ರಾಮನಗರ: ಮಾಗಡಿ (Magadi) ತಾಲೂಕಿನ ಬಂಡೆ ಮಠದ (Bande Mutt) ಬಸವಲಿಂಗ ಶ್ರೀಗಳ (Basavalinga Shree) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಕಣ್ಣೂರು ಮೃತ್ಯಂಜಯ ಶ್ರೀ (Kannur Swamiji), ಸ್ಥಳೀಯ ಮುಖಂಡ ಮಹಾದೇವಯ್ಯ ಹಾಗೂ ಓರ್ವ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಸವಲಿಂಗ ಶ್ರೀಗಳು ಆತ್ಮಹತ್ಯೆಗೂ ಮುನ್ನ ಡೆತ್‍ನೋಟ್‍ನಲ್ಲಿ ಮೂರು ಪುಟಗಳಲ್ಲಿ ಸವಿಸ್ತಾರವಾಗಿ ಮಾಹಿತಿ ನೀಡಿದ್ದರು. ಈ ವೇಳೆ 21ವರ್ಷದ ಯುವತಿಯನ್ನು ಬಿಟ್ಟು ಕಣ್ಣೂರು ಶ್ರೀಗಳು ಹನಿಟ್ರ್ಯಾಪ್ ಮಾಡಿಸಿರುವ ಕುರಿತು ಹಾಗೂ ಕಣ್ಣೂರು ಶ್ರೀಗಳ ಷಡ್ಯಂತ್ರ್ಯದ ಬಗ್ಗೆಯೂ ಡೆತ್‍ನೋಟ್‍ನಲ್ಲಿ ಉಲ್ಲೇಖಿಸಿದ್ದರು. ಅಷ್ಟೇ ಅಲ್ಲದೇ ಕಣ್ಣೂರು ಸ್ವಾಮೀಜಿ ಹಾಗೂ ಇತರ ಏಳೆಂಟು ಮಂದಿಯಿಂದ ಕಿರುಕುಳ ಎದುರಾಗ್ತಿದೆ. ಅವರು ಮಠದ ವಿಚಾರದಲ್ಲಿ ಆಗಾಗ ತೊಂದರೆ ಉಂಟುಮಾಡುತ್ತಿದ್ದಾರೆ. ನನ್ನ ಸಾವಿಗೆ ಗೊತ್ತಿಲ್ಲದಿರುವ ಆ ಯುವತಿಯೇ ಕಾರಣ ಎಂದು ಸಾವಿಗೂ ಮೊದಲು ಬಂಡೆ ಮಠದ ಶ್ರೀಗಳು ಡೆತ್ ನೋಟ್ ಬರೆದಿಟ್ಟಿದ್ದರು.
Advertisement
Advertisement
ಈ ಹಿನ್ನೆಲೆಯಲ್ಲಿ ರಾಮನಗರ ಪೊಲೀಸರು ವಿಚಾರಣೆಯನ್ನು ಚುರುಕುಗೊಳಿಸಿದ್ದರು. ಈ ವೇಳೆ ಬೆಂಗಳೂರು ಮೂಲದ ಮಹಿಳೆಯನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕಣ್ಣೂರು ಶ್ರೀ ಹಾಗೂ ಬಂಡೆ ಮಠದ ಶ್ರೀಗಳು ಸಂಬಂಧಿಗಳಾಗಿರುವ ವಿಷಯ ಬೆಳಕಿಗೆ ಬಂದಿದೆ. ಈ ವೇಳೆ ಕಣ್ಣೂರು ಶ್ರೀ ಪೀಠಕ್ಕಾಗಿ ಷಡ್ಯಂತ್ರ ನಡೆಸಿದ್ದ ವಿಷಯವು ಬೆಳಕಿಗೆ ಬಂದಿದ್ದು, ಕಣ್ಣೂರು ಶ್ರೀಗಳನ್ನು ರಾಮನಗರ ಪೊಲೀಸರು ಬಂಧಿಸಿದ್ದಾರೆ. ಇದಲ್ಲದೆ ಸ್ವಾಮೀಜಿ ಜೊತೆ ಏಳೆಂಟು ಮಂದಿ ಸಹ ಕೈಜೋಡಿಸಿರುವ ಬಗ್ಗೆ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬಂಡೆಮಠದ ಶ್ರೀ ಆತ್ಮಹತ್ಯೆ ಕೇಸ್ – ನಗ್ನವಾಗಿರುವ ಮೂರನೇ ವೀಡಿಯೋ ಬಹಿರಂಗ
Advertisement
Advertisement
ಒಟ್ಟಾರೆಯಾಗಿ ಬಂಡೆಮಠದ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಪ್ರಕರಣವು ಪ್ರತಿದಿನ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಮನಗರ ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈಗಾಗಲೇ ಪ್ರಕರಣ ಭೇದಿಸಲು ಮೂರು ತಂಡಗಳನ್ನು ರಚಿಸಿದ್ದಾರೆ. ನಾಲ್ವರು ಸಿಪಿಐ ಹಾಗೂ ಐದು ಜನ ಪಿಎಸ್‍ಐ ಮತ್ತು ಒಬ್ಬರು ಎವೈಎಸ್ಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬಸವಲಿಂಗ ಶ್ರೀಗಳ ಆತ್ಮಹತ್ಯೆ ಕೇಸ್‍ನಲ್ಲಿ ಮತ್ತೊಂದು ಮಠದ ಸ್ವಾಮೀಜಿ ಭಾಗಿ?