Bhagavanth Kesari: ಬಾಲಯ್ಯ ಜೊತೆ ಜಬರ್‌ದಸ್ತ್‌ ಆಗಿ ಹೆಜ್ಜೆ ಹಾಕಿದ ಶ್ರೀಲೀಲಾ

Public TV
1 Min Read
sreeleela

ಶ್ರೀಲೀಲಾಗೆ(Sreeleela) ಹೊಸ ಚಿಕ್ಕಪ್ಪ ಸಿಕ್ಕಿದ್ದಾನೆ. ಕನ್ನಡ ನೆಲದಿಂದ ತೆಲುಗು (Tollywood) ಮಣ್ಣಿಗೆ ಹಾರಿದ ಈ ಹುಡುಗಿಗೆ ನೋಡನೋಡುತ್ತಲೇ ಒಬ್ಬ ಸ್ಟಾರ್ ಹೀರೋ ‘ಕೂಸೇ’ ಎಂದು ಕರೆದಿದ್ದಾನೆ. ಇದೇನಾಯಿತು ಶ್ರೀಲೀಲಾ ಬಣ್ಣದ ಲೋಕದ ಬದುಕಿನಲ್ಲಿ? ಮಗಳೆ ಹೀಗಂತ ಕೂಗಿ ಕೇಕೆ ಹಾಕಿ ಕುಣಿದಿದ್ದು ಯಾವ ಹೀರೋ? ಇಲ್ಲಿದೆ ಮಾಹಿತಿ.

sreeleela 1 1

ಶ್ರೀಲೀಲಾ ಕೆಮ್ಮಿದರೂ ಟಾಲಿವುಡ್‌ನಲ್ಲಿ ಸುದ್ದಿಯಾಗುತ್ತದೆ. ಮುಟ್ಟಿದ್ದೆಲ್ಲ ಚಿನ್ನ ಅಂತಾರಲ್ಲ.ಹಾಗೆ ಈ ಹುಡುಗಿ ಮಾಡಿದ್ದೆಲ್ಲ ಸಿನಿಮಾ ಹಿಟ್ ಲಿಸ್ಟ್‌ಗೆ ಅನಿವಾರ್ಯವಾಗಿ ಸೇರುವಂತಾಗಿದೆ. ಎರಡೇ ಸಿನಿಮಾಕ್ಕೆ ಲೇಡಿ ಸೂಪರ್‌ಸ್ಟಾರ್ ಪಟ್ಟಕ್ಕೇರಲು ಸಜ್ಜಾಗಿದ್ದಾರೆ. ಇದೀಗ ಬಾಲಕೃಷ್ಣ ಜೊತೆ ಭಗವಂತ ಕೇಸರಿ(Bhagavanth Kesari) ಚಿತ್ರದಲ್ಲಿ ಪಾತ್ರ ಮಾಡುತ್ತಿದ್ದಾರೆ. ಅದರ ಹಾಡು ಇದೀಗ ರಿಲೀಸ್ ಆಗಿದೆ. ಅದೇ ಗಣೇಶ ಹಬ್ಬದ ಸುತ್ತ ಚಿತ್ರಿಸಲಾದ ಹಾಡಿನಲ್ಲಿ ಶ್ರೀಲೀಲಾ ಹಾಗೂ ಬಾಲಕೃಷ್ಣ(Balakrishna), ಮಗಳು- ಚಿಕ್ಕಪ್ಪನಾಗಿ ಮಸ್ತ್‌ ಆಗಿ ಡ್ಯಾನ್ಸ್‌ ಮಾಡಿದ್ದಾರೆ. ಇದನ್ನೂ ಓದಿ:ಮತ್ತೆ ನಿರ್ದೇಶನಕ್ಕಿಳಿದ ಸುದೀಪ್- ಕಿಚ್ಚನ ಕೈಜೋಡಿಸಿದ KRG Studios

 

View this post on Instagram

 

A post shared by Anil Ravipudi (@anilravipudi)

ಇದುವರೆಗೆ ಹೀರೋ ಜೊತೆ ಕುಣಿದಿದ್ದ ಶ್ರೀಲೀಲಾ ಇದೇ ಮೊದಲ ಬಾರಿಗೆ ಸ್ಟಾರ್ ಹೀರೋ ಕಮ್ ಚಿಕ್ಕಪ್ಪ ಬಾಲಕೃಷ್ಣ ಜೊತೆ ಹೆಜ್ಜೆ ಹಾಕಿದ್ದಾರೆ. ಭಗವಂತ ಕೇಸರಿ ಸಿನಿಮಾ ಶ್ರೀಲೀಲಾ ವೃತ್ತಿ ಬದುಕಿಗೆ ಹೊಸ ದಿಕ್ಕು ತೋರಿಸುವುದು ಖಚಿತ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಕಿಸ್ ಬೆಡಗಿಯ ಕಿಸ್ಮತ್ ಬದಲಿಸಲಿದೆ.

ಇತ್ತೀಚಿಗೆ ಸ್ಕಂದ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬಾಲಯ್ಯ ಭಾಗಿಯಾಗಿದ್ದರು. ನಟನೆ, ಡ್ಯಾನ್ಸ್, ಆಕೆಯ ಸ್ವಭಾವ ಎಲ್ಲಾ ನೋಡಿ ಶ್ರೀಲೀಲಾ ಸರಸ್ವತಿ ದೇವಿಯ ವರಪ್ರಸಾದ ಎಂದು ಹಾಡಿಹೊಗಳಿದ್ದರು. ಈ ಬೆನ್ನಲ್ಲೇ ಭಗವಂತ ಕೇಸರಿ ಸಿನಿಮಾದಲ್ಲಿ ಬಾಲಯ್ಯ ಜೊತೆ ಲೀಲಾ ಜಬರ್‌ದಸ್ತ್ ಆಗಿ ಡ್ಯಾನ್ಸ್ ಮಾಡಿರೋದು ಸಖತ್ ಸದ್ದು ಮಾಡ್ತಿದೆ.

Share This Article