CrimeInternationalLatestMain Post

ಗ್ಯಾಂಗ್ ವಾರ್ ದ್ವೇಷಕ್ಕೆ ಇಬ್ಬರು ಮಕ್ಕಳು ಸೇರಿ 8 ಮಂದಿ ಬಲಿ

ಮೆಕ್ಸಿಕೊ: ಗ್ಯಾಂಗ್ ವಾರ್ ದ್ವೇಷಕ್ಕೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿರುವ ಘಟನೆ ಮೆಕ್ಸಿಕೊದಲ್ಲಿ ನಡೆದಿದೆ.

ಮಂಗಳವಾರ ತಡರಾತ್ರಿ ಬೈಕ್‍ನಲ್ಲಿ ಬಂದ ಇಬ್ಬರು ಬಂದೂಕುಧಾರಿಗಳು ಗ್ವಾನಾಜುವಾಟೊ ರಾಜ್ಯದ ಸಿಲಾವೊ ಪುರಸಭೆಯ ವ್ಯಾಪ್ತಿಯ ಮನೆಗಳ ಬಳಿ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಗೆ ಜನರ ಮೇಲೆ ಏಕಾಏಕಿ ಗುಂಡು ಹಾರಿಸಿದ್ದಾರೆ. ಪರಿಣಾಮವಾಗಿ ಒಂದು ವರ್ಷದ ಮಗು ಮತ್ತು 16 ವರ್ಷದ ಬಾಲಕಿ ಸೇರಿದಂತೆ 8 ಜನರು ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ 6 ಭಯೋತ್ಪಾದಕರ ಹತ್ಯೆ

ಕಾರಣವೇನು?
ಸಾಂಟಾ ರೋಸಾ ಡಿ ಲಿಮಾ ಮತ್ತು ಜಾಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್‍ಗಳ ನಡುವಿನ ಸಂಘರ್ಷದಿಂದಾಗಿ ಗ್ವಾನಾಜುವಾಟೊ ಮೆಕ್ಸಿಕೊ ಅತ್ಯಂತ ಹಿಂಸಾತ್ಮಕ ರಾಜ್ಯಗಳಲ್ಲಿ ಒಂದಾಗಿದೆ.

ಈ ಗ್ಯಾಂಗ್‍ಗಳು ಲಾಭದಾಯಕ ಮಾದಕವಸ್ತುಗಳ ಕಳ್ಳಸಾಗಣೆ ವಿಚಾರದಲ್ಲಿ ಪರಸ್ಪರ ಪೈಪೋಟಿ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಆಗಾಗ ಘರ್ಷಣೆಯಾಗುತ್ತಿದೆ. ಇದೇ ರೀತಿ ನವೆಂಬರ್‍ನಲ್ಲಿಯೂ ಎರಡು ದಾಳಿಗಳು ಸಿಲಾವೊದಲ್ಲಿ ನಡೆದಿದ್ದು, ಈ ವೇಳೆ 11 ಜನರು ಹತ್ಯೆಯಾಗಿದ್ದರು. ಇದನ್ನೂ ಓದಿ: ಇಂದು 566 ಪ್ರಕರಣ – ಬೆಂಗಳೂರಿನಲ್ಲಿ 400 ಕೇಸ್, 4 ಸಾವು

2006ರಿಂದ ಸರ್ಕಾರವು ಮಾದಕ ದ್ರವ್ಯ ವಿರೋಧಿ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.

Leave a Reply

Your email address will not be published.

Back to top button