ಬೆಂಗಳೂರು: ಬಿಜೆಪಿ ಮುಖಂಡ ಆರ್.ಅಶೋಕ್ ಅವರ ಇಮೇಜ್ ಧಕ್ಕೆ ಬರುವಂತೆ ಒಕ್ಕಲಿಗರ ಕಮ್ಯುನಿಟಿ ವಾಟ್ಸಪ್ ಗ್ರೂಪ್‍ನಲ್ಲಿ ಪೋಸ್ಟ್ ಹಾಕಿದ್ದಕ್ಕೆ ಇಬ್ಬರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ಒಕ್ಕಲಿಗರ ಕಮ್ಯುನಿಟಿ ವಾಟ್ಸಪ್ ಗ್ರೂಪಿನಲ್ಲಿ ಆರ್ ಅಶೋಕ್ ಅವರ ಹೆಸರನಲ್ಲಿ ಕೆಟ್ಟ ರೀತಿಯಲ್ಲಿ ಪೋಸ್ಟ್ ಮಾಡಲಾಗುತ್ತಿದೆ ಎಂದು ಆರೋಪಿಸಿ ಕೋದಂಡರಾಮ್ ಎಸ್.ಎಂ ಗೌಡ ಹಾಗೂ ತಿಮ್ಮಪ್ಪ ಯುಎಸ್‍ಎ ವಿರುದ್ಧ ದೂರು ನೀಡಿದ್ದರು.
ವಾಟ್ಸಪ್ ಗ್ರೂಪಿನಲ್ಲಿ ಅಮೆರಿಕದಲ್ಲಿ ಕಾಲಭೈರವನ ದೇವಸ್ಥಾನ ಮಾಡುವ ಔಚಿತ್ಯವೇನಿತ್ತು. ಇತ್ತೀಚೆಗೆ ಮಠಗಳು ದುಡ್ಡು ಮಾಡಲು ನಿಂತಿವೆ. ಎಂದು ರಾಜ್ಯದ ದೊಡ್ಡ ಮಠವಾದ ಆದಿ ಚುಂಚನಗಿರಿಯ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ಆರ್ ಅಶೋಕ್ ಅವರ ಹೆಸರನಲ್ಲಿ ಪೋಸ್ಟ್ ಹಾಕಲಾಗಿತ್ತು.
ಈ ಸಂಬಂಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಐಪಿಸಿ ಸೆಕ್ಷನ್ 295ಎ ಅಡಿಯಲ್ಲಿ ಎಫ್‍ಐಆರ್ ದಾಖಲು ಮಾಡಿದ್ದಾರೆ.