ಕರ್ನಾಟಕ ಕಾಂಗ್ರೆಸ್ ಪಕ್ಷವು ಬಸವರಾಜ್ ಬೊಮ್ಮಾಯಿ (Basavaraj Bommai) ನೇತೃತ್ವದ ಬಿಜೆಪಿ (BJP) ಸರ್ಕಾರದ ವಿರುದ್ಧ ‘40% ಸರ್ಕಾರ’ (40% Govt) ಹೆಸರಿನಲ್ಲಿ ಕ್ಯಾಂಪೇನ್ ಶುರು ಮಾಡಿದೆ. ಹಲವು ವಾರಗಳಿಂದ ಕರ್ನಾಟಕದಲ್ಲಿ ಈ ಕ್ಯಾಂಪೇನ್ ಜೋರಾಗಿದ್ದು, ಈ ನಡುವೆ ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಬಾಲಿವುಡ್ ನ ನಟ ಅಖಿಲ್ ಅಯ್ಯರ್ (Akhil Iyer) ಅವರ ಫೋಟೋವನ್ನು ದುರ್ಬಳಕೆ ಮಾಡಲಾಗಿದೆ ಎಂದು ಸ್ವತಃ ಅವರೇ ಟ್ವಿಟ್ ಮಾಡಿದ್ದಾರೆ.
Advertisement
ನನ್ನ ಫೋಟೋವನ್ನು ಅನುಮತಿ ಇಲ್ಲದೆ ಕಾಂಗ್ರೆಸ್ (Congress) ದುರ್ಬಳಕೆ ಮಾಡಿಕೊಳ್ಳಲಾಗಿದ್ದು, ಇದರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಅವರು ಟ್ವಿಟ್ ಮಾಡಿದ್ದಾರೆ. ತಮ್ಮ ಟ್ವಿಟ್ ಅನ್ನು ರಾಹುಲ್ ಗಾಂಧಿ (Rahul Gandhi), ಸಿದ್ಧರಾಮಯ್ಯ (Siddaramaiah) ಮತ್ತು ಕರ್ನಾಟಕ ಕಾಂಗ್ರೆಸ್ ಪಕ್ಷದ ಖಾತೆ ಟ್ಯಾಗ್ ಮಾಡಿದ್ದಾರೆ. ಈ ಘಟನೆಯಿಂದ ತಮಗೆ ನೋವಾಗಿದೆ ಎಂದು ಅಖಿಲ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ:‘ಬಿಗ್ ಬಾಸ್’ ಮನೆಗೆ ಬ್ರಹ್ಮಾಂಡ ಗುರೂಜಿ ಹೋದರೆ ಮಜವಾಗಿರತ್ತೆ ಅಂತಿದ್ದಾರೆ ನೆಟ್ಟಿಗರು
Advertisement
Advertisement
ಬಾಲಿವುಡ್ ನಲ್ಲಿ ಹಲವು ಸಿನಿಮಾಗಳಲ್ಲಿ ಅಖಿಲ್ ನಟಿಸಿದ್ದು, ಕೆಲ ಜಾಹೀರಾತು ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ಅಚ್ಚರಿ ಎಂದರೆ, ಅಖಿಲ್ ಮೂಲತಃ ಬೆಂಗಳೂರಿನವರು. ಅವರ ತಂದೆ ತಾಯಿ ಇಬ್ಬರೂ ವೈದ್ಯರು. ಸೇಂಟ್ ಜೋಸೆಫ್ ಬಾಯ್ಸ್ ಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡಿರುವ ಅವರು, ಪಿ.ಇಎಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಕೂಡ ಮುಗಿಸಿದ್ದಾರೆ. ಕಲೆಯ ಗೀಳಿನ ಕಾರಣದಿಂದಾಗಿ ನೇರವಾಗಿ ಬಾಲಿವುಡ್ ಗೆ ಹಾರಿ, ಅಲ್ಲಿಂದಲೇ ಸಿನಿಮಾ ಕೆರಿಯರ್ ಶುರು ಮಾಡಿದ್ದಾರೆ.