ಐಸ್‌ಕ್ರೀಮ್ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಪುಟಾಣಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರ ಮನಗೆದ್ದ ಶೀತಲ ತಿನಿಸಿದು. ಆದರೆ ಮಾರುಕಟ್ಟೆಯಲ್ಲಿ ಸಿಗುವ ಕೆಲ ಐಸ್‌ಕ್ರೀಮ್‌ಗಳು, ಮನೆ ರುಚಿ ಕೊಡುವುದಿಲ್ಲ. ಆದ್ದರಿಂದ ಇವತ್ತಿನ ನಮ್ಮ ರೆಸಿಪಿಯಲ್ಲಿ ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಬಾಳೆಹಣ್ಣಿನ ಐಸ್‌ಕ್ರೀಮ್ ರೆಸಿಪಿಯನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಬೆಚ್ಚಗಿನ ಬಾದಾಮಿ ಸೂಪ್ ಸವಿದು ಆರೋಗ್ಯವಾಗಿರಿ
Advertisement
ಬೇಕಾಗುವ ಸಾಮಗ್ರಿಗಳು:
ಸಿಪ್ಪೆ ಸುಲಿದ ಬಾಳೆಹಣ್ಣು – 6
ಸಕ್ಕರೆ – 4 ಚಮಚ
ವೆನಿಲ್ಲಾ ಎಸೆನ್ಸ್ – 1 ಚಮಚ
ಕಾಯಿಸಿ ತಣ್ಣಗಾದ ಹಾಲು – 100 ಗ್ರಾಂ
ಹೆಚ್ಚಿದ ಬಾದಾಮಿ – ಸ್ವಲ್ಪ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಸಿಪ್ಪೆ ಸುಲಿದ ಬಾಳೆಹಣ್ಣನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ.
* ಬಳಿಕ ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ಅದಕ್ಕೆ 4 ಚಮಚ ಸಕ್ಕರೆ, 1 ಚಮಚ ವೆನಿಲ್ಲಾ ಎಸೆನ್ಸ್, ತಣ್ಣಗಿನ ಹಾಲು ಹಾಕಿಕೊಂಡು ಚನ್ನಾಗಿ ರುಬ್ಬಿಕೊಳ್ಳಿ.
* ನಂತರ ಈ ಮಿಶ್ರಣವನ್ನು ಒಂದು ಬಾಕ್ಸ್‌ಗೆ ಹಾಕಿಕೊಳ್ಳಿ. ಬಳಿಕ ಇದರ ಮುಚ್ಚಳ ಹಾಕಿ 4 ಗಂಟೆಗಳ ಕಾಲ ಫ್ರೀಜರ್ ಅಲ್ಲಿ ಇಡಿ.
* ಈಗ ತಣ್ಣಗಿನ ಐಸ್‌ಕ್ರೀಮ್ ತಿನ್ನಲು ರೆಡಿ. ಇದನ್ನು ಸರ್ವಿಂಗ್ ಬೌಲ್‌ನಲ್ಲಿ ಹಾಕಿಕೊಂಡು ಅದರ ಮೇಲೆ ಹೆಚ್ಚಿದ ಬಾದಾಮಿ ಹಾಕಿ ಮಕ್ಕಳಿಗೆ ಮತ್ತು ಮನೆಯವರಿಗೆ ಸವಿಯಲು ಕೊಡಿ. ಇದನ್ನೂ ಓದಿ: ಹೈಡ್ರೇಟ್ ಆಗಿರಲು ಸವಿಯಿರಿ ಕಲ್ಲಂಗಡಿ, ದಾಳಿಂಬೆಯ ಪಂಚ್
Advertisement
Web Stories