ತೆಲುಗಿನ (Telugu) ಖ್ಯಾತ ನಟ ಬಾಲಯ್ಯ ನಟನೆಯ ಹೊಸ ಸಿನಿಮಾದಲ್ಲಿ ಕನ್ನಡತಿ ಶ್ರೀಲೀಲಾ (Srileela) ಪಾತ್ರ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರೀಕರಣದಲ್ಲೂ ಅವರು ಪಾಲ್ಗೊಂಡಿದ್ದಾರೆ. ಶೂಟಿಂಗ್ ಸಂದರ್ಭದಲ್ಲಿ ಶ್ರೀಲೀಲಾಗೆ ಬಾಲಯ್ಯ ಕೆನ್ನೆಗೆ ಬಾರಿಸಿದರು ಎನ್ನುವ ಸುದ್ದಿ ಸಖತ್ ಚರ್ಚೆಗೆ ಕಾರಣವಾಗಿದೆ.
ಬಾಲಯ್ಯ (Balayya) ಸಖತ್ ಕೋಪಿಷ್ಠ ಎನ್ನುವುದು ಪದೇ ಪದೇ ಸಾಬೀತಾಗಿದೆ. ಚಿತ್ರೀಕರಣದ ಸ್ಥಳದಲ್ಲಿ ಬಾಲಯ್ಯ ಯಾವತ್ತಿಗೂ ಗರಂ ಆಗಿರುತ್ತಾರೆ ಎನ್ನುವುದು ಹಲವು ಘಟನೆಗಳು ನೆನಪಿಸುತ್ತವೆ. ಆದರೆ, ಅವರು ಈವರೆಗೂ ನಟಿಯರ ಮೇಲೆ ಕೈ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ನಟಿಯೊಬ್ಬರ ಮೇಲೆ ಬಾಲಯ್ಯ ಕೈ ಮಾಡಿದ್ದಾರೆ ಎನ್ನುವುದು ಹಾಟ್ ಟಾಪಿಕ್. ಇದನ್ನೂ ಓದಿ:‘RRR’ ರೈಟರ್ ವಿಜೇಂದ್ರ ಪ್ರಸಾದ್ ಜೊತೆ ಕೇದರನಾಥ್‌ಗೆ ಕಂಗನಾ ಭೇಟಿ
ಶೂಟಿಂಗ್ ಸ್ಥಳದಲ್ಲಿ ಇದ್ದವರ ಮಾಹಿತಿ ಪ್ರಕಾರ, ಅದು ಕೋಪದಿಂದ ಹೊಡೆದ ಘಟನೆಯಲ್ಲವಂತೆ. ಅಂಥದ್ದೊಂದು ದೃಶ್ಯ ಸಿನಿಮಾದಲ್ಲಿತ್ತು ಎಂದು ಹೇಳಲಾಗುತ್ತಿದೆ. ಬಾಲಯ್ಯ ಕುಟುಂಬದ ಸೊಸೆಯಾಗಿ ಶ್ರೀಲೀಲಾ ನಟಿಸುತ್ತಿದ್ದಾರೆ. ಸೊಸೆಯನ್ನು ಹೊಡೆಯುವಂತಹ ಸನ್ನಿವೇಶ ಅದಾಗಿತ್ತು ಎಂದು ಹೇಳಲಾಗುತ್ತಿದೆ.
ಅಷ್ಟಕ್ಕೂ ಶ್ರೀಲೀಲಾ ಅವರೇ ದೃಶ್ಯ ನೈಜವಾಗಿ ಬರಲಿ ಎನ್ನುವ ಕಾರಣಕ್ಕಾಗಿ ಜೋರಾಗಿ ಕೆನ್ನೆಗೆ ಬಾರಿಸಿ ಎಂದು ಬಾಲಯ್ಯನವರನ್ನು ಕೇಳಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಇದರಲ್ಲಿ ಯಾವುದು ನಿಜವೋ ಯಾವುದು ಸುಳ್ಳು ಎನ್ನುವುದನ್ನು ಅವರೇ ಸ್ಪಷ್ಟ ಪಡಿಸಬೇಕು.