-ಗ್ಯಾಂಗ್ ಪ್ಲಾನ್ ಫೇಲ್ ಆಗಿದ್ದು ಹೇಗೆ?
ಬೀದರ್: ಸಿನಿಮೀಯ ರೀತಿಯಲ್ಲಿ ಹಾಡಹಗಲೇ ಬ್ಯಾಂಕ್ ದರೋಡೆ ಯತ್ನಿಸಿರುವ ಘಟನೆ ನಗರದ ಮಡಿವಾಳ ವೃತ್ತದ ಬಳಿಯ ಮುತ್ತೂಟ್ ಬ್ಯಾಂಕ್ ಬಳಿ ನಡೆದಿದೆ.
ಮುಖಕ್ಕೆ ಮಾಸ್ಕ್ ಧರಿಸಿ ಬಂದ 6 ಮಂದಿ ದುಷ್ಕರ್ಮಿಗಳು ಬ್ಯಾಂಕ್ ಒಳಗೆ ಏಕಾಏಕಿ ನುಗ್ಗಿ ಸಿಬ್ಬಂದಿಗೆ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಕೆ ಹಾಕಿ ಹಣ ದೋಚಲು ಯತ್ನಿಸಿದ್ದಾರೆ. ಆದರೆ ಈ ವೇಳೆ ಬ್ಯಾಂಕ್ ಸಿಬ್ಬಂದಿಯೊಬ್ಬರು ಸದ್ದಿಲ್ಲದೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಕುರಿತು ಮಾಹಿತಿ ಪಡೆದ ಕ್ಷಣ ಮಾತ್ರದಲ್ಲಿ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಆದರೆ ದರೋಡೆ ಮಾಡುವ ವೇಳೆ ಗುಂಪಿನ ಆರೋಪಿ ಬ್ಯಾಂಕ್ ಮುಂದೇ ನಿಂತು ಪರಿಶೀಲನೆ ನಡೆಸಿದ್ದು, ಪೊಲೀಸ್ ವಾಹನ ಕಂಡು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.
ನಡೆದಿದ್ದೇನು?
6 ಮಂದಿಯ ದರೋಡೆ ಗುಂಪು ಮುಖಕ್ಕೆ ಮಾಸ್ಕ್ ಧರಿಸಿ ಬೆಳಗ್ಗೆ 9 ಗಂಟೆ ಸಮಯದಲ್ಲಿ ಆಗಮಿಸಿದ್ದರು. ಮೊದಲೇ ಪ್ಲಾನ್ ರೂಪಿಸಿದಂತೆ ಕಂಡು ಬಂದ ಗುಂಪು ಏಕಾಏಕಿ ಬ್ಯಾಂಕ್ ಪ್ರವೇಶ ಮಾಡಿತ್ತು. ಇದಾದ ಬಳಿಕ ಕೆಲ ಸಮಯದಲ್ಲೇ ಬ್ಯಾಂಕ್ ನಿಂದ ಹೊರ ಬಂದ ಆರೋಪಿಗಳು ಕಾರು ಹತ್ತಿ ಪರಾರಿಯಾಗಲು ಸಿದ್ಧರಿದ್ದರು. ಆದರೆ ಆ ವೇಳೆ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರ ತಂಡ ಬ್ಯಾಂಕ್ ಮುಂದೇ ಕಾರ್ಯಾಚರಣೆ ನಡೆಲು ಸಿದ್ಧತೆ ನಡೆಸಿತ್ತು.
ಕ್ಷಣ ಮಾತ್ರದಲ್ಲಿ ಪೊಲೀಸರನ್ನು ಕಣ್ಣು ತಪ್ಪಿಸಿದ ಖದೀಮರು ಕಾರಿನ ಸಮೇತ ಪರಾರಿಯಾದರು. ಕೂಡಲೇ ಪೊಲೀಸರು ದರೋಡೆಕೋರರ ಕಾರು ಹಿಂಬಾಲಿಸಿದರು. ಪೊಲೀಸರು ತಮ್ಮನ್ನ ಫಾಲೋ ಮಾಡುತ್ತಿದ್ದಾರೆ ಎಂಬ ವಿಷಯ ಅರಿತ ದರೋಡೆಕೋರರು ಕಾರು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆ ವೇಳೆ ಬ್ಯಾಂಕಿನಲ್ಲಿ ಬೆರಳೆಣಿಕೆಯಷ್ಟು ಮಾತ್ರ ಸಿಬ್ಬಂದಿ ಕಾರಣ ದರೋಡೆ ಯತ್ನ ನಡೆದಿದೆ. ಈ ಎಲ್ಲಾ ದೃಶ್ಯಗಳು ಸ್ಥಳದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ದೃಶ್ಯಗಳ ಆಧಾರ ಮೇಲೆ ದರೋಡೆಗೆ ಯತ್ನಿಸಿದ ಆರೋಪಿಗಳನ್ನ ಬಂಧಿಸಲು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಘಟನೆ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv