ರಾಯಚೂರು: ರೈತರ ಸಾಲ ವಸೂಲಾತಿಗೆ ಮುಂದಾಗದಂತೆ ಬ್ಯಾಂಕ್ ಗಳಿಗೆ ಸರ್ಕಾರ ಸೂಚನೆ ನೀಡಿದ್ದರೂ ಬ್ಯಾಂಕ್‍ಗಳು ಮಾತ್ರ ರೈತರಿಗೆ ನೋಟಿಸ್ ಗಳನ್ನ ನೀಡುತ್ತಿವೆ. ರಾಯಚೂರಿನ ಬಿಜನಗೇರಾ ಗ್ರಾಮದ ರೈತ ನರಸಿಂಹರನ್ನು ಬ್ಯಾಂಕ್ ಅಧಿಕಾರಿಗಳು ನಿತ್ಯ ಬ್ಯಾಂಕ್ ಗೆ ಕರೆಯಿಸಿ ಸಾಲ ಪಾವತಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.
Advertisement
ನರಸಿಂಹ ಅವರು ತಮ್ಮ ತಾಯಿ ಹೆಸರಲ್ಲಿ, 2015 ರಲ್ಲಿ ಐಸಿಐಸಿಐ ಬ್ಯಾಂಕ್ ನಲ್ಲಿ ಬೆಳೆ ಸಾಲ ಪಡೆದಿದ್ರು. ಇಷ್ಟು ವರ್ಷ ಬಡ್ಡಿಯನ್ನ ಚಾಚೂ ತಪ್ಪದೇ ಕಟ್ಟಿರುವ ನರಸಿಂಹ ಈಗ ಮಳೆ ಬೆಳೆಯಿಲ್ಲದ ಕಾರಣ ಬಡ್ಡಿಯನ್ನ ಕಟ್ಟಿಲ್ಲ. ಸಿಎಂ ಸಾಲ ಮನ್ನಾ ಘೋಷಣೆ ಮಾಡಿದ ನಂತರ ಅಂದ್ರೆ 2018 ರ ಜೂನ್ 8 ರಂದು ಸಾಲ ಮರುಪಾವತಿಸುವಂತೆ ನೋಟಿಸ್ ಕಳುಹಿಸಿರುವ ಐಸಿಐಸಿಐ ಬ್ಯಾಂಕ್, ಸುಮಾರು 6 ಲಕ್ಷ ರೂಪಾಯಿ ಪಾವತಿಸಲು ಒತ್ತಾಯಿಸಿದೆ. ಇದನ್ನೂ ಓದಿ: Exclusive: ಸಾಲ ನೋಟಿಸ್ ಪಡೆದ ರೈತರಿಗೆ ಪಬ್ಲಿಕ್ ಟಿವಿ ಮೂಲಕ ಎಚ್‍ಡಿಕೆ ಅಭಯ
Advertisement
Advertisement
ಸಾಲ ತೀರಿಸದಿದ್ದರೆ ಸ್ವತ್ತುಗಳ ಸುಪರ್ದಿ ಕ್ರಮ ಕೈಗೊಳ್ಳುವುದಾಗಿ ನೋಟಿಸ್ ನೀಡಿದೆ. ನೋಟಿಸ್ ಕೊಟ್ಟು ಸುಮ್ಮನಾಗದ ಬ್ಯಾಂಕ್ ಅಧಿಕಾರಿಗಳು ಬ್ಯಾಂಕ್ ಗೆ ಕರೆಯಿಸಿ ಸಾಲ ಮರುಪಾವತಿ ಮಾಡುವಂತೆ ಪದೇ ಪದೇ ಒತ್ತಾಯಿಸುತ್ತಿದ್ದಾರೆ ಅಂತ ನರಸಿಂಹ ಅವರು ತಮ್ಮ ಅಲವತ್ತುಕೊಂಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews