ಪೋಷೆಫ್‍ಸ್ಟ್ರೋಮ್: ಭಾರತ ಕಿರಿಯರ ತಂಡದ ಆರಂಭಿಕ ಬ್ಯಾಟ್ಸ್‌ಮನ್ ದಿವ್ಯಾಂಶ್ ಸಕ್ಸೇನಾ ಅವರ ತಲೆಗೆ ಬಾಂಗ್ಲಾದೇಶ ಅಂಡರ್ 19 ತಂಡದ ವೇಗದ ಬೌಲರ್ ತಂಜೀಮ್ ಹಸನ್ ಶಕೀಬ್ ಬಾಲ್ ಎಸೆದರು. ಅಷ್ಟೇ ಅಲ್ಲದೆ ಕ್ಷಮೆಯಾಚಿಸಲು ನಿರಾಕರಿಸಿದರು.
2020ರ ಅಂಡರ್-19 ವಿಶ್ವಕಪ್ ಫೈನಲ್‍ನ ಎರಡನೇ ಓವರಿನಲ್ಲಿ ದಿವ್ಯಾಂಶ್ ಸಕ್ಸೇನಾ ಬೌಲರ್ ತಂಜೀಮ್ ಹಸನ್ ಶಕೀಬ್‍ಗೆ ಫಾರ್ವರ್ಡ್ ಡಿಫೆನ್ಸಿವ್ ಶಾಟ್ ಹೊಡೆದರು. ತಕ್ಷಣವೇ ಬಾಲ್ ಹಿಡಿದ ಶಕೀಬ್ ಚೆಂಡನ್ನು ವಿಕೆಟ್‍ಗಳ ಕಡೆಗೆ ಎಸೆಯದೇ ಬ್ಯಾಟ್ಸ್‌ಮನ್ ಸಕ್ಸೇನಾ ತಲೆಗೆ ಎಸೆದರು. ಅದೃಷ್ಟವಶಾತ್ ಬಾಲ್‍ನಿಂದ ಸಕ್ಸೇನಾ ತಪ್ಪಿಸಿಕೊಂಡರು. ಇದರಿಂದಾಗಿ ಸಕ್ಸೇನಾ ಬೌಲರ್ ಶಕೀಬ್ ವಿರುದ್ಧ ಗರಂ ಆದರು. ಆಗ ಮಧ್ಯ ಪ್ರವೇಶಿಸಿದ ಅಂಪೈರ್ ಇಬ್ಬರನ್ನೂ ಸಮಾಧಾನ ಪಡೆಸಿದರು. ಇದನ್ನೂ ಓದಿ: 33 ಇತರೇ ರನ್- ವಿಶ್ವಕಪ್ ಫೈನಲ್‌ನಲ್ಲಿ ಭಾರತಕ್ಕೆ ಸೋಲು
Advertisement
https://twitter.com/DeepPhuyal/status/1226431298748719106
Advertisement
ಆದರೆ, ಶಕೀಬ್ ಸಕ್ಸೇನಾಗೆ ಕ್ಷಮೆಯಾಚಿಸದೆ ಬೌಲಿಂಗ್ ಮಾಡಲು ನಡೆದರು. ಈ ದೃಶ್ಯದ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಬಾಂಗ್ಲಾ ಬೌಲರ್ ಶಕೀಬ್ ವರ್ತನೆ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಶುಭಮನ್ ಗಿಲ್ ಹಿಂದಿಕ್ಕಿ ಯಶಸ್ವಿ ಜೈಸ್ವಾಲ್ ವಿಶೇಷ ಸಾಧನೆ
Advertisement
ಪಾಕಿಸ್ತಾನ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 59 ರನ್ ಸಿಡಿಸಿದ್ದ ದಿವ್ಯಾಂಶ್ ಸಕ್ಸೇನಾ ಫೈನಲ್ ಪಂದ್ಯದಲ್ಲಿ 17 ಎಸೆತಗಳಲ್ಲಿ 2 ರನ್ ಗಳಿಸಿದರು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ಯಶಸ್ವಿ ಜೈಸ್ವಾಲ್ 88 ರನ್ (121 ಎಸೆತ, 8 ಬೌಂಡಿರಿ, ಒಂದು ಸಿಕ್ಸ್), ತಿಲಕ್ ವರ್ಮಾ 38 ರನ್ (65 ಎಸೆತ, 3 ಬೌಂಡರಿ) ಹಾಗೂ ಧ್ರುವ ಜುರೇಲ್ 22 ರನ್ (38 ಎಸೆತ, 1 ಬೌಂಡರಿ) ಸೇರಿ 10 ವಿಕೆಟ್‍ಗೆ 177 ರನ್ ಗಳಿಸಿತ್ತು.
Advertisement
https://twitter.com/DeepPhuyal/status/1226472822198824960