ರಾಮನಗರ: ಮಾಗಡಿ (Magadi) ತಾಲೂಕಿನ ಬಂಡೆ ಮಠದ (Bande Mutt) ಬಸವಲಿಂಗ ಶ್ರೀಗಳ (Basavalinga Shree) ಆತ್ಮಹತ್ಯೆ ಪ್ರಕರಣವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಶ್ರೀಗಳಿಗೆ ಸಂಬಂಧಿಸಿ ಇದೀಗ ಮೂರನೇ ವೀಡಿಯೋ ವೈರಲ್ ಆಗುತ್ತಿದೆ.
ಬಂಡೆಮಠದ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಪ್ರಕರಣವು ಪ್ರತಿದಿನ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಸ್ವಾಮೀಜಿಯ ಮೂರನೇ ವೀಡಿಯೋ ವೈರಲ್ ಆಗಿದ್ದು, ಮೊದಲೆರಡು ವೀಡಿಯೋದಲ್ಲಿ ಅರೆ ನಗ್ನವಾಗಿದ್ದ ಬಂಡೆಶ್ರೀ, ಇದೀಗ ನಗ್ನವಾಗಿರುವ ಮೂರನೇ ವೀಡಿಯೋ ಬಹಿರಂಗವಾಗಿದೆ.
ಆದರೆ ವೀಡಿಯೋ ಕಾಲ್ (Video Call) ಮಾಡಿರುವ ಮಹಿಳೆ (Woman) ಯಾರೆಂದು ಈವರೆಗೆ ಗೊತ್ತಾಗಿಲ್ಲ. ಬದಲಿಗೆ ಆಕೆ ಸಂಪೂರ್ಣ ವೀಡಿಯೋ ಕಾಲ್‍ನ್ನು ರೆಕಾರ್ಡ್ ಮಾಡಿಕೊಂಡಿದ್ದು, ಆಡಿಯೋವನ್ನು ಸಂಪೂರ್ಣವಾಗಿ ಮ್ಯೂಟ್ ಮಾಡಿದ್ದಾಳೆ. ಇದನ್ನೂ ಓದಿ: ಬಂಡೇ ಮಠದ ಸ್ವಾಮೀಜಿ ಆತ್ಮಹತ್ಯೆ ಹಿಂದೆ ಲೋಕಲ್ ಸ್ವಾಮೀಜಿ ಕೈವಾಡ!
ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಮನಗರ ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈಗಾಗಲೇ ಪ್ರಕರಣ ಭೇದಿಸಲು ಮೂರು ತಂಡಗಳನ್ನು ರಚಿಸಿದ್ದಾರೆ. ನಾಲ್ವರು ಸಿಪಿಐ ಹಾಗೂ ಐದು ಜನ ಪಿಎಸ್‍ಐ ಮತ್ತು ಒಬ್ಬರು ಎವೈಎಸ್ಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈಗಾಗಲೇ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಥಳದಲ್ಲಿ ದೊರೆತಿದ್ದ ಸ್ಥಳದಲ್ಲಿ ಡೆತ್‍ನೋಟ್‍ನಲ್ಲಿದ್ದ 8 ಜನರನ್ನು ವಿಚಾರಣೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಘಟನೆಗೆ ಸಂಬಂಧಿಸಿ ಒಬ್ಬ ಸ್ವಾಮೀಜಿ ಹಾಗೂ ಬೆಂಗಳೂರಿನ ಮಹಿಳೆಯ ಓರ್ವ ಮಹಿಳೆ ಬಗ್ಗೆಯೂ ಮಾಹಿತಿಯನ್ನು ಕಲೆ ಹಾಕಿದ್ದಾರೆ.
ಒಟ್ಟಾರೆ ಶ್ರೀಗಳ ಆತ್ಮಹತ್ಯೆ ಕುರಿತು ಹಲವು ಪ್ರಶ್ನೆಗೆ ಪೊಲೀಸರೇ ಉತ್ತರಿಸಬೇಕಿದೆ. ಶ್ರೀಗಳಿಗೆ ಖೆಡ್ಡಾ ತೋಡಿದ ಆ ಗ್ಯಾಂಗ್ ಯಾವುದು, ಅದರಲ್ಲಿ ಯಾರೆಲ್ಲಾ ಇದ್ದಾರೆ.? ಇಡೀ ಪ್ರಕರಣದ ಮಾಸ್ಟರ್ ಮೈಂಡ್ ಯಾರು ಎಂಬುದು ತನಿಖೆ ಬಳಿಕವಷ್ಟೇ ಬಯಲಾಗಬೇಕಿದೆ. ಇದನ್ನೂ ಓದಿ: ಬಸವಲಿಂಗ ಶ್ರೀಗಳ ಆತ್ಮಹತ್ಯೆ ಕೇಸ್‍ನಲ್ಲಿ ಮತ್ತೊಂದು ಮಠದ ಸ್ವಾಮೀಜಿ ಭಾಗಿ?