ಬೇಕರಿಯಲ್ಲಿ ಸಿಗುವ ಮಸಾಲಾ ಬಿಸ್ಕತ್ತುಗಳನ್ನು ಇಷ್ಟಪಡದವರು ಯಾರೂ ಇಲ್ಲ. ಇದು ನಮ್ಮ ಬಾಲ್ಯವನ್ನು ಯಾವಾಗಲೂ ನೆನಪಿಸುತ್ತಿರುತ್ತದೆ. ನಾವಿಂದು ಬೇಕರಿಯಲ್ಲಿ ಸಿಗುವ ಮಸಾಲಾ ಬಿಸ್ಕತ್ತನ್ನು (Masala Biscuits) ಮನೆಯಲ್ಲೇ ಹೇಗೆ ಮಾಡಬಹುದು ಎಂಬುದನ್ನು ಹೇಳಿಕೊಡುತ್ತೇವೆ. ಗರಿಗರಿಯಾದ, ಸ್ವಲ್ಪ ಖಾರವೂ ಆದ ಬಿಸ್ಕತ್ತನ್ನು ನೀವು ಚಹಾದೊಂದಿಗೆ ಸವಿಯಬಹುದು.
Advertisement
ಬೇಕಾಗುವ ಪದಾರ್ಥಗಳು:
ಮೈದಾ ಹಿಟ್ಟು – 2 ಕಪ್
ಬೆಣ್ಣೆ – ಅರ್ಧ ಕಪ್
ಮೊಸರು – 2 ಟೀಸ್ಪೂನ್
ಸಕ್ಕರೆ – 4 ಟೀಸ್ಪೂನ್
ಉಪ್ಪು – 1 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 2
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಕರಿಬೇವಿನ ಎಲೆ – ಕೆಲವು ಇದನ್ನೂ ಓದಿ: ಚಹಾದೊಂದಿಗೆ ಮಾಡಿ ಸವಿಯಿರಿ ರುಚಿರುಚಿಯಾದ ಗೆಣಸಿನ ಕಟ್ಲೆಟ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಸಕ್ಕರೆಯನ್ನು ಮಿಕ್ಸರ್ ಜಾರ್‌ಗೆ ಹಾಕಿ ಚೆನ್ನಾಗಿ ಪುಡಿ ಮಾಡಿ.
* ಒಂದು ಪಾತ್ರೆಗೆ ಜರಡಿ ಹಿಡಿದು, ಅದಕ್ಕೆ ಮೈದಾ, ಉಪ್ಪು, ಸಕ್ಕರೆ ಹಾಕಿ ಮಿಶ್ರಣ ಮಾಡಿ.
* ಈಗ ಮಿಶ್ರಣಕ್ಕೆ ಬೆಣ್ಣೆ ಹಾಕಿ, ಸಕ್ಕರೆ ಕರಗುವವರೆಗೆ ಮಿಶ್ರಣ ಮಾಡಿ.
* ಈಗ ಒಂದೂವರೆ ಟೀಸ್ಪೂನ್ ಮೊಸರು ಸೇರಿಸಿ, ಬೀಟ್ ಮಾಡುವುದನ್ನು ಮುಂದುವರಿಸಿ.
* ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ ಹಾಗೂ ಕೊತ್ತಂಬರಿ ಸೊಪ್ಪನ್ನು ಸೇರಿಸಿ, ನಿಧಾನವಾಗಿ ಮಿಶ್ರಣ ಮಾಡಿ.
* ಮಿಶ್ರಣ ಪುಡಿಪುಡಿಯಾಗಿದ್ದರೆ, ಉಳಿದ ಮೊಸರನ್ನು ಸೇರಿಸಿ, ಮಿಶ್ರಣ ಮಾಡಿ.
* ಈಗ ಮಿಶ್ರಣಕ್ಕೆ ವಿಶ್ರಾಂತಿ ನೀಡಲು ಪಾತ್ರೆಯನ್ನು ಬಟ್ಟಲಿನಿಂದ ಮುಚ್ಚಿ, 10-15 ನಿಮಿಷ ಪಕ್ಕಕ್ಕಿಡಿ.
* ಈ ವೇಳೆ ಓವನ್ ಅನ್ನು 160 ಡಿಗ್ರಿಗಳಲ್ಲಿ 10 ನಿಮಿಷಗಳ ಕಾಲ ಮೊದಲೇ ಕಾಯಿಸಿಕೊಳ್ಳಿ.
Advertisement
* ಈಗ ಹಿಟ್ಟಿನ ಸಣ್ಣ ಸಣ್ಣ ಭಾಗಗಳನ್ನು ತೆಗೆದುಕೊಂಡು, ನಿಮ್ಮಿಷ್ಟದ ಬಿಸ್ಕತ್ತಿನ ಆಕಾರವನ್ನು ನೀಡಿ.
* ಬೇಕಿಂಗ್ ಶೀಟ್ ಮೇಲೆ ಬಟರ್ ಪೇಪರ್ ಹರಡಿ, ಅದರ ಮೇಲೆ ಬಿಸ್ಕತ್ತುಗಳನ್ನು ಜೋಡಿಸಿ. ಫೋರ್ಕ್ ಬಳಸಿ, ಬಿಸ್ಕತ್ತುಗಳ ಮೇಲೆ 2-3 ಬಾರಿ ಒತ್ತಿ ತೂತುಗಳನ್ನು ಮಾಡಿ.
* ಈಗ ಬಿಸ್ಕತ್ತುಗಳನ್ನು 180 ಡಿಗ್ರಿ ತಾಪದಲ್ಲಿ 10 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
* 10 ನಿಮಿಷಗಳ ಬಳಿಕ ಬಿಸ್ಕತ್ತುಗಳನ್ನು ಓವನ್‌ನಿಂದ ಹೊರ ತೆಗೆದು, 170 ಡಿಗ್ರಿ ತಾಪವನ್ನು ಹೊಂದಿಸಿ, ಮತ್ತೊಮ್ಮೆ 8-10 ನಿಮಿಷಗಳ ವರೆಗೆ ಬೇಯಿಸಿ.
* ಬಿಸ್ಕತ್ತುಗಳನ್ನು ಓವನ್‌ನಿಂದ ಹೊರ ತೆಗೆದು, ಆರಲು ಬಿಡಿ.
* ಇದೀಗ ಬೇಕರಿಯಲ್ಲಿ ಸಿಗುವಂತಹ ಮಸಾಲಾ ಬಿಸ್ಕತ್ತು ತಯಾರಾಗಿದ್ದು, ಸವಿಯಲು ಸಿದ್ದವಾಗಿದೆ. ಇದನ್ನು ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿಟ್ಟರೆ ಬೇಕೆನಿಸಿದಾಗ ಸವಿಯಬಹುದು. ಇದನ್ನೂ ಓದಿ: ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದು ಟೇಸ್ಟಿ ಆಲೂಗಡ್ಡೆ ರವಾ ಫ್ರೈ