ಢಾಕಾ: ಶೇಖ್ ಮುಜಿಬುರ್ ರೆಹಮಾನ್(Sheikh Mujibur Rahman) ಅವರ ಬಯೋಪಿಕ್‌ನಲ್ಲಿ ಬಾಂಗ್ಲಾ ಮಾಜಿ ಪ್ರಧಾನಿ ಪಾತ್ರದಲ್ಲಿ ನಟಿಸಿದ್ದ ಬಾಂಗ್ಲಾದ ಖ್ಯಾತ ನಟಿ ನುಸ್ರತ್ ಫರಿಯಾರನ್ನ(Nusraat Faria) ಢಾಕಾ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
2024 ಜುಲೈನಲ್ಲಿ ಶೇಖ್ ಹಸೀನಾ ವಿರುದ್ಧ ನಡೆದ ಸಾಮೂಹಿಕ ದಂಗೆ ಸಂದರ್ಭದಲ್ಲಿ ಕೊಲೆಗೆ ಯತ್ನಿಸಿದ ಕೇಸ್‌ನಲ್ಲಿ ನುಸ್ರತ್ ಫರಿಯಾರನ್ನ ಬಂಧಿಸಲಾಗಿದೆ. ಭಾನುವಾರ ಬೆಳಗ್ಗೆ ಥೈಲ್ಯಾಂಡ್‌ಗೆ ತೆರಳುತ್ತಿದ್ದ ವೇಳೆ ಶಹಜಲಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಸುಹಾಸ್ ಹತ್ಯೆ | ಬುರ್ಖಾಧಾರಿ ಮಹಿಳೆಯರನ್ನು ಯಾಕೆ ಬಂಧಿಸಿಲ್ಲ ಎಂದಿದ್ದ ಮಾಜಿ ಕಾರ್ಪೊರೇಟರ್ ವಿರುದ್ಧ FIR
ನುಸ್ರತ್ ಫರಿಯಾರನ್ನು ಬಂಧಿಸಿ ಢಾಕಾದ(Dhaka) ವಟರಾ ಪೊಲೀಸ್ ಠಾಣೆಗೆ(Vatara police station) ಕರೆದೊಯ್ಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮುಂಬೈನಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ತಾಪ್ಸಿ ಪನ್ನು- ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
2023ರಲ್ಲಿ ಬಿಡುಗಡೆಯಾದ `ಮುಜಿಬ್: ದಿ ಮೇಕಿಂಗ್ ಆಫ್ ಎ ನೇಷನ್’ ಚಿತ್ರದಲ್ಲಿ ಫರಿಯಾ ಹಸೀನಾ ಪಾತ್ರದಲ್ಲಿ ನುಸ್ರತ್ ಫರಿಯಾ ನಟಿಸಿದ್ದರು. ನಿರ್ದೇಶಕ ಶ್ಯಾಮ್ ಬೆನೆಗಲ್(Shyam Benegal) ನಿರ್ದೇಶಿಸಿದ ಈ ಚಿತ್ರ, ಬಾಂಗ್ಲಾದೇಶ ಮತ್ತು ಭಾರತದ ಜಂಟಿಯಾಗಿ ನಿರ್ಮಾಣ ಮಾಡಿತ್ತು. ಇದನ್ನೂ ಓದಿ: ಆಪರೇಷನ್ ಸಿಂಧೂರ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ – ಅಶೋಕ ವಿಶ್ವವಿದ್ಯಾಲಯದ ಪ್ರೊಫೆಸರ್ ಅರೆಸ್ಟ್
ನುಸ್ರತ್, ರೇಡಿಯೋ ಜಾಕಿ ಮತ್ತು ನಿರೂಪಕಿಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. 2015ರಲ್ಲಿ ಬಿಡುಗಡೆಯಾದ `ಆಶಿಕಿ: ಟ್ರೂ ಲವ್’ ಚಿತ್ರದ ಮೂಲಕ ನುಸ್ರತ್ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ್ದರು. ನುಸ್ರತ್ ಭಾರತೀಯ ಚಿತ್ರಗಳಲ್ಲೂ ನಟಿಸಿದ್ದು, ಮಾಡೆಲಿಂಗ್‌ನಲ್ಲಿ ಸಕ್ರಿಯರಾಗಿದ್ದರು.