Bengaluru CityDistrictsKarnatakaLatest

ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆಗೆ 5 ಬೈಕ್‍ಗಳು ಜಖಂ- ಮೂವರಿಗೆ ಗಾಯ

– ಕೆಆರ್ ರೋಡ್‍ನಲ್ಲಿ ಲಾರಿ ಪಲ್ಟಿ

ಬೆಂಗಳೂರು: ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ ಪರಿಣಾಮ ಐದು ಬೈಕ್‍ಗಳು ಜಖಂ ಆಗಿದ್ದು, ಮೂವರಿಗೆ ಗಾಯವಾಗಿರುವ ಘಟನೆ ಬೆಂಗಳೂರಿನ ಕೆಆರ್ ಮಾರ್ಕೆಟ್ ಬಳಿ ನಡೆದಿದೆ.

ಮಾರ್ಕೆಟ್ ಬಳಿಯ ಮಿನರ್ವ ಸರ್ಕಲ್ ಬಳಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಕಾರು ಡಿಕ್ಕಿ ಹೊಡೆದು ಅವಘಡ ಸಂಭವಿಸುತ್ತಿದ್ದಂತೆಯೇ ಚಾಲಕ ಕಾರು ಸಮೇತ ಪರಾರಿಯಾಗಿದ್ದಾನೆ. ಈ ವೇಳೆ ಸ್ಥಳೀಯರು ಆತನನ್ನು ಬೆನ್ನಟ್ಟಿದ್ರೂ ಯಾವುದೇ ಪ್ರಯೋಜನವಾಗಿಲ್ಲ.

`ಅತೀ ವೇಗದಿಂದ ಬಂದ ಕಾರು ಮಗುವಗೆ ಡಿಕ್ಕಿ ಹೊಡೆದಿದೆ. ಮಾತ್ರವ್ಲಲದೇ ಪಕ್ಕದಲ್ಲೆ ನಿಂತಿದ್ದ ಇಬ್ಬರಿಗೂ ಡಿಕ್ಕಿ ಹೊಡೆದಿದೆ. ಪರಿಣಾಮ ವ್ಯಕ್ತಿಯೊಬ್ಬರ ಕಾಲಿಗೆ ಗಂಭೀರ ಗಾಯಗಳಾಗಿದೆ. ಇಷ್ಟು ಮಾತ್ರವಲ್ಲದೇ ಜಯನಗರದಲ್ಲೂ ವ್ಯಕ್ತಿಗೆ ಡಿಕ್ಕಿ ಹೊಡೆದಿದ್ದಾನೆ. ಅಲ್ಲಿಯೂ ಆತನನ್ನು ಹಿಡಿದಿಲ್ಲ. ಸದ್ಯ 4ನೇ ಬ್ಲಾಕ್‍ನಲ್ಲಿ ಸಿಕ್ಕಿಬಿದ್ದಿದ್ದಾನಂತೆ ಏನಾಗತ್ತೋ ನೋಡ್ಬೇಕಷ್ಟೇ’ ಅಂತಾ ಪ್ರತ್ಯಕ್ಷದರ್ಶಿಯೊಬ್ಬರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

ಲಾರಿ ಪಲ್ಟಿ: ಇದೇ ವೇಳೆ ಕೆಆರ್ ರೋಡ್‍ನಲ್ಲಿ ಲಾರಿಯೊಂದು ಪಲ್ಟಿಯಾಗಿದ್ದು ಡ್ರೈವರ್ ಮತ್ತು ಕ್ಲೀನರ್‍ಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಎರಡೂ ಪ್ರಕರಣಗಳ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೆಆರ್ ಮಾರ್ಕೆಟ್ ಟ್ರಾಫಿಕ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

Back to top button