ಕರ್ನಾಟಕದ ಬಹುಭಾಗಗಳಲ್ಲಿ ಯಶಸ್ವಿಯಾಗಿ ರೋಡ್ ಶೋಗಳನ್ನು ನಡೆಸಿದ್ದ ಬನಾರಸ್ ಹೀರೋ ಝೈದ್ ಖಾನ್ (Zaid Khan) ಇದೀಗ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಮಿಂದೇಳುತ್ತಿದ್ದಾರೆ. ವಿಶೇಷವೆಂದರೆ, ಸದಾ ಭಾಷೆ ಮತ್ತು ಗಡಿ ವಿವಾದದಿಂದ ಸದ್ದು ಮಾಡುವ ಬೆಳಗಾವಿಯ ನೆಲದಲ್ಲಿಯೇ ಕನ್ನಡ ರಾಜ್ಯೋತ್ಸವದಲ್ಲಿ ಭಾಗಿಯಾಗಿದ್ದಾರೆ. ಈ ನಿಮಿತ್ತವಾಗಿ ಬೆಳಗಾವಿಗೆ ಬಂದಿಳಿದ ಝೈದ್ ಖಾನ್ ಅವರಿಗೆ ಬೆಳಗಾವಿ ಸೀಮೆಯ ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಅದ್ದೂರಿ ಸ್ವಾಗತ ಕೋರಲಾಯ್ತು. ಈ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರರಾದ ಮನ್ಸೂರ್, ಕನ್ನಡ ರಕ್ಷಣಾ ವೇದಿಕೆಯ ರಾಜು ಕಲ್ಲೂರ್ ಮುಂತಾದವರು ಹಾಜರಿದ್ದರು.
Advertisement
ಆ ನಂತರದಲ್ಲಿ ಬೆಳಗಾವಿ ಜಿಲ್ಲೆಯ ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅರವತ್ತೇಳನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿಯೂ ಬನಾರಸ್ ಹೀರೋ ಝೈದ್ ಖಾನ್ ಅವರಿಗೆ ಗೌರವ ಲಭಿಸಿತ್ತು. ಆ ಕಾರ್ಯಕ್ರಮದ ವೇದಿಕೆಗೆ ಝೈದ್‌ರನ್ನು ಪ್ರೀತಿಯಿಂದ ಬರಮಾಡಿಕೊಂಡು, ಸನ್ಮಾನಿಸಲಾಯಿತು. ಅದಾದ ಬಳಿಕ ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೆಳಗಾವಿಯ ಕನ್ನಡ ಪರ ಸಂಘಟನೆಗಳು ಬೃಹತ್ ಪಾದಯಾತ್ರೆಯನ್ನು ಆರಂಭಿಸಿದ್ದವು. ಅದರಲ್ಲಿಯೂ ಝೈದ್ ಖಾನ್ ಉತ್ಸಾಹದಿಂದ ಹೆಜ್ಜೆ ಹಾಕಿದರು.
Advertisement
Advertisement
ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆ ನಿಜಕ್ಕೂ ಭಿನ್ನವಾಗಿ ನೆರವೇರಿದೆ. ಇದೇ ಸಂದರ್ಭದಲ್ಲಿ ಈ ಸೀಮೆಯ ಕನ್ನಡಪರ ಮನಸುಗಳೆಲ್ಲ ಒಂದುಗೂಡಿ ಹತ್ತು ಸಾವಿರ ಮೀಟರ್ ಕನ್ನಡ ಧ್ವಜ ಪ್ರದರ್ಶನ ನಡೆಸಿ ಗಿನ್ನಿಸ್ ದಾಖಲೆ ಬರೆಯಲಾಯ್ತು. ಈ ಕಾರ್ಯಕ್ರಮದ ನೇತೃತ್ವವನ್ನು ಕಿರಣ್ ಮಾಳೆನವರ್ ಮತ್ತು ಸುನೀಲ್ ವಹಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಬನಾರಸ್ ಹೀರೋ ಝೈದ್ ಖಾನ್ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಗಡಿನಾಡು ಕನ್ನಡ ಸಂಘದ ಅಧ್ಯಕ್ಷರಾದ ಸೈಯದ್ ಮನ್ಸೂರ್, ಪ್ರಸಿದ್ಧ ವಕೀಲರಾದ ತೌಫಿಕ್ ಮೊಯಿನುದ್ದೀನ್, ಡಾ. ಆಸಿಫ್ ಮೊಕಾಶಿ, ಸಂತೋಷ್ ಕಾಮತ್, ಕನ್ನಡ ಸೇನೆಯ ರಾಜು ಹಾಗೂ ಹುಬ್ಬಳಿಯ ಯುವ ನಾಯಕ ರಶೀದ್ ಹಾಗೂ ಆಯೂಬ್ ಉಪಸ್ಥಿತರಿದ್ದರು.
Advertisement
ಬೆಳಗಾವಿ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಅಕ್ಷರಶಃ ಕಂಗೊಳಿಸಿತ್ತು. ಅದೆಲ್ಲದರಲ್ಲಿಯೂ ಬನಾರಸ್ ನಾಯಕ ನಟ ಝೈದ್ ಖಾನ್ ಭಾಗಿಯಾಗಿದ್ದು ನಿಜವಾದ ವಿಶೇಷ. ಈ ಸಂದರ್ಭದಲ್ಲಿ ವೀರನಾರಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಚೆನ್ನಮ್ಮನ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪತ್ರಿಕಾಗೋಷ್ಟಿ ನಡೆಸಲಾಯ್ತು. ಅದರಲ್ಲಿ ಬನಾರಸ್ ಹೀರೋ ಝೈದ್ ಖಾನ್ ಮತ್ತು ಅನೇಕ ಕನ್ನಡಪರ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.
ಇದೇ ಹೊತ್ತಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಅದ್ದೂರಿ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಝೈದ್ ಖಾನ್‌ರನ್ನು ಆಹ್ವಾನಿಸಲಾಗಿತ್ತು. ಝೈದ್ ಕನ್ನಡತನದ ಮೇಲಿನ ಪ್ರೀತಿಯಿಂದಲೇ ಅದರಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದ ನೇತೃತ್ವವನ್ನು ವಾಜೀದ್ ಅಹ್ಮದ್ ಹಿರೇಗುಡಿ, ಕನ್ನಡ ಪರ ಹೋರಾಟಗಾರ ಮಹಾಂತೇಶ್ ರಂಗತಿಮಠ ಸೇರಿದಂತೆ ಅನೇಕ ಕನ್ನಡಪರ ಹೋರಾಟಗಾರರು ವಹಿಸಿಕೊಂಡಿದ್ದರು.
ಬೆಳಗಾವಿಯಲ್ಲಿ ನಡೆದ ಇಷ್ಟೆಲ ಕಾರ್ಯಕ್ರಮಗಳ ಮೂಲಕ ಬನಾರಸ್ ಹೀರೋ ಝೈದ್ ಖಾನ್ ಕನ್ನಡದ ಕಂಪು ಪಸರಿಸುವ ಕಾರ್ಯ ನಡೆಸಿದರು. ಅತ್ಯಂತ ಅಚ್ಚುಕಟ್ಟಾಗಿ ನಡೆದ ಈ ಎಲ್ಲ ಕಾರ್ಯಕ್ರಮಗಳ ಉಸ್ತುವಾರಿಯನ್ನು ಗಡಿನಾಡು ಕನ್ನಡ ಸಂಘದ ಅಧ್ಯಕ್ಷರಾದ ಸೈಯದ್ ಮನ್ಸೂರ್, ಕನ್ನಡ ಸೇನೆಯ ರಾಜು ಕೋಲಾರ, ಪ್ರಸಿದ್ಧ ವಕೀಲರಾದ ತೌಫಿಕ್ ಮೊಯಿನುದ್ದೀನ್, ಅಯೂಬ್ ಪಾರ್ಕನಳ್ಳಿ, ಡಾ,. ಆಸಿಫ್ ಮೊಕಾಶಿ, ಸಂತೋಷ್ ಕಾಮತ್, ಇಷಾಕ್ ನಿಪ್ಪಾಣಿ, ಹುಬ್ಬಳ್ಳಿ ಕಾಂಗ್ರೆಸ್ ಮುಖಂಡ ರಶೀದ್ ಮುಂತಾದವರು ವಹಿಸಿಕೊಂಡಿದ್ದರು. ಇದೆಲ್ಲದರ ಮೇಲುಸ್ತುವಾರಿಯನ್ನು ರಾಹುಲ್ ಗಾಂಧಿ ಸಾರಥ್ಯದ ಭಾರತ್ ಜೋಡೋ ಯಾತ್ರೆಯ ಉಸ್ತುವಾರಿ ಹೊತ್ತಿದ್ದ ಡಾ ಶಕೀಲ್ ನವಾಜ್ ಹೊತ್ತು, ಸಮರ್ಥವಾಗಿ ನೆರವೇರಿಸಿದರು.