ಕಾರವಾರ: ಇಲ್ಲಿನ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‍ನಲ್ಲಿ (Urban Co Operative Bank of Karwar) ಮ್ಯಾನೇಜರ್‌ನಿಂದಲೇ 54 ಕೋಟಿ ರೂ. ಅವ್ಯವಹಾರ ನಡೆದಿದ್ದು, ಆತ ಅಪಘಾತದಲ್ಲಿ ಮೃತಪಟ್ಟು ವರ್ಷವಾದ ಬಳಿಕ ಕೃತ್ಯ ಬೆಳಕಿಗೆ ಬಂದಿದೆ.
ಬ್ಯಾಂಕ್ ಮ್ಯಾನೇಜರ್ ಗುರುದಾಸ್ ಬಾಂದೇಕರ್ ಎಂಬಾತ ಬ್ಯಾಂಕ್‍ನಲ್ಲಿದ್ದ ಹಣವನ್ನು ತನ್ನ ಪರಿಚಯಸ್ಥರು ಹಾಗೂ ಸಂಬಂಧಿಗಳ ಖಾತೆಗೆ ವರ್ಗಾವಣೆ ಮಾಡಿದ್ದ. ಅಲ್ಲದೇ ಪ್ರತಿವರ್ಷ ಆಡಿಟ್ ವೇಳೆ ಯಾರಿಗೂ ಗಮನಕ್ಕೆ ಬರದಂತೆ ವಂಚಿಸುತ್ತಿದ್ದ. ಇದೀಗ ಆಡಿಟ್ ಮಾಡುವಾಗ ಆತ ಎಸಗಿದ್ದ ವಂಚನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋರಟವರು ಮಸಣ ಸೇರಿದರು – ಮಗು ಸೇರಿ ನಾಲ್ವರು ಸ್ಥಳದಲ್ಲೇ ಸಾವು!
ಮ್ಯಾನೇಜರ್ ಮೃತಪಟ್ಟಿರುವುದರಿಂದ ವಂಚನೆಯ ವಿಚಾರದಲ್ಲಿ ಆಡಳಿತ ಮಂಡಳಿಗೆ ದೊಡ್ಡ ತಲೆಬಿಸಿ ಶುರವಾಗಿದೆ. ಇದೀಗ ಬ್ಯಾಂಕ್ ದಿವಾಳಿ ಎಂದು ಹೂಡಿಕೆ ಹಣ ಮರಳಿ ಪಡೆಯಲು ಗ್ರಾಹಕರು ಮುಗಿಬೀಳುತ್ತಿದ್ದಾರೆ. ಗ್ರಾಹಕರ ಹಣಕ್ಕೆ ಯಾವುದೇ ತೊಂದರೆ ಇಲ್ಲವೆಂದು ಬ್ಯಾಂಕ್‍ನ ಆಡಳಿತ ಮಂಡಳಿ ಮನವಿ ಮಾಡಿದೆ.
ಈ ಸಂಬಂಧ ಕಾರವಾರ ನಗರ ಠಾಣೆಯಲ್ಲಿ (Karwar Police) ಬ್ಯಾಂಕ್‍ನ ಆಡಳಿತ ಮಂಡಳಿ ದೂರು ದಾಖಲಿಸಿದೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಪಾಕ್ ಪರ ಘೋಷಣೆ – ಮೋದಿ, ಬಜರಂಗದಳದ ಬಗ್ಗೆ ಅವಹೇಳನ; ಕೇಸ್ ದಾಖಲು!