ರಾಗಿ, ಗೋಧಿ ಎಂದು ವಿಧ ವಿಧವಾದ ದೋಸೆ ಮಾಡುವ ನಾವು ಬಾಳೆಹಣ್ಣಿನ ದೋಸೆ ಮಾಡಬಹುದು. ಹಾಗೆಯೇ ಬಾಳೆಹಣ್ಣಿನ ದೋಸೆಯ ಬಗ್ಗೆ ಗೊತ್ತಾ? ಹೌದು, ಬಾಳೆಹಣ್ಣಿನ್ನು ಬಳಸಿ ನೀವು ರುಚಿ ರುಚಿಯಾದ ದೋಸೆ ಮಾಡಬಹುದು. ನೀವು ಮಕ್ಕಳಿಗೆ ಇಷ್ಟವಾಗುವ ಸಿಹಿಯಾದ ಈ ದೋಸೆಯನ್ನು ಮಾಡಲು ಟ್ರೈ ಮಾಡಿ.
Advertisement
ಬೇಕಾಗುವ ಸಾಮಗ್ರಿಗಳು:
* ಬಾಳೆಹಣ್ಣು- 8
* ಗೋಧಿ ಹಿಟ್ಟು- 1 ಕಪ್
* ರುಚಿಗೆ ತಕ್ಕಷ್ಟು ಉಪ್ಪು
* ಬೆಲ್ಲ – ಸ್ವಲ್ಪ
* ತುಪ್ಪ- ಅರ್ಧ ಕಪ್
Advertisement
ಮಾಡುವ ವಿಧಾನ:
* ಮೊದಲಿಗೆ ಬಾಳೆಹಣ್ಣನ್ನು ತೆಗೆದುಕೊಂಡು ಚನ್ನಾಗಿ ಕಿವುಚಿಕೊಂಡು ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ.
* ಬಾಳೆ ಹಣ್ಣಿನ ಪೇಸ್ಟ್‍ಗೆ ಸ್ವಲ್ಪ ಗೋಧಿ ಹಿಟ್ಟು ಹಾಗೂ ಸ್ವಲ್ಪ ನೀರನ್ನು ಹಾಕುತ್ತಾ ಕಲಸಿ. ಇದನ್ನೂ ಓದಿ: ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ
Advertisement
Advertisement
* ಉಪ್ಪು ಹಾಗೂ ಬೆಲ್ಲವನ್ನು ಸೇರಿಸಿ ಚನ್ನಾಗಿ ಕಲಸಿದ ನಂತರ ಈ ಮಿಶ್ರಣ ದೋಸೆ ಹಿಟ್ಟಿನ ಹದಕ್ಕೆ ಬರಬೇಕು. ಇದನ್ನೂ ಓದಿ: ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ
* ಗೋಧಿ ದೋಸೆಯ ಹಿಟ್ಟು ಸಿದ್ದವಾಗಿದೆ. ಈಗ ಒಂದು ಕಾವಲಿ ತೆಗೆದುಕೊಂಡು ಕಾಯಲು ಇಡಿ. ಅದಕ್ಕೆ ಮೇಲೆ ತುಪ್ಪ ಸವರಿ ದೋಸೆ ಆಕಾರದಲ್ಲಿ ಈ ಮಿಶ್ರಣವನ್ನು ಹಾಕಿದರೆ ರುಚಿಯಾದ ಬಾಳೆಹಣ್ಣಿನ ದೋಸೆ ಸವಿಯಲು ಸಿದ್ಧವಾಗುತ್ತದೆ.