ್ಷಣ ಬಂದೂಕನ್ನು ಹಿಂಡಿದುಕೊಂಡು ಬ್ಯಾಂಕ್ ಸಿಬ್ಬಂದಿಯನ್ನು ಬೆದರಿಸಿದ್ದಾರೆ. ಈ ವೇಳೆ ಸಿಬ್ಬಂದಿಯೊಬ್ಬರಿಗೆ ಗುಂಡು ಹಾರಿಸಿದ್ದಾರೆ. ನಂತರ ಹಣವನ್ನು ದೋಚಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ.
Advertisement
ಉತ್ತರ ವಲಯದ ಹೆಚ್ಚುವರಿ ಸಿಪಿ ಪ್ರವಿಂದ್ ಪಡವಾಲ್ ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ್ದು, ಬ್ಯಾಂಕ್‍ನ ದಹಿಸರ್ ಶಾಖೆಯಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಎಸ್‍ಬಿಐ ಬ್ಯಾಂಕ್ ಮೇಲೆ ಅಟ್ಯಾಕ್ ಮಾಡಿದ್ದಾರೆ. ಈ ವೇಳೆ ದರೋಡೆಕೋರರು ಎಸ್‍ಬಿಐ ಗುತ್ತಿಗೆ ಉದ್ಯೋಗಿ ಮೇಲೆ ಗುಂಡು ಹಾರಿಸಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.
ಹಣವನ್ನು ದರೋಡೆ ಮಾಡಿದ ನಂತರ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಕಾರ್ಫ್ ಮತ್ತು ಕ್ಯಾಪ್‍ನಿಂದ ಮುಖವನ್ನು ಮುಚ್ಚಿಕೊಂಡಿದ್ದರು. ಈ ಪರಿಣಾಮ ಅವರ ಮುಖವನ್ನು ನಾವು ಗುರುತಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮತ್ತೆ ಕೋಟ್ಯಧೀಶನಾದ ಮಲೆ ಮಹದೇಶ್ವರ – ಹುಂಡಿಯಲ್ಲಿ 2.27 ಕೋಟಿ ರೂ. ಸಂಗ್ರಹ
ದರೋಡೆಕೋರರು ಸುಮಾರು 20 ರಿಂದ 25 ವರ್ಷ ವಯಸ್ಸಿನವರಿರಬಹುದು. ಅವರು ದಹಿಸರ್ ರೈಲ್ವೆ ನಿಲ್ದಾಣದ ಕಡೆಗೆ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ.