ಬೆಂಗಳೂರು; ಸಿಲಿಕಾನ್ ಸಿಟಿಯಲ್ಲಿ ಅಪರಾಧವನ್ನು ತಡೆಯಲು ಪಣ ತೊಟ್ಟಿರುವ ಪೊಲೀಸ್ ಆಯುಕ್ತ ಆಲೋಕ್ ಕುಮಾರ್ ನೇತೃತ್ವದ ಪೊಲೀಸ್ ಇಲಾಖೆ ಹೊಸ ಶೇರ್ ಅಪ್ಲಿಕೇಷನ್‍ಗೆ ಚಾಲನೆ ನೀಡಿದೆ.
ನಿಮ್ಮ ದೂರು ನಮ್ಮ ನೂರಿಗೆ ಎಂಬ ಯೋಜನೆಯ ಹೊಸ ತಂತ್ರಜ್ಞನದಿಂದ ಸಾರ್ವಜನಿಕರ ಅಹವಾಲು ಸ್ವೀಕರಿಸಲು ಪೊಲೀಸ್ ಇಲಾಖೆ ಹೊಸ ಪ್ರಯತ್ನ ಮಾಡುತ್ತಿದೆ. ಈ ಮೂಲಕ ಅಪರಾಧ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆಯಿಂದ ಶೇರ್ ಚಾಟ್ ಪೇಜ್ ಚಾಲನೆ ನೀಡಲಾಗಿದೆ.
ಸುಮಾರು 14 ಭಾಷೆಗಳಲ್ಲಿ ವ್ಯವಹರಿಸಬಹುದಾದ ನೂತನ ತಂತ್ರಜ್ಞಾನದ ಈ ಅಪ್ಲಿಕೇಶನ್‍ನನ್ನು ನಗರ ಪೊಲೀಸ್ ಆಯುಕ್ತ ಆಲೋಕ್ ಕುಮಾರ್ ಸಾಮಾಜಿಕ ಜಾಲತಾಣಕ್ಕೆ ಶೇರ್ ಅಪ್ಲಿಕೇಶನ್ ಲೋಕಾರ್ಪಣೆ ಮಾಡಿದ್ದಾರೆ. ಕಮೀಷನರ್ ಆಗಿ ಆಯ್ಕೆಯಾದ ದಿನವೇ ಜನಸ್ನೇಹಿ ಆಡಳಿತ ನೀಡುವುದಾಗಿ ಹೇಳಿದ್ದ ಆಲೋಕ್ ಕುಮಾರ್ ಆ ನಿಟ್ಟಿನಲ್ಲೇ ಕೆಲಸ ಮಾಡುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.