ಬೆಂಗಳೂರು: ಭಾರೀ ಮಳೆಯಿಂದ ಕೊಡಗು ಜಿಲ್ಲೆಯಲ್ಲಿ ಉಂಟಾಗಿರುವ ಪ್ರವಾಹದಲ್ಲಿ ಸಿಲುಕಿರುವ ಜನರಿಗೆ ಸಿಲಿಕಾನ್ ಸಿಟಿ ನಾಗರಿಕರು ಮತ್ತು ಬೆಂಗಳೂರು ಕೊಡುವ ಸಮಾಜ ಸಹಾಯ ನೀಡಿದೆ.
ಬೆಂಗಳೂರಿನ ವಸಂತ ನಗರದಲ್ಲಿ ಕೊಡುವ ಸಮಾಜದ ಚೌಟ್ರಿಯಲ್ಲಿ ನಗರದ ಜನತೆ ನೀಡಿರುವ ಅಗತ್ಯ ವಸ್ತುಗಳನ್ನು ಕೊಡಗಿನ ಜನತಗೆ ಪೂರೈಕೆ ಮಾಡಲು ಮುಂದಾಗಿದೆ. ಸದ್ಯ ಕೊಡುಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಅಲ್ಲಿನ ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ. ಕೊಡವ ಸಮಾಜ ತಕ್ಷಣಕ್ಕೆ ಬೇಕಾದ ಅಗತ್ಯ ವಸ್ತುಗಳಾದ ಬ್ರೆಡ್, ಹಾಲು, ಇತರೆ ಆಹಾರ ಪದಾರ್ಥಗಳು, ಕುಡಿಯುವ ನೀರು, ಔಷಧಿ ಸಾಮಾಗ್ರಿಗಳನ್ನು ಮತ್ತು ಹೊದಿಕೆ ಮೂರು ಕ್ಯಾಂಟರ್ ಗಳಲ್ಲಿ ಕೊಡಗಿನ ಕುಶಲಾನಗರಕ್ಕೆ ಕಳುಹಿಸಿದೆ.
Advertisement
Advertisement
ಭಾನುವಾರ ಸಹ ಪ್ರವಾಹ ಪೀಡಿತ ಪ್ರದೇಶಗಳಿಗೆ ಆಹಾರ ಪದಾರ್ಥಗಳನ್ನು ಇಲ್ಲಿಂದ ಕಳುಹಿಸಲಾಗುತ್ತದೆ. ಪ್ರವಾಹದಲ್ಲಿ ಸಿಲುಕಿರುವ ಜನರಿಗೆ ಸಹಾಯ ಮಾಡಲು ಅಸಕ್ತಿಯಿರುವ ಬೆಂಗಳೂರು ನಾಗರಿಕರು ಕೊಡುವ ಸಮಾಜಕ್ಕೆ ತಂದು ಕೊಡಬಹುದು. ಅದನ್ನ ಕೊಡುವ ಸಮಾಜ ತೊಂದರೆಯಲ್ಲಿ ಸಿಲುಕಿರುವ ಜನರಿಗೆ ತಲುಪಿಸಲಿದೆ. ಇದನ್ನೂ ಓದಿ: ಕೊಡಗು ಸಂತ್ರಸ್ತರಿಗೆ ಸಹಾಯ ಮಾಡಿ- ಏನು ಕೊಡಬಹುದು? ಯಾರನ್ನು ಸಂಪರ್ಕಿಸಬಹುದು? ಇಲ್ಲಿದೆ ವಿವರ
Advertisement
ಮಳೆರಾಯನ ಆರ್ಭಟಕ್ಕೆ ನಲುಗಿ ಹೋಗಿರುವ ರಾಜ್ಯದ ಕರಾವಳಿ ಪ್ರದೇಶಗಳು ಹಾಗೂ ಕೇರಳಕ್ಕೆ ಬೆಂಗಳೂರು ನಗರದ ಪುನಂ ಟ್ರಸ್ಟ್ ಒಟ್ಟು 5 ಲಕ್ಷ ಚಪಾತಿ ವಿತರಣೆ ಮಾಡುತ್ತಿದೆ. ಅತಿವೃಷ್ಠಿಯಿಂದ ನಿರಾಶ್ರಿತರಾದವರಿಗೆ ಕೆಂಗೇರಿ ಉಪನಗರದ ಪುನಂ ಟ್ರಸ್ಟ್ ಈ ಮಾನವೀಯ ಕಾರ್ಯಕ್ಕೆ ಮುಂದಾಗಿದೆ. ಒಟ್ಟು 5 ಲಕ್ಷ ಚಪಾತಿಗಳು, ಸಾವಿರಾರು ಬ್ರೆಡ್ ಹಾಗೂ ಬನ್‍ಗಳನ್ನು ವಿತರಿಸಲಿದ್ದಾರೆ. 5 ಲಕ್ಷ ಚಪಾತಿಗಳನ್ನು ತಮ್ಮ ಪುನಂ ಟ್ರಸ್ಟ್ ನ ಸದಸ್ಯರೇ ಕೈಯಾರೆ ತಯಾರು ಮಾಡಿದ್ದು ವಿಶೇಷವಾಗಿದೆ. ಜೊತೆಗೆ ಟವಲ್‍ಗಳು, ಹೊದಿಕೆಗಳು ಹಾಗೂ ಉಡುಪುಗಳು, ಔಷಧಿಗಳನ್ನು ಕೂಡ ಪ್ರವಾಹ ಸಂತ್ರಸ್ತರಿಗೆ ನೀಡಲಾಗ್ತಿದೆ.
Advertisement
ಕಳೆದ ಎರಡು ದಿನಗಳಿಂದ ಈ ಕುರಿತ ಕಾರ್ಯ ನಡೆಯುತ್ತಿದ್ದು ನಾಳೆ ಬೆಂಗಳೂರಿನಿಂದ ಟ್ರಸ್ಟ್ ನ ಸಿಬ್ಬಂದಿ ಮೊದಲು ಕೊಡಗು ಸೇರಿ ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಸ್ತುಗಳ ವಿತರಣೆ ಮಾಡಲಿದ್ದಾರೆ. ನಂತರ ಕೇರಳಕ್ಕೆ ತೆರಳಿ ಆಹಾರ ಪದಾರ್ಥಗಳನ್ನು ನೀಡಿ, ನಿರಾಶ್ರಿತರ ಹಸಿವನ್ನು ನೀಗಿಸಲಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv