ಬೀದರ್: ಸ್ಕ್ಯಾನಿಂಗ್ ಗಾಗಿ ಎರಡು ಗಂಟೆಗಳಿಂದ ಕ್ಯೂನಲ್ಲಿ ನಿಂತಿರುವ ಗರ್ಭಿಣಿಯರು ಹಾಗೂ ರೋಗಿಗಳನ್ನು ನೋಡಿ ಕೆಂಡಾಮಂಡಲರಾದ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ್ ಬ್ರಿಮ್ಸ್ ನಿರ್ದೇಶಕರಿಗೆ ಫುಲ್ ತರಾಟೆ ತೆಗೆದುಕೊಂಡು ಘಟನೆ ನಡೆದಿದೆ.
ಕ್ಯೂನಲ್ಲಿ ನಿಂತಿರುವ ಗರ್ಭಿಣಿಯರಿಗೆ ನಿಮ್ಮ ಯೋಗ್ಯತೆಗೆ 30 ಕುರ್ಚಿ ಹಾಕುವುದಕ್ಕೆ ಆಗಲ್ವಾ. ಗರ್ಭಿಣಿಯರು ಬೆಳಗ್ಗೆಯಿಂದಲೂ ನಿಂತಿದ್ದರು ಕುರ್ಚಿ ಹಾಕಲು ನಿಮ್ಮ ಬಳಿ ಹಣ ಇಲ್ವಾ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಬ್ರಿಮ್ಸ್ ನಿರ್ದೇಶಕರಿಗೆ ರೋಗಿಗಳ ಮುಂದೆಯೇ ಫಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
Advertisement
Advertisement
ಸಚಿವರು ಗರಂ ಆದ ತಕ್ಷಣ ಬ್ರಿಮ್ಸ್ ನಿರ್ದೇಶಕ ಕ್ಷೀರಸಾಗರ ಇನ್ನು ಟೆಂಡರ್ ಆಗಬೇಕು ಸರ್ ಎಂದಿದ್ದಾರೆ. ಅದಕ್ಕೆ ಸಚಿವರು ಟೆಂಡರ್ ಬಿಡ್ರೀ ಒಂದು ಗಂಟೆಯಲ್ಲಿ ಇಲ್ಲಿ ಕುರ್ಚಿ ಹಾಕಬೇಕು ಎಂದು ಸಚಿವರು ತಾಕೀತು ಮಾಡಿದ್ದಾರೆ. ಬೆಳಗ್ಗೆಯಿಂದ ನಾವು ಸ್ಕ್ಯಾನಿಂಗ್‍ಗಾಗಿ ಕ್ಯೂ ನಿಂತಿದ್ದೇವೆ. ನಮಗೆ ಹೋಗಲಿ ಗರ್ಭಿಣಿಯರು ಕ್ಯೂನಲ್ಲಿ ನಿಂತರೂ ಆರೋಗ್ಯ ಅಧಿಕಾರಿ ಸ್ಕ್ಯಾನಿಂಗ್ ಮಾಡಲು ರೆಡಿ ಇಲ್ಲಾ ಎಂದು ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.