ಢಾಕಾ: ಸತತ ಸುರಿಯುತ್ತಿರುವ ಮುಂಗಾರು ಮಳೆಯಿಂದ ತತ್ತರಿಸಿರುವ ಬಾಂಗ್ಲಾದೇಶದಲ್ಲಿ 25 ಮಂದಿ ಸಾವನ್ನಪ್ಪಿದ್ದು, 40 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.
Advertisement
ತೀವ್ರ ಮಳೆಯ ಕಾರಣ ಬಾಂಗ್ಲಾ ದೇಶಾದ್ಯಂತ ಪ್ರೌಢಶಾಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಶಾಲಾ ತರಗತಿ ಕೊಠಡಿಗಳಲ್ಲಿ ನಿರಾಶ್ರಿತರಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸಲಾಗಿದೆ. ದೇಶದ ಈಶಾನ್ಯ ಭಾಗವು ಬಹುತೇಕ ನೀರಿನಿಂದ ಆವೃತ್ತವಾಗಿದೆ. ವಾರಾಂತ್ಯದಲ್ಲಿ ಭಾರೀ ಮಳೆಯ ಮುನ್ಸೂಚನೆ ಇರುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ. ಅವರ ರಕ್ಷಣೆಗೆ ಬಾಂಗ್ಲಾ ಸರ್ಕಾರ ಸೇನಾ ಪಡೆಗಳನ್ನು ರವಾನಿಸಿದೆ. ಇದನ್ನೂ ಓದಿ: ಅಗ್ನಿಫಥ್‌ನಿಂದ ಹೆಚ್ಚಿದ ಕಿಚ್ಚು- ನಾಲ್ಕೇ ದಿನಗಳಲ್ಲಿ 200 ಕೋಟಿ ಆಸ್ತಿ ನಷ್ಟ
Advertisement
Advertisement
ಕೆಲ ಹಳ್ಳಿಗಳು ಕೆಲ ಗಂಟೆಗಳಲ್ಲೇ ಮುಳುಗಿ ಹೋಗಿದ್ದು, ಶಾಲೆಗಳನ್ನೇ ಆಶ್ರಯತಾಣವಾಗಿ ಮಾಡಿಕೊಳ್ಳಲಾಗಿದೆ. ಕೆಲವರು ತಾತ್ಕಾಲಿಕ ದೋಣಿ ವ್ಯವಸ್ಥೆ ಮಾಡಿಕೊಂಡು ತಮ್ಮನ್ನು ತಾವು ರಕ್ಷಿಸಿಕೊಂಡರೆ, ಇನ್ನೂ ಕೆಲವರು ನೀರಿನ ದಡದಲ್ಲೇ ಪ್ರಾಣ ಉಳಿಸಿಕೊಳ್ಳಲು ತವಕಿಸುತ್ತಿದ್ದಾರೆ. ಇದನ್ನೂ ಓದಿ: ನಾಳೆ ಬೆಂಗ್ಳೂರಿನ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆಗಿಲ್ಲ ಅವಕಾಶ – ಯಾವೆಲ್ಲ ರಸ್ತೆಗಳು?
Advertisement
ಹಳ್ಳಿ-ಹಳ್ಳಿಗಳನ್ನು ಸುತ್ತುವರಿದಿರುವ ನೀರಿನಿಂದಾಗಿ ಅಡುಗೆ ಮಾಡಿಕೊಳ್ಳಲು ಕಷ್ಟವಾಗುತ್ತಿದೆ. ಕಾರ್ಯಾಚರಣೆಗೆ ಇಳಿದಿರುವ ಸೇನೆಯು ಸಾಧ್ಯವಾದಷ್ಟು ಜನರನ್ನು ಸ್ಥಳಾಂತರಿಸುತ್ತಿದೆ. ನಿನ್ನೆ ಒಂದೇ ದಿನ 21 ಮಂದಿ ಮೃತಪಟ್ಟಿದ್ದು, ಈವರೆಗೆ 25 ಮಂದಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.